Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಗುಜರಾತ್‌ ವಿರುದ್ಧ ಸೋತ ಬೆನ್ನಲ್ಲೆ ರುತುರಾಜ್‌ಗೆ 24 ಲಕ್ಷ ದಂಡ

ಚೆನ್ನೈ ಸೂಪರ್ ಕಿಂಗ್ಸ್‌ (ಸಿಎಸ್‌ಕೆ) 19ನೇ ಆವೃತ್ತಿಯ ಪ್ಲೇ ಆಫ್ ಪ್ರವೇಶಿಸುವ ಕನಸು ನುಚ್ಚುನೂರಾಗಿದೆ. ಗುರುವಾರ ಅಹಮದಾಬಾದ್‌ನ ನರೇಂದ್ರ ಮೋದಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಚೆನ್ನೈ ಹೀನಾಯ ಸೋಲು ಅನುಭವಿಸಿದ್ದು, ಮತ್ತೊಮ್ಮೆ ಲೀಗ್‌ ಹಂತದಲ್ಲೇ ಐಪಿಎಲ್‌ಗೆ ಗುಡ್‌ ಬೈ ಹೇಳಿದೆ. ಈ ಸೋಲಿನ ಬೆನ್ನಲ್ಲೆ ಚೆನ್ನೈ ತಂಡಕ್ಕೆ ದೊಡ್ಡ ಪೆಟ್ಟು ಬಿದ್ದಿದೆ.

ಟಾಸ್‌ ಸೋತರೂ ಮೊದಲು ಬ್ಯಾಟ್ ಮಾಡಿದ ಗುಜರಾತ್ ಟೈಟಾನ್ಸ್‌ ತಂಡದ ಆರಂಭಿಕ ಸಾಯಿ ಸುದರ್ಶನ್‌ (84), ಶುಭಮನ್‌ ಗಿಲ್ (64), ಜೋಸ್ ಬಟ್ಲರ್ (57) ಭರ್ಜರಿ ಆಟದ ಪರಿಣಾಮ 20 ಓವರ್‌ಗಳಲ್ಲಿ 4 ವಿಕೆಟ್‌ಗೆ 229 ರನ್‌ ಸೇರಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಚೆನ್ನೈ 13.4 ಓವರ್‌ಗಳಲ್ಲಿ 140 ರನ್‌ ಸೇರಿಸಿ ಸೋಲು ಕಂಡಿತು. ವೇಗಿ ಮೊಹಮ್ಮದ್ ಸಿರಾಜ್, ಕಗಿಸೊ ರಬಾಡ, ರಶೀದ್‌ ಖಾನ್ ತಲಾ ಮೂರು ವಿಕೆಟ್‌ ಪಡೆದರು. ಈ ಪಂದ್ಯದಲ್ಲಿ ಚೆನ್ನೈ ನಿಧಾನಗತಿಯ ಓವರ್ ದರಕ್ಕಾಗಿ ಅವರು ತಪ್ಪಿತಸ್ಥರೆಂದು ತಿಳಿದು ಬಂದಿದ್ದು, ಅವರಿಗೆ ಭಾರಿ ದಂಡ ವಿಧಿಸಲಾಗಿದೆ.

CSK

19ನೇ ಆವೃತ್ತಿಯ ಐಪಿಎಲ್‌ನಲ್ಲಿ ಚೆನ್ನೈ ತಂಡ ಎರಡನೇ ಬಾರಿಗೆ ನಿಧಾನಗತಿಯ ಓವರ್‌ ಮಾಡಿದ್ದಾಗಿದೆ. ಹೀಗಾಗಿ ಇಡೀ ತಂಡಕ್ಕೆ ದೊಡ್ಡ ವಿಧಿಸಲಾಗಿದೆ. ಋತುವಿನ 18 ನೇ ಪಂದ್ಯದಲ್ಲಿ, ತಂಡವು ನಿಗದಿತ ಓವರ್‌ಗಳನ್ನು ಬೌಲ್ ಮಾಡಲು ವಿಫಲವಾಗಿದೆ.

ಭಾರೀ ದಂಡ

ಕನಿಷ್ಠ ಓವರ್ ದರಕ್ಕೆ ಸಂಬಂಧಿಸಿದ ನೀತಿ ಸಂಹಿತೆಯ ನಿಯಮ 2.22 ರ ಅಡಿಯಲ್ಲಿ, ನಾಯಕ ಗಾಯಕ್ವಾಡ್‌ಗೆ 24 ಲಕ್ಷ ರೂ. ದಂಡ ವಿಧಿಸಲಾಗಿದೆ. ನಾಯಕ ಅಷ್ಟೇ ಅಲ್ಲದೆ, ಇಂಪ್ಯಾಕ್ಟ್ ಆಟಗಾರರು ಸೇರಿದಂತೆ ತಂಡದ ಇತರ ಎಲ್ಲಾ ಆಟಗಾರರ ವಿರುದ್ಧವೂ ಕ್ರಮ ಕೈಗೊಳ್ಳಲಾಗಿದ್ದು, ಪ್ರತಿ ಆಟಗಾರ ₹6 ಲಕ್ಷ ಅಥವಾ ಅವರ ಪಂದ್ಯ ಶುಲ್ಕದ 25% (ಯಾವುದು ಕಡಿಮೆಯೋ ಅದು) ದಂಡ ವಿಧಿಸಲಾಗುತ್ತದೆ.

ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ಈ ಆವೃತ್ತಿಯಲ್ಲಿ ಹೀನಾಯ ಪ್ರದರ್ಶನ ನೀಡಿದೆ. ಆಡಿದ 14 ಪಂದ್ಯಗಳಲ್ಲಿ ತಂಡವು ಕೇವಲ 6 ಪಂದ್ಯಗಳನ್ನು ಗೆದ್ದಿತು. 12 ಅಂಕಗಳು ಮತ್ತು -0.345 ರ ರನ್‌ ರೇಟ್‌ ಹೊಂದಿದೆ. ಈ ಮೂಲಕ ಸಿಎಸ್‌ಕೆ ಮತ್ತೊಮ್ಮೆ ಪ್ಲೇ ಆಫ್‌ ಪ್ರವೇಶಿಸಲು ವಿಫಲವಾಗಿವೆ. ಈ ಮೂಲಕ ಸಿಎಸ್‌ಕೆ ಸತತ ಮೂರನೇ ಬಾರಿಗೆ ಪ್ಲೇ ಆಫ್‌ನಿಂದಲೇ ಹೊರ ನಡೆದಿದೆ. ಎಂಎಸ್ ಧೋನಿ ನಾಯಕತ್ವದಲ್ಲಿ ಚೆನ್ನೈ ಕೊನೆಯ ಬಾರಿಗೆ 2023 ರಲ್ಲಿ ಐಪಿಎಲ್ ಗೆದ್ದು ಕೊಂಡಿತ್ತು.

Story first published: Friday, May 22, 2026, 10:27 [IST]
Other articles published on May 22, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+