Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಈ ಕಾರಣದಿಂದಲೇ ಸುರೇಶ್ ರೈನಾರನ್ನು ಮೆಗಾ ಹರಾಜಿನಲ್ಲಿ ಖರೀದಿಸಲಿಲ್ಲ ಎಂದ ಚೆನ್ನೈ ಸೂಪರ್ ಕಿಂಗ್ಸ್ ಸಿಇಒ!

CSK CEO Kasi Viswanath reveals why they didnt purchase Suresh Raina in IPL 2022 mega auction

ಮುಂಬರುವ ಮಾರ್ಚ್ ಅಥವಾ ಏಪ್ರಿಲ್ ತಿಂಗಳಿನಲ್ಲಿ ಆರಂಭವಾಗಲಿರುವ ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಇತ್ತೀಚೆಗಷ್ಟೆ ನಡೆದ ಮೆಗಾ ಹರಾಜಿನ ಕಾರಣದಿಂದಾಗಿ ಸಾಕಷ್ಟು ಸದ್ದು ಮಾಡುತ್ತಿದೆ. ಹೌದು, ಕಳೆದ ಶನಿವಾರ ಹಾಗೂ ಭಾನುವಾರದಂದು ಬೆಂಗಳೂರಿನಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ 2022 ಆಟಗಾರರ ಮೆಗಾ ಹರಾಜು ಸದ್ಯ ದೊಡ್ಡಮಟ್ಟದ ಚರ್ಚೆಗಳಿಗೆ ಕಾರಣವಾಗಿದೆ.

ಈ ಮೆಗಾ ಹರಾಜು ಪ್ರಕ್ರಿಯೆಯಲ್ಲಿ ಒಟ್ಟು 590 ಆಟಗಾರರು ಭಾಗವಹಿಸಿದ್ದು, 203 ಆಟಗಾರರು ಯಶಸ್ವಿಯಾಗಿ ಬಿಕರಿಯಾಗಿದ್ದಾರೆ. ಹೀಗೆ ಯಶಸ್ವಿಯಾಗಿ ಹರಾಜಾದ ಆಟಗಾರರ ಪೈಕಿ 66 ವಿದೇಶಿ ಆಟಗಾರರಿದ್ದರೆ, ಇನ್ನುಳಿದ 137 ಆಟಗಾರರು ಭಾರತೀಯರಾಗಿದ್ದಾರೆ. ಹರಾಜಿನಲ್ಲಿ 15.25 ಕೋಟಿಗೆ ಮುಂಬೈ ಇಂಡಿಯನ್ಸ್ ತಂಡಕ್ಕೆ ಇಶಾನ್ ಕಿಶನ್ ಬಿಕರಿಯಾದರೆ, ಯುವ ಕ್ರಿಕೆಟಿಗ ದೀಪಕ್ ಚಹಾರ್ 14 ಕೋಟಿಗೆ ಚೆನ್ನೈ ಸೂಪರ್ ಕಿಂಗ್ಸ್ ಪಾಲಾದರು. ಅಷ್ಟೇ ಅಲ್ಲದೆ ಶ್ರೇಯಸ್ ಅಯ್ಯರ್, ಶಾರ್ದೂಲ್ ಠಾಕೂರ್ ಮತ್ತು ಹರ್ಷಲ್ ಪಟೇಲ್ ಕೂಡ ದೊಡ್ಡ ಮೊತ್ತಕ್ಕೆ ಬಿಕರಿಯಾದರು. ಹೀಗೆ ಯುವ ಕ್ರಿಕೆಟಿಗರು ಕೋಟಿ ಕೋಟಿ ಬಾಚಿಕೊಂಡರೆ ಮಿಸ್ಟರ್ ಐಪಿಎಲ್ ಎಂದೇ ಖ್ಯಾತಿಯನ್ನು ಪಡೆದಿರುವ ಸುರೇಶ ರೈನಾ ಮಾತ್ರ ಯಾವ ತಂಡಕ್ಕೂ ಕೂಡ ಬೇಡವಾದರು. ಹೌದು, ಮಿಸ್ಟರ್ ಐಪಿಎಲ್, ಪವರ್ ಹಿಟ್ಟರ್ ಎಂದು ಹೆಸರನ್ನು ಮಾಡಿದ್ದ ಸುರೇಶ್ ರೈನಾರನ್ನು ಖರೀದಿಸಲು ಹತ್ತು ಫ್ರಾಂಚೈಸಿಗಳ ಪೈಕಿ ಯಾರೂ ಸಹ ಮುಂದೆ ಬರದೇ ಇರುವುದು ದೊಡ್ಡ ಮಟ್ಟದ ಆಶ್ಚರ್ಯಕ್ಕೆ ಕಾರಣವಾಯಿತು.

ಅದರಲ್ಲಿಯೂ ಚೆನ್ನೈ ಸೂಪರ್ ಕಿಂಗ್ಸ್ ನಿಷೇಧವಾಗಿದ್ದ ವರ್ಷಗಳನ್ನು ಹೊರತುಪಡಿಸಿ ಐಪಿಎಲ್ ಉದ್ಘಾಟನಾ ಆವೃತ್ತಿಯಿಂದ ಕಳೆದ ಬಾರಿಯ ಆವೃತ್ತಿಯವರೆಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಕಣಕ್ಕಿಳಿದಿದ್ದ ಸುರೇಶ್ ರೈನಾರನ್ನು ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಖರೀದಿಸಲು ಯತ್ನಿಸದೇ ಇರುವುದು ಅಭಿಮಾನಿಗಳ ಬೇಸರ ಹಾಗೂ ಆಕ್ರೋಶಕ್ಕೂ ಕೂಡ ಎಡೆಮಾಡಿಕೊಟ್ಟಿದೆ. ತಂಡದ ಯಶಸ್ಸಿನಲ್ಲಿ ದೊಡ್ಡ ಮಟ್ಟದ ಕೊಡುಗೆಯನ್ನು ನೀಡಿದ್ದ ಸುರೇಶ್ ರೈನಾರನ್ನು ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಯಾಕೆ ಖರೀದಿಸಲಿಲ್ಲ ಎಂಬ ದೊಡ್ಡ ಪ್ರಶ್ನೆ ಕ್ರಿಕೆಟ್ ಅಭಿಮಾನಿಗಳನ್ನು ಕಾಡುತ್ತಿತ್ತು. ಇದೀಗ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯ ಸಿಇಒ ಕಾಶಿ ವಿಶ್ವನಾಥನ್ ಈ ಕುರಿತಾಗಿ ಮಾತನಾಡಿದ್ದು, ಸುರೇಶ್ ರೈನಾರನ್ನು ಖರೀದಿಸದೇ ಇರಲು ಅಸಲಿ ಕಾರಣವೇನು ಎಂಬುದನ್ನು ಈ ಕೆಳಕಂಡಂತೆ ತಿಳಿಸಿದ್ದಾರೆ.

ರೈನಾರನ್ನು ಖರೀದಿಸದೇ ಇರಲು ಇದೇ ಕಾರಣ

ರೈನಾರನ್ನು ಖರೀದಿಸದೇ ಇರಲು ಇದೇ ಕಾರಣ

ಸುರೇಶ್ ರೈನಾ ಹಲವಾರು ವರ್ಷಗಳಿಂದ ತಮ್ಮ ತಂಡದ ಪರ ಸ್ಥಿರವಾಗಿ ಉತ್ತಮ ಪ್ರದರ್ಶನವನ್ನು ನೀಡುತ್ತಾ ಬಂದಿರುವ ಆಟಗಾರ ಎಂದು ಕಾಶಿ ವಿಶ್ವನಾಥನ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದರೆ ಈ ಬಾರಿಯ ಮೆಗಾ ಹರಾಜಿನಲ್ಲಿ ಸುರೇಶ್ ರೈನಾರನ್ನು ಖರೀದಿಸದೆ ಇದ್ದದ್ದು ಒಂದು ಕಠಿಣ ನಿರ್ಧಾರ ಎಂದಿರುವ ಕಾಶಿ ವಿಶ್ವನಾಥನ್ ತಮ್ಮ ಫ್ರಾಂಚೈಸಿ ತಂಡ ಹೇಗಿರಬೇಕು, ಯಾವ ರೀತಿಯ ಫಾರ್ಮ್ ಹೊಂದಿರುವ ಆಟಗಾರರನ್ನು ಖರೀದಿಸಬೇಕು ಎಂದು ಹಾಕಿಕೊಳ್ಳಲಾಗಿದ್ದ ಯೋಜನೆಗೆ ಸುರೇಶ್ ರೈನಾ ಹೊಂದಿಕೊಳ್ಳುತ್ತಿರಲಿಲ್ಲ, ಹೀಗಾಗಿ ಅವರನ್ನು ಆಯ್ಕೆ ಮಾಡಲಿಲ್ಲ ಎಂದಿದ್ದಾರೆ. ಈ ಮೂಲಕ ಸುರೇಶ್ ರೈನಾ ಇತ್ತೀಚಿನ ದಿನಗಳಲ್ಲಿ ಫಾರ್ಮ್ ಕಳೆದುಕೊಂಡಿರುವುದು ಮೆಗಾ ಹರಾಜಿನಲ್ಲಿ ಬಿಕರಿಯಾಗದೇ ಉಳಿಯಲು ಕಾರಣವಾಗಿದೆ ಎಂಬುದನ್ನು ಕಾಶಿ ವಿಶ್ವನಾಥನ್ ಪರೋಕ್ಷವಾಗಿ ತಿಳಿಸಿದ್ದಾರೆ.

ರೈನಾ ಮತ್ತು ಫಾಫ್ ಡು ಪ್ಲೆಸಿಸ್ ಇಬ್ಬರನ್ನೂ ನಾವು ಮಿಸ್ ಮಾಡಿಕೊಳ್ಳುತ್ತೇವೆ

ರೈನಾ ಮತ್ತು ಫಾಫ್ ಡು ಪ್ಲೆಸಿಸ್ ಇಬ್ಬರನ್ನೂ ನಾವು ಮಿಸ್ ಮಾಡಿಕೊಳ್ಳುತ್ತೇವೆ

ಇನ್ನೂ ಮುಂದುವರಿದು ಮಾತನಾಡಿರುವ ಕಾಶಿ ವಿಶ್ವನಾಥನ್ ಸುರೇಶ್ ರೈನಾ ಮತ್ತು ಆರಂಭಿಕ ಆಟಗಾರನಾದ ಫಾಫ್ ಡು ಪ್ಲೆಸಿಸ್ ಈ ಇಬ್ಬರನ್ನೂ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಮಿಸ್ ಮಾಡಿಕೊಳ್ಳಲಿದೆ ಎಂದು ಹೇಳಿಕೆಯನ್ನು ನೀಡಿದ್ದಾರೆ. ಸುರೇಶ್ ರೈನಾ ಮೆಗಾ ಹರಾಜಿನಲ್ಲಿ ಯಾವ ತಂಡದಿಂದಲೂ ಖರೀದಿಸಲ್ಪಡದೇ ಇದ್ದರೆ, ಅತ್ತ ಫಾಫ್ ಡು ಪ್ಲೆಸಿಸ್ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ 7 ಕೋಟಿಗೆ ಖರೀದಿಸಿದೆ.

RCB ಆಟಗಾರರ ಕಾಂಬಿನೇಷನ್ ನೋಡಿದ್ರೆ ಗ್ಯಾರೆಂಟಿ ಕಪ್ ನಮ್ದೇ | Oneindia Kannada
ಚೆನ್ನೈ ಸೂಪರ್ ಕಿಂಗ್ಸ್ ತಂಡ

ಚೆನ್ನೈ ಸೂಪರ್ ಕಿಂಗ್ಸ್ ತಂಡ

ಈ ಬಾರಿಯ ಮೆಗಾ ಹರಾಜು ಪ್ರಕ್ರಿಯೆ ಸಂಪೂರ್ಣವಾಗಿ ಮುಕ್ತಾಯಗೊಂಡ ನಂತರ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಸ್ಥಾನ ಪಡೆದುಕೊಂಡಿರುವ ಆಟಗಾರರೆಂದರೆ: ರವೀಂದ್ರ ಜಡೇಜಾ, ಎಂಎಸ್ ಧೋನಿ, ಮೊಯಿನ್ ಅಲಿ, ರುತುರಾಜ್ ಗಾಯಕ್ವಾಡ್, ಡ್ವೇನ್ ಬ್ರಾವೋ, ಅಂಬಟಿ ರಾಯುಡು, ರಾಬಿನ್ ಉತ್ತಪ್ಪ, ದೀಪಕ್ ಚಹಾರ್, ಕೆಎಂ ಆಸಿಫ್, ತುಷಾರ್ ದೇಶಪಾಂಡೆ, ಕೆಎಂ ಆಸಿಫ್, ಶಿವಂ ದುಬೆ, ಮಹೇಶ್ ತೀಕ್ಷಣ, ರಾಜವರ್ಧನ್ ಹಂಗರ್ಗೇಕರ್, ಸಮರ್ಜಿತ್ ಸಿಂಗ್, ದ್ವಾನೆ ಸಿಂಗ್ ಮಿಚೆಲ್ ಸ್ಯಾಂಟ್ನರ್, ಸುಭ್ರಾಂಶು ಸೇನಾಪತಿ, ಆಡಮ್ ಮಿಲ್ನೆ, ಮುಖೇಶ್ ಚೌಧರಿ, ಪ್ರಶಾಂತ್ ಸೋಲಂಕಿ, ಸಿ ಹರಿ ನಿಶಾಂತ್, ಎನ್ ಜಗದೀಸನ್, ಕ್ರಿಸ್ ಜೋರ್ಡಾನ್, ಕೆ ಭಗತ್ ವರ್ಮಾ.

Story first published: Tuesday, February 15, 2022, 9:48 [IST]
Other articles published on Feb 15, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+