IPL 2024: ಮುಂದಿನ ಐಪಿಎಲ್ ಆಡ್ತಾರಾ ಎಂಎಸ್ ಧೋನಿ?; ಸಿಎಸ್‌ಕೆ ಬ್ಯಾಟಿಂಗ್ ಕೋಚ್ ಹೇಳಿದ್ದೇನು?
ಮೇ 17 ಶುಕ್ರವಾರ, 2024ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಅಂತಿಮ ಘಟ್ಟ ತಲುಪಿದ್ದು, ಪ್ಲೇ ಆಫ್‌ಗೆ ಈಗಾಗಲೇ 3 ತಂಡಗಳು ಫಿಕ್ಸ್ ಆಗಿವೆ. ಕೊನೆ ಒಂದು ಸ್ಥಾನಕ್ಕೆ ಮೂರು ತಂಡಗಳ ನಡುವೆ ಪ್ರಬಲ ಪೈಪೋಟಿ ಏರ್ಪಟ್ಟಿದೆ.
ನಾಳೆ (ಮೇ 18) ತವರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಹಾಗು ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ನಡುವೆ ಹೈವೋಲ್ಟೇಜ್ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ಗೆದ್ದವರು ಪ್ಲೇ ಆಫ್‌ಗೆ ಆರ್ಹತೆ ಪಡೆಯಲಿದ್ದಾರೆ. ಇನ್ನೊಂದೆಡೆ ಈ ಪಂದ್ಯ ನೋಡಲು ಅಭಿಮಾನಿಗಳು ಉತ್ಸಾಹದಿಂದ ಕಾಯುತ್ತಿದ್ದಾರೆ.

ಆದರೆ, ಈ ಋತುವಿನ ಐಪಿಎಲ್ ಮೂಲಕ ಹಲವು ಆಟಗಾರರು ತಮ್ಮ ಕ್ರಿಕೆಟ್ ವೃತ್ತಿಜೀವನಕ್ಕೆ ವಿದಾಯ ಹೇಳಲಿದ್ದಾರೆ ಎಂಬ ವಿಷಯ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಸೃಷ್ಟಿಸಿದೆ. ಮುಂಬೈ ಇಂಡಿಯನ್ಸ್ ಬ್ಯಾಟರ್ ರೋಹಿತ್ ಶರ್ಮಾ, ಆರ್‌ಸಿಬಿ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಈಗಾಗಳಲೇ ತಮ್ಮ ನಿವೃತ್ತಿ ಬಗ್ಗೆ ಅಭಿಮಾನಿಗಳಲ್ಲಿ ಇದ್ದ ಗೊಂದಲಕ್ಕೆ ತೆರೆ ಎಳೆದಿದ್ದಾರೆ.
ಇದರೊಂದಿಗೆ ಸಿಎಸ್‌ಕೆ ಮಾಜಿ ನಾಯಕ ಎಂಎಸ್ ಧೋನಿ ಅವರು ತಮ್ಮ ಕೊನೆಯ ಐಪಿಎಲ್ ಆವೃತ್ತಿಯನ್ನು ಆಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಆರ್‌ಸಿಬಿ ಎದುರು ಆಡಲಿರುವ ಪಂದ್ಯದ ಬಳಿಕ ಧೋನಿ ಸಂಪೂರ್ಣ ಕ್ರಿಕೆಟ್‌ನಿಂದ ದೂರ ಉಳಿಯುವ ಚಿಂತನೆಯಲ್ಲಿದ್ದಾರೆ ಎನ್ನಲಾಗಿದೆ.
ಈ ಎಲ್ಲ ಪ್ರಶ್ನೆಗಳಿಗೆ ಇದೀಗ ಉತ್ತರ ಸಿಕ್ಕಿದೆ. ಮುಂದಿನ ಋತುವಿನಲ್ಲಿ ಧೋನಿ ಮೈದಾನದಲ್ಲಿ ಕ್ರಿಕೆಟ್ ಆಡುತ್ತಾರೋ? ಇಲ್ಲವೋ? ಎಂದು ಚೆನ್ನೈ ಸೂಪರ್ ಕಿಂಗ್ಸ್ ಬ್ಯಾಟಿಂಗ್ ಕೋಚ್ ಮೈಕಲ್ ಹಸ್ಸಿ ಸ್ಪಷ್ಟಪಡಿಸಿದ್ದಾರೆ.
ಇಎಸ್‌ಪಿಎನ್‌ನ 'ಅರೌಂಡ್ ದಿ ವಿಕೆಟ್' ಶೋನಲ್ಲಿ ಧೋನಿ ಮುಂದಿನ ವರ್ಷ ಐಪಿಎಲ್‌ಗೆ ಮರಳುತ್ತಾರೆಯೇ ಎಂಬ ಪ್ರಶ್ನೆಗೆ ಹಸ್ಸಿ ಉತ್ತರಿಸಿದ್ದಾರೆ. ಧೋನಿ ಮುಂದಿನ ಕೆಲವು ವರ್ಷಗಳ ಕಾಲ ಆಟ ಮುಂದುವರಿಸಬಹುದು. ಧೋನಿ ಅವರ ಹೆಚ್ಚುತ್ತಿರುವ ವಯಸ್ಸು ಮತ್ತು ಅವರ ಫಿಟ್ನೆಸ್ ಅನ್ನು ಗಮನದಲ್ಲಿಟ್ಟುಕೊಂಡು ಇದು ಧೋನಿಯ ಕೊನೆಯ ಐಪಿಎಲ್ ಎಂದು ಹೇಳಲು ಸಾಧ್ಯವಿಲ್ಲ.
ಧೋನಿ ಈ ವಿಷಯವನ್ನು ತಮ್ಮ ಎದೆಯಲ್ಲಿಯೇ ಇಟ್ಟುಕೊಂಡು ಹೋಗುತ್ತಿದ್ದು, ಅವರಿನ್ನೂ ಮುಂದೆ ಸಾಗಲಿದ್ದಾರೆ ಎಂಬ ನಿರೀಕ್ಷೆ ಇದೆ.ಅದ್ಭತವಾಗಿ ಬ್ಯಾಟಿಂಗ್ ಮಾಡುತ್ತಿರುವ ಧೋನಿ ಅದರ ತಯಾರಿಯನ್ನು ಚೆನ್ನಾಗಿ ಮಾಡಿಕೊಂಡಿದ್ದಾರೆ.
ಟೂರ್ನಿಯ ಆರಂಭಕ್ಕೂ ಮೊದಲೇ ಕ್ಯಾಂಪ್‌ಗೆ ಬಂದಿದ್ದ ಅವರು ದೊಡ್ಡ ಹೊಡೆತಗಳನ್ನು ಹೊಡೆದಿದ್ದರು. ಈ ಹಿಂದಿನ ಸೀಸನ್‌ಗಿಂತಲೂ ಅವರು ಈ ಬಾರಿ ಅತ್ಯುತ್ತಮವಾಗಿ ಕಾಣುತ್ತಿದ್ದಾರೆ. ದೇಹಕ್ಕೆ ಸಂಬಂಧಿಸಿದ ವಿಷಯಗಳನ್ನು ನಾವು ನಿರ್ವಹಿಸಬೇಕಾದ ಅಗತ್ಯವಿದೆ.
ಕಳೆದ ಆವೃತ್ತಿಯ ಬಳಿಕ ಅವರಿಗೆ ಮೊಣಕಾಲು ಶಸ್ತ್ರ ಚಿಕಿತ್ಸೆಯಾಗಿದೆ. ಆರಂಭದಿಂದಲೂ ಅವರು ಇದನ್ನು ನಿರ್ವಹಿಸಿಕೊಂಡು ಬಂದಿದ್ದಾರೆ. ಇದರ ಹೊರತಾಗಿಯೂ ಅವರು ಅತ್ಯುತ್ತಮವಾಗಿ ಬ್ಯಾಟ್ ಮಾಡುತ್ತಿದ್ದಾರೆ ಮೈಕಲ್ ಹಸ್ಸಿ ಹೇಳಿದ್ದಾರೆ.
ಈಗಾಗಲೇ ಸಿಎಸ್‌ಕೆ ತಂಡದ ನಾಯಕತ್ವ ತ್ಯಜಿಸಿರುವ ಧೋನಿ, ಈ ಋತುವಿನ ನಂತರ ಕ್ರಿಕೆಟ್ ಗೆ ವಿದಾಯ ಹೇಳಬಹುದು. ಡೆತ್ ಓವರ್‌ಗಳಲ್ಲಿ ಬ್ಯಾಟಿಂಗ್‌ಗೆ ಬರುವ ಧೋನಿ 10 ಇನ್ನಿಂಗ್ಸ್‌ಗಳಲ್ಲಿ 226.66 ಸ್ಟ್ರೈಕ್ ರೇಟ್‌ನೊಂದಿಗೆ 136 ರನ್ ಗಳಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications