ಶಾಲಾ ದಿನದ 'ಕ್ರಶ್' ಜೊತೆಗೆ ನಿಶ್ಚಿತಾರ್ಥ ಮಾಡಿಕೊಂಡ ಸಿಎಸ್‌ಕೆ ವೇಗಿ ತುಷಾರ್ ದೇಶ್ಪಾಂಡೆ
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಯುವ ಆಟಗಾರ ಋತುರಾಜ್ ಗಾಯಕ್ವಾಡ್ ಮದುವೆಯಾದ ಕೆಲವೇ ದಿನಗಳಲ್ಲಿ ಮತ್ತೋರ್ವ ಚೆನ್ನೈ ಸೂಪರ್ ಕಿಂಗ್ಸ ತಂಡದ ಯುವ ಆಟಗಾರ ಮದುವೆಗೆ ಸಜ್ಜಾಗಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸವ ತಂಡದ ಯುವ ವೇಗದ ಬೌಲರ್ ತುಷಾರ್ ದೇಶ್‌ಪಾಂಡೆ ನಿಶ್ಚಿರಾರ್ಥ ಮಾಡಿಕೊಂಡಿದ್ದು ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ.
ತುಷಾರ್ ದೇಶ್ಪಾಂಡೆ ತಮ್ಮ ಶಾಲಾ ದಿನಗಳ ಕ್ರಶ್ ನಭಾ ಗದ್ದಮ್ವರ್ ಜೊತೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದು ಮುಂಬೈನಲ್ಲಿ ಈ ಕಾರ್ಯಕ್ರಮ ಕುಟುಂಬಸ್ಥರ ಸಮ್ಮುಖದಲ್ಲಿ ನಡೆದಿದೆ. ಎರಡು ಕುಟುಂಬಗಳ ಕೆಲ ಆಪ್ತರು ಹಾಗೂ ಸ್ನೇಹಿತರ ಸಮ್ಮುಖದಲ್ಲಿ ಈ ಕಾರ್ಯಕ್ರಮ ನೆರವೇರಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ನಿಶ್ಚಿತಾರ್ಥದ ಫೊಟೋಗಳನ್ನು ತುಷಾರ್ ದೇಶ್‌ಪಾಂಡೆ ಹಂಚಿಕೊಂಡಿದ್ದು ಸಂತಸವನ್ನು ವ್ಯಕ್ತಪಡಿಸಿದ್ದಾರೆ.

ದೇಶ್ಪಾಂಡೆ ಅವರ ಸಿಎಸ್‌ಕೆ ತಂಡದ ಸಹ ಆಟಗಾರ ಮತ್ತು ಬ್ಯಾಟರ್ ಶಿವಂ ದುಬೆ ಕೂಡ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಭಾವಿ ದಂಪತಿಗಳೊಂದಿಗೆ ಚಿತ್ರವನ್ನು ಹಂಚಿಕೊಂಡಿದ್ದಾರೆ ಶಿವಂ ದುಬೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಈ ಪ್ರತಿಭಾನ್ವಿತ ವೇಗಿ ತನ್ನ 2023ರ ಐಪಿಎಲ್ ಆವೃತ್ತಿಯಲ್ಲಿ ಹೇಳಿಕೊಳ್ಳುವಂತಾ ಉತ್ತಮ ಆರಂಭವನ್ನು ಪಡೆದಿರಲಿಲ್ಲ. ಹೆಚ್ಚಾ ರನ್ ಬಿಟ್ಟುಕೊಟ್ಟಿದ್ದಲ್ಲದೆ ಹೆಚ್ಚಿನ ಎಕ್ಸ್‌ಟ್ರಾಗಳನ್ನು ಕುಡ ಬಿಟ್ಟುಕೊಟ್ಟರು. ಆದರೂ ನಾಯಕ ಧೋನಿ ತುಷಾರ್ ದೇಶ್ಪಾಂಡೆ ಮೇಲೆ ನಂಬಿಕೆಯಿಟ್ಟು ಅವಕಾಶ ನೀಡಿದರು. ನಂತರ ತಮ್ಮ ಲೈನ್ ಮತ್ತು ಲೆಂತ್‌ನಲ್ಲಿ ಸುಧಾರಣೆ ಕಂಡ ಅವರು ಅದ್ಭುತ ಕಮ್‌ಬ್ಯಾಕ್ ಮಾಡಿದ್ದಾರೆ. 16 ಪಂದ್ಯಗಳಲ್ಲಿ ಆಡಿದ ಅವರು ಒಟ್ಟು 21 ವಿಕೆಟ್‌ಗಳನ್ನು ಪಡೆದು ಸಿಎಸ್‌ಕೆ ಪರ ಯಶಸ್ವಿ ಬೌಲರ್ ಎನಿಸಿಕೊಂಡರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications