For Quick Alerts
ALLOW NOTIFICATIONS  
For Daily Alerts
 

MS Dhoni: ಸಿಎಸ್‌ಕೆಗೆ ತವರಿನಲ್ಲಿ ಭಾರೀ ಸೋಲು: ಧೋನಿ ಬ್ಯಾಟಿಂಗ್ ಕ್ರಮಾಂಕದ ಬಗ್ಗೆ ಎದ್ದಿವೆ ಪ್ರಶ್ನೆ?

ಚೆನ್ನೈನ ಎಂ ಎ ಚಿದಂಬರಂ ಅಂಗಳದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅಭೂತ್‌ ಪೂರ್ವ ಜಯ ದಾಖಲಿಸಿದೆ. ಚೆನ್ನೈ ಸೂಪರ್‌ ಕಿಂಗ್ಸ್‌ 17 ವರ್ಷಗಳ ಬಳಿಕ ತನ್ನದೇ ತವರಿನಲ್ಲಿ ಆರ್‌ಸಿಬಿ ವಿರುದ್ಧ ಸೋಲು ಕಂಡಿದೆ. ಚೆನ್ನೈ ಸೂಪರ್‌ ಕಿಂಗ್ಸ್‌ ಸೋಲು ಅಭಿಮಾನಿಗಳಲ್ಲಿ ಬೇಸರ ತರಿಸಿದೆ. ಸ್ಪರ್ಧಾತ್ಮಕ ಮೊತ್ತವನ್ನು ಚೇಸ್ ಮಾಡುವಲ್ಲಿ ಎಡವಿದ್ದು ಎಲ್ಲಿ ಎಂಬ ಪ್ರಶ್ನೆಗಳು ಉದ್ಭವಿಸುತ್ತವೆ. ಈ ವೇಳೆ ಎಲ್ಲರ ಕಣ್ಣುಗಳು ಧೋನಿ ಅವರತ್ತ ಬೊಟ್ಟು ಮಾಡಿ ತೋರಿಸುತ್ತವೆ.

18ನೇ ಆವೃತ್ತಿಯ 8ನೇ ಪಂದ್ಯದಲ್ಲಿ ಟಾಸ್‌ ಸೋತರೂ ಮೊದಲು ಬ್ಯಾಟ್ ಮಾಡಿದ ಆರ್‌ಸಿಬಿ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 196 ರನ್‌ ಸೇರಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಸಿಎಸ್‌ಕೆ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 146 ರನ್‌ ಮಾತ್ರ ಕಲೆ ಹಾಕಲು ಸಾಧ್ಯವಾಯಿತು. ಈ ಮೂಲಕ ಆರ್‌ಸಿಬಿ 50 ರನ್‌ಗಳಿಂದ ಪಂದ್ಯವನ್ನು ಗೆದ್ದಿತು. ಸಿಎಸ್‌ಕೆ ತವರಿನಲ್ಲಿ 6155 ದಿನಗಳ ಬಳಿಕ ಆರ್‌ಸಿಬಿ ವಿರುದ್ಧ ಸೋಲು ಕಂಡಿದೆ.

CSK Suffers Crushing Defeat at Home as Dhoni s Batting Order Raises Questions

ಚೆನ್ನೈನ ಭದ್ರ ಕೋಟೆಯಲ್ಲಿ ಅಬ್ಬರಿಸಿದ ಆರ್‌ಸಿಬಿ ಅಂಕ ಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಕಾಯ್ದುಕೊಂಡಿದೆ. ಈ ವೇಳೆ ಆರ್‌ಸಿಬಿ ತಂಡದ ವಿರುದ್ಧದ ಚೆನ್ನೈ ಪ್ರದರ್ಶನದ ಬಗ್ಗೆ ಹಲವು ಪ್ರಶ್ನೆಗಳು ಎದ್ದಿವೆ. ಅದ್ರಲ್ಲೂ ಎಂಎಸ್‌ ಧೋನಿ 9ನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಲು ಬಂದ ಬಗ್ಗೆ ಪ್ರಶ್ನೆಗಳನ್ನು ಕೇಳುತ್ತಾಇದ್ದಾರೆ. ಅಲ್ಲದೆ ಈ ವಯಸ್ಸಿನಲ್ಲಿ ಆಡಬೇಕಾ ಎಂಬ ಪ್ರಶ್ನೆಗಳನ್ನು ಅಭಿಮಾನಿಗಳು ಮಾಡಿದ್ದಾರೆ.

9ನೇ ಕ್ರಮಾಂಕ ಏಕೆ?

ಚೆನ್ನೈ ಸೂಪರ್‌ ಕಿಂಗ್ಸ್ ತಂಡದ ಯಶಸ್ವಿ ನಾಯಕರಲ್ಲಿ ಮಹೇಂದ್ರ ಸಿಂಗ್ ಧೋನಿ ಅವರಿಗೆ ಸ್ಥಾನ. ಇವರನ್ನು ಅಲ್ಲಿನ ಅಭಿಮಾನಿಗಳು ತಲೈವಾ ಎಂದು ಕರೆಯುತ್ತಾರೆ. ಇವರ ನಾಯಕತ್ವದಲ್ಲಿ ಸಿಎಸ್‌ಕೆ ದಾಖಲೆಯ 5 ಬಾರಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ. ಆದರೆ ಪ್ರಸಕ್ತ ಸಾಲೀನಲ್ಲಿ ಎಂಎಸ್‌ ಧೋನಿ ನೀಡುತ್ತಿರುವ ಪ್ರದರ್ಶನ ಹಲವು ಪ್ರಶ್ನೆಗಳನ್ನು ಹುಟ್ಟಿಹಾಕಿದೆ. ಮಹೇಂದ್ರ ಸಿಂಗ್ ಧೋನಿ ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ 9ನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಲು ಬಂದಿದ್ದಕ್ಕೆ ಅಭಿಮಾನಿಗಳು ಬೇಸರಗೊಂಡಿದ್ದಾರೆ.

CSK Suffers Crushing Defeat at Home as Dhoni s Batting Order Raises Questions

16ನೇ ಓವರ್‌ನ ಎರಡನೇ ಎಸೆತದಲ್ಲಿ ಲಿಯಾಮ್‌ ಲಿವಿಂಗ್‌ಸ್ಟೋನ್ ಅಶ್ವಿನ್ ಅವರಿಗೆ ಪೆವಿಲಿಯನ್ ಹಾದಿ ತೋರಿಸ್ತಾ ಇದ್ದಂತೆ, ಮಹೇಂದ್ರ ಸಿಂಗ್ ಧೋನಿ ಅಂಗಳಕ್ಕೆ ಇಳಿದ್ರು. ಇವರು ಮೈದಾನಕ್ಕೆ ಇಳಿದಾಗ ಚೆನ್ನೈ ಕೈಯಿಂದ ಸಂಪೂರ್ಣ ಪಂದ್ಯ ಜಾರಿ ಆಗಿತ್ತು. ಇವರು ಕ್ರೀಸ್‌ಗೆ ಬಂದಾಗ 28 ಎಸೆತಗಳಲ್ಲಿ 98 ರನ್‌ ಅವಶ್ಯಕತೆ ಇತ್ತು. ಅಸಾಧಾರಣ ಗುರಿಯನ್ನು ಬೆನ್ನಟಿದಾಗ ಮಾಹಿ ಆರಂಭದಲ್ಲಿ ನಿಧಾನವಾಗಿ ಬ್ಯಾಟ್ ಮಾಡಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾದರು. ಆದರೆ ಕೊನೆಯ ಓವರ್‌ನಲ್ಲಿ ಬೌಂಡರಿ, ಸಿಕ್ಸರ್ ಬಾರಿಸಿದರು. ಆದರೆ ಅಭಿಮಾನಿಗಳು ಮಾತ್ರ ಇವರ ಆಟ ಕಂಡು ಬೇಸರ ವ್ಯಕ್ತ ಪಡಿಸಿದ್ದಾರೆ.

ಮಹೇಂದ್ರ ಸಿಂಗ್ ಧೋನಿ 9ನೇ ಕ್ರಮಾಂಕದಲ್ಲಿ ಬ್ಯಾಟ್‌ ಮಾಡಿದ್ದು ಏಕೆ. ಅವರ ಕ್ಷಮತೆಯ ಬಗ್ಗೆ ಎಲ್ಲರಿಗೂ ಅರಿವಿದೆ. ಜಡೇಜಾ, ಅಶ್ವಿನ್‌ ಅವರಿಗಿಂತ ಮೊದಲೇ ಬರಬೇಕಿತ್ತು ಎಂದು ಫ್ಯಾನ್ಸ್‌ ಪ್ರಶ್ನೇ ಮಾಡಿದ್ದಾರೆ.

Story first published: Saturday, March 29, 2025, 13:49 [IST]
Other articles published on Mar 29, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+