ಧೋನಿ 10 ಓವರ್‌ಗಳಿದ್ದಾಗ ಏಕೆ ಬ್ಯಾಟ್ ಮಾಡಲು ಬರುವುದಿಲ್ಲ? ಇಲ್ಲಿದೆ ಕೋಚ್ ನೀಡಿದ ಉತ್ತರ
ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪಡೆ 6 ರನ್‌ಗಳಿಂದ ಸೋಲು ಕಂಡಿದೆ. ಗುವಾಹಟಿಯಲ್ಲಿ ನಡೆದ ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡಿದ ರಾಜಸ್ಥಾನ ಅಬ್ಬರಿಸಿದೆ. ಈ ವೇಳೆ ಮಹೇಂದ್ರ ಸಿಂಗ್ ಧೋನಿ ಬ್ಯಾಟಿಂಗ್ ಕ್ರಮಾಂಕದ ಬಗ್ಗೆ ಹಲವು ಪ್ರಶ್ನೆಗಳು ಎದ್ದಿದ್ದವು. ಮಾಹಿ ಏಕೆ ಮೇಲಿನ ಕ್ರಮಾಂಕದಲ್ಲಿ ಬ್ಯಾಟ್ ಮಾಡುವುದಿಲ್ಲ ಎಂಬ ಬಗ್ಗೆ ಅಭಿಮಾನಿಗಳು ಸಾಲು ಸಾಲು ಪ್ರಶ್ನೆಗಳು ಮಾಡುತ್ತಾ ಇದ್ದಾರೆ.
ಚೆನ್ನೈ ತಂಡ ಭಾನುವಾರದ ಪಂದ್ಯದಲ್ಲಿ ಸೋಲು ಕಾಣುತ್ತಿದ್ದಂತೆ ಅವರ ಬ್ಯಾಟಿಂಗ್ ಕ್ರಮಾಂಕದ ಬಗ್ಗೆ ಪ್ರಶ್ನೆಗಳು ಎದ್ದಿದ್ದವು. ಬೆಂಗಳೂರು ತಂಡದ ವಿರುದ್ಧದ ಧೋನಿ 9ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದರು. ಈ ವೇಳೆ ಅವರ ಬ್ಯಾಟಿಂಗ್ ಕ್ರಮಾಂಕದ ಬಗ್ಗೆ ಪ್ರಶ್ನೆಗಳು ಎದ್ದಿದ್ದವು. ಅಲ್ಲದೆ ತಂಡಕ್ಕೆ ಅಗತ್ಯ ಇದ್ದಾಗ ಧೋನಿ ಬ್ಯಾಟಿಂಗ್‌ಗೆ ಬಾರದೆ ಇರುವುದಕ್ಕೆ ಪ್ರಶ್ನೆಗಳು ಎದ್ದಿದ್ದವು. ಅಲ್ಲದೆ ಅಭಿಮಾನಿಗಳು ಧೋನಿ ವಿರುದ್ಧ ಕಿಡಿ ಕಾರಿದ್ದರು.

ಮಾಹಿ ಕೆಳ ಕ್ರಮಾಂಕದಲ್ಲಿ ಆಡುವುದು ಏಕೆ?
ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಸೋತ ಬಳಿಕ ಧೋನಿ ಬ್ಯಾಟಿಂಗ್ ಕ್ರಮಾಂಕದ ಬಗ್ಗೆ ಕೋಚ್ ಫ್ಲೆಮಿಂಗ್ ಮಾತನಾಡಿದ್ದಾರೆ. ಮಾಹಿ ಅವರ ದೇಹ, ಮೊಣಕಾಲುಗಳು ಮೊದಲಿನಂತಿಲ್ಲ. ಮೈದಾನದಲ್ಲಿ ಇವರು ಆಡುವುದನ್ನು ನೋಡಿದರೆ ಇವರು ಚೆನ್ನಾಗಿ ಇದ್ದಾರೆ ಎಂದು ಅನಿಸುತ್ತದೆ. ಇವರು ಚೆನ್ನಾಗಿ ನಡೆಯುತ್ತಾರೆ. ಆದರೆ ಇನ್ನು ಅವರಲ್ಲಿ ಕೊಂಚ ಕೊರತೆಯಿದೆ. ಇವರು ಸಂಪೂರ್ಣ 10 ಓವರ್ ಬ್ಯಾಟಿಂಗ್ ಮಾಡಲು ಸಾಧ್ಯವೇ ಇಲ್ಲ. ಆದರಿಂದ ಪಂದ್ಯದ ದಿನದಂದು ತಂಡಕ್ಕೆ ಹೇಗೆ ನೆರವಾಗಬೇಕು ಎಂಬುದರ ಬಗ್ಗೆ ಅವರು ಸಮಾಲೋಚನೆ ನಡೆಸುತ್ತಾರೆ. ತಂಡಕ್ಕೆ ಏನು ಅಗತ್ಯವೋ ಅದನ್ನು ಮಾಹಿ ಮಾಡಬಲ್ಲರು ಎಂದಿದ್ದಾರೆ.
ಮಾಹಿ ಮಾಡುತ್ತಿರುವ ಬ್ಯಾಟಿಂಗ್ ಕ್ರಮಾಂಕದ ಬಗ್ಗೆ ಪ್ರಶ್ನೆಗಳು ಎದ್ದಿದ್ದವು. ಮಾಹಿ ಅವರ ಕ್ಷಮತೆಯ ಬಗ್ಗೆ ಯಾರಿಗೂ ಸಂಶಯವು ಇಲ್ಲವೇ ಅಲ್ಲ. ಆದರೆ ಅವರ ವಯಸ್ಸು ಅವರಿಗೆ ನೆರವು ನೀಡುತ್ತಿಲ್ಲ. ವಿಕೆಟ್ ಹಿಂದಿನ ಕಾರ್ಯದಲ್ಲಿ ಕಾಣುತ್ತಿರುವ ಚುರುಕುತನ ಬ್ಯಾಟಿಂಗ್‌ನಲ್ಲಿ ಕಾಣುತ್ತಿಲ್ಲ. ಮುಗಿಲೆತ್ತರದ ಸಿಕ್ಸರ್‌ಗಳು ಅವರ ಬತ್ತಳಿಕೆಯಿಂದ ಕೊಂಚ ದೂರ ಸರಿದಂತೆ ಆಗಿವೆ. ಈ ಎಲ್ಲ ಅಂಶಗಳು ನಿಶ್ಚಿತವಾಗಿ ಧೋನಿ ಬ್ಯಾಟಿಂಗ್ ಮೇಲೆ ಪ್ರಶ್ನೆಗಳು ಏಳುವಂತೆ ಮಾಡಿವೆ. ಅಲ್ಲದೆ ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಡಿಫೆನ್ಸಿವ್ ಮೂಡ್‌ನಲ್ಲಿ ಬ್ಯಾಟ್ ಮಾಡಿರುವುದು ಅಭಿಮಾನಿಗಳನ್ನು ಕೆರಳಿಸಿತು.

ಮಹೇಂದ್ರ ಸಿಂಗ್ ಧೋನಿ ವಿಕೆಟ್ ಹಿಂದೆ ಕಮಾಲ್‌ನ ಪ್ರದರ್ಶನ ನೀಡುತ್ತಿದ್ದಾರೆ. ಮೊದಲ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಅವರನ್ನು 0.12 ಸೆಕೆಂಡ್‌ಗಳಲ್ಲಿ ಕ್ರೀಸ್ ಔಟ್ ಮಾಡಿದ್ದ ಧೋನಿ, ಆರ್‌ಸಿಬಿ ವಿರುದ್ದದ ಪಂದ್ಯದಲ್ಲಿ ಫಿಲ್ ಸಾಲ್ಟ್ ಅವರನ್ನು ಪೆವಿಲಿಯನ್‌ಗೆ ಕಳುಹಿಸಲು 0.14 ಸೆಕೆಂಡ್‌ಗಳನ್ನು ತೆಗೆದುಕೊಂಡರು. ಹೀಗಾಗಿ ಅಭಿಮಾನಿಗಳಿಗೆ ಅವರ ಕೀಪಿಂಗ್ ಬಗ್ಗೆ ಪ್ರಶ್ನೆಗಳು ಇಲ್ಲ. ಆದರೆ ಬ್ಯಾಟಿಂಗ್ ಕ್ರಮಾಂಕದ ಬಗ್ಗೆ ಸಾಲು ಸಾಲು ಪ್ರಶ್ನೆಗಳು ಇವೆ.
ಧೋನಿ ಇನ್ನು ಎಷ್ಟು ಐಪಿಎಲ್ ಆವೃತ್ತಿಗಳನ್ನು ಆಡಬಹುದು?
1
2
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications