CSK vs DC: ಚೆನ್ನೈಗೆ ಮೊದಲ ಜಯದ ಖುಷಿ: ಡೆಲ್ಲಿಗೆ ಮತ್ತೊಂದು ಸೋಲು
ಚೆನ್ನೈ: ಐದು ಬಾರಿಯ ಐಪಿಎಲ್ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) 19ನೇ ಆವೃತ್ತಿಯ ಐಪಿಎಲ್‌ನಲ್ಲಿ ಮೊದಲ ಗೆಲುವಿನ ನಗೆ ಬೀರಿದೆ. ಪ್ರಸಕ್ತ ಆವೃತ್ತಿಯ 18ನೇ ಪಂದ್ಯದಲ್ಲಿ ಸಿಎಸ್‌ಕೆ 23 ರನ್‌ಗಳಿಂದ ಡೆಲ್ಲಿ ಕ್ಯಾಪಿಟಲ್ಸ್ (ಡಿಸಿ) ತಂಡವನ್ನು ಮಣಿಸಿ ಅಂಕದ ಖಾತೆಯನ್ನು ತೆರೆದಿದೆ. ಚೆನ್ನೈ ಈ ಆವೃತ್ತಿಯಲ್ಲಿ ಮೊದಲ ಗೆಲುವಿನ ನಗೆ ಬೀರಿದೆ.
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಚೆನ್ನೈ ತಂಡದ ಆರಂಭ ಭರ್ಜರಿಯಾಗಿತ್ತು. ಆರಂಭಿಕರಾದ ಸಂಜು ಸ್ಯಾಮ್ಸನ್ ಹಾಗೂ ನಾಯಕ ರುತುರಾಜ್ ಗಾಯಕ್ವಾಡ್ ಪವರ್ ಪ್ಲೇನಲ್ಲಿ ಪವರ್ ಫುಲ್ ಬ್ಯಾಟಿಂಗ್ ನಡೆಸಿದರು. ಈ ಜೋಡಿ ಮೊದಲ ವಿಕೆಟ್‌ಗೆ 62 ರನ್ ಸೇರಿಸಿತು. ಈ ಹಂತದಲ್ಲಿ 15 ರನ್ ಬಾರಿಸಿದ್ದ ರುತುರಾಜ್ ಗಾಯಕ್ವಾಡ್ ಅಕ್ಷರ್ ಪಟೇಲ್ ಅವರು ತೋಡಿದ ಖೆಡ್ಡಾಗೆ ಬಲಿಯಾದರು.

ಎರಡನೇ ವಿಕೆಟ್‌ಗೆ ಸಂಜು ಸ್ಯಾಮ್ಸನ್ ಹಾಗೂ ಆಯುಷ್ ಮಾತ್ರೆ ಜೋಡಿ ಅಮೋಘ ಜೊತೆಯಾಟ ನೀಡಿತು. ಈ ಜೋಡಿ ಎರಡನೇ ವಿಕೆಟ್‌ಗೆ 100ಕ್ಕೂ ಹೆಚ್ಚು ರನ್ ಸೇರಿಸಿತು. ಈ ಹಂತದಲ್ಲಿ 36 ಎಸೆತಗಳಲ್ಲಿ 59 ರನ್ ಬಾರಿಸಿದ್ದ ಆಯುಷ್ ಮಾತ್ರೆ ರಿಟೈಡ್ ಹರ್ಟ್ ಆದರು. ಈ ಮೂಲಕ ತಂಡದ ಮೊತ್ತವನ್ನು ಹಿಗ್ಗಿಸುವ ಕಾರ್ಯ ಶಿವಂ ದುಬೆ ಅವರ ಮೇಲೆ ಬಿದ್ದಿತು. ಶಿವಂ ದುಬೆ 200ರ ಸ್ಟ್ರೈಕ್ ರೇಟ್‌ನಲ್ಲಿ 20 ರನ್ ಬಾರಿಸಿದರು. ಈ ವೇಳೆ 2 ಬೌಂಡರಿ, 1 ಸಿಕ್ಸರ್ ಸಿಡಿಸಿದರು.
ಸಂಜು ಸ್ಯಾಮ್ಸನ್ ಶತಕ
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಇದೇ ಮೊದಲ ಬಾರಿಗೆ ಆಡುತ್ತಿರುವ ಸಂಜು ಸ್ಯಾಮ್ಸನ್ ಅಮೋಘ ಬ್ಯಾಟಿಂಗ್ ನಡೆಸಿದರು. ಇವರು 56 ಎಸೆತಗಳಲ್ಲಿ 15 ಬೌಂಡರಿ, 4 ಸಿಕ್ಸರ್ ಸಹಾಯದಿಂದ ಅಜೇಯ 115 ರನ್ ಸಿಡಿಸಿದರು. ಈ ಮೂಲಕ ಈ ಆವೃತ್ತಿಯಲ್ಲಿ ಮೊದಲ ಶತಕ ಬಾರಿಸಿದ ಆಟಗಾರ ಎಂಬ ಹಿರಿಮೆ ಇವರದ್ದಾಯಿತು.

ಅಂತಿಮವಾಗಿ ಚೆನ್ನೈ 20 ಓವರ್‌ಗಳಲ್ಲಿ 2 ವಿಕೆಟ್‌ಗೆ 212 ರನ್ ಸೇರಿಸಿತು.
ಸವಾಲಿನ ಗುರಿಯನ್ನು ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆರಂಭ ಉತ್ತಮವಾಗಿತ್ತು. ಆರಂಭಿಕ ಪತುಮ್ ನಿಸ್ಸಂಕಾ ಹಾಗೂ ಕೆಎಲ್ ರಾಹುಲ್ ಜೋಡಿ ಮೊದಲ ವಿಕೆಟ್‌ಗೆ 4.6 ಓವರ್‌ಗಳಲ್ಲಿ 61 ರನ್ ಸೇರಿಸಿತು. ಈ ಹಂತದಲ್ಲಿ ಕರ್ನಾಟಕದ ಕೆಎಲ್ ರಾಹುಲ್ 18 ರನ್ ಬಾರಿಸಿ ಔಟ್ ಆದರು. ಭರವಸೆಯ ಬ್ಯಾಟರ್ ಸಮೀರ್ ರಿಜ್ವಿ (6), ನಾಯಕ ಅಕ್ಷರ್ ಪಟೇಲ್ (1), ಡೇವಿಡ್ ಮಿಲ್ಲರ್ (17) ರನ್ ಕಲೆ ಹಾಕುವಲ್ಲಿ ಹಿಂದೆ ಬಿದ್ದರು. ನಂತರ ಬಂದ ಯಾವುದೇ ಡೆಲ್ಲಿ ಬ್ಯಾಟರ್ ನೆಲಕಚ್ಚಿ ಬ್ಯಾಟ್ ನಡೆಸಲಿಲ್ಲ. ಮಧ್ಯಮ ಕ್ರಮಾಂಕದಲ್ಲಿ ಟ್ರಿಸ್ಟನ್ ಸ್ಟಬ್ಸ್ 38 ಎಸೆತಗಳಲ್ಲಿ 4 ಬೌಂಡರಿ, 3 ಸಿಕ್ಸರ್ ಸಹಾಯದಿಂದ 60 ರನ್ ಬಾರಿಸಿದರು. ಅಂತಿಮವಾಗಿ ಡೆಲ್ಲಿ 20 ಓವರ್‌ಗಳಲ್ಲಿ 189 ರನ್‌ಗಳಿಗೆ ಆಲೌಟ್ ಆಯಿತು.
ಚೆನ್ನೈ ತಂಡದ ಪರ ಜೇಮಿ ಓವರ್‌ಟನ್ 4 ಹಾಗೂ ಅಂಶುಲ್ ಕಂಬೋಜ್ 3 ವಿಕೆಟ್ ಉರುಳಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications