ಭಾರತದ ಯುವ ಕ್ರಿಕೆಟಿಗ ಶುಬ್ಮನ್ ಗಿಲ್ 2023ರಲ್ಲಿ ಅಮೋಘ ಫಾರ್ಮ್‌ನಲ್ಲಿದ್ದಾರೆ. ಮೊದಲಿಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ನ ಎಲ್ಲಾ ಮಾದರಿಯಲ್ಲಿಯೂ ಶತಕ ಸಿಡಿಸಿ ಅಬ್ಬರಿಸಿದ್ದ ಗಿಲ್ ಬಳಿಕ ಆ ಫಾರ್ಮ್‌ಅನ್ನು ಐಪಿಎಲ್‌ನಲ್ಲಿಯೂ ಮುಂದುವರಿಸಿದ್ದಾರೆ. ಈ ಬಾರಿಯ ಐಪಿಎಲ್‌ನಲ್ಲಿ ಫೈನಲ್ ಪಂದ್ಯಕ್ಕೂ ಮುನ್ನ ಶುಬ್ಮನ್ ಗಿಲ್ 16 ಇನ್ನಿಂಗ್ಸ್‌ಗಳಲ್ಲಿ ಬ್ಯಾಟಿಂಗ್ ಮಾಡಿದ್ದು 60.79ರ ಸರಾಸರಿಯಲ್ಲಿ 851 ರನ್‌ಗಳನ್ನು ಗಳಿಸಿದ್ದಾರೆ. ಈ ಟೂರ್ನಿಯಲ್ಲಿ ಮೂರು ಶತಕ ಸಿಡಿಸಿರುವ ಅವರ ಸ್ಟ್ರೈಕ್‌ರೇಟ್ 156.43.
ಶುಬ್ಮನ್ ಗಿಲ್ ಗುಜರಾತ್ ಟೈಟನ್ಸ್ ತಂಡಕ್ಕೆ ಎಂಥಾ ಅದ್ಭುತ ಕೊಡುಗೆ ನೀಡಿದ್ದಾರೆ ಎಂದರೆ ಟೂರ್ನಿಯಲ್ಲಿ ಜಿಟಿ ತಂಡ ಗಳಿಸಿರುವ ರನ್‌ಗಳ ಪೈಕಿ 30 ಶೇಕಡಾದಷ್ಟು ರನ್ ಶುಬ್ಮನ್ ಗಿಲ್ ಬ್ಯಾಟ್‌ನಿಂದಲೇ ಬಂದಿದೆ. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಫೈನಲ್ ಪಂದ್ಯದಲ್ಲಿ ಆಡುವುದು ಬಾಕಿಯಿದ್ದು ಮತ್ತಷ್ಟು ರನ್‌ಗಳು ಗಿಲ್ ಖಾತೆಗೆ ಸೇರಲಿದೆ.

ಶುಬ್ಮನ್ ಗಿಲ್‌ಗೆ 2023ರ ಆವೃತ್ತಿ ಟಿ20 ಮಾದರಿಯಲ್ಲಿಯೂ ಅದ್ಭುತವಾಗಿದೆ ಎಂಬುದು ಅವರ ಅಂಕಿಅಂಶಗಳಿಂದ ಸ್ಪಷ್ಟವಾಗುತ್ತದೆ. 22 ಪಂದ್ಯಗಳಲ್ಲಿ ಗಿಲ್ 1054 ರನ್‌ಗಳನ್ನು ಗಳಿಸಿದ್ದು 55.42ರ ಸರಾಸರಿ ಹೊಂದಿದ್ದಾರೆ. ಟಿ20 ಮಾದರಿಯಲ್ಲಿ ಗಿಲ್ ನಾಲ್ಕು ಶತಕಗಳನ್ನು ಈ ವರ್ಷ ಬಾರಿಸಿದ್ದು 158.10 ಸ್ಟ್ರೈಕ್‌ರೇಟ್ ಹೊಂದಿದ್ದಾರೆ. ಶುಬ್ಮನ್ ಗಿಲ್ ಅವರು ಗಳಿಸಿರುವ ಈ ರನ್ 2023ರಲ್ಲಿ ಟಿ20 ಮಾದರಿಯಲ್ಲಿ ಅತಿ ಹೆಚ್ಚು ರನ್‌ಗಳಿಸಿದ ಆಟಗಾರರ ಪಟ್ಟಿಯಲ್ಲಿ ಮೂರನೃ ಸ್ಥಾನದಲ್ಲಿದೆ. ಗಿಲ್‌ಗಿಂತ ಫಾಫ್ ಡು ಪ್ಲೆಸಿಸ್ ಹಾಗೂ ಮೊಹಮ್ಮದ್ ರುಜ್ವಾನ್ ಮಾತ್ರವೇ ಈ ಪಟ್ಟಿಯಲ್ಲಿ ಮುಂದಿದ್ದಾರೆ.
ಪಾಕ್ ಆಟಗಾರ ಮೊಹಮ್ಮದ್ ರಿಜ್ವಾನ್ 26 ಇನ್ನಿಂಗ್ಸ್‌ಗಳಲ್ಲಿ 1063 ರನ್ ಗಳಿಸಿದ್ದು 53.15 ಸರಾಸರಿ ಮತ್ತು 136.45 ಸ್ಟ್ರೈಕ್ ರೇಟ್ ಹೊಂದಿದ್ದಾರೆ. ಶುಬ್ಮನ್ ಗಿಲ್ ಅವರಿಂತ ರಿಜ್ವಾನ್ ಕೇವಲ 10 ರನ್‌ಗಳು ಮುಂದಿದ್ದಾರೆ. ಮತ್ತೊಂದೆಡೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ಫಾಫ್ ಐಪಿಎಲ್‌ನಲ್ಲಿ ಅಮೋಘ ಪ್ರದರ್ಶನ ನೀಡಿದ್ದು ಈ ವರ್ಷ ಈವರೆಗೆ 26 ಟಿ20 ಪಂದ್ಯಗಳಲ್ಲಿ 48ಸರಾಸರಿ ಮತ್ತು ಸುಮಾರು 150 ಸ್ಟ್ರೈಕ್ ರೇಟ್‌ನಲ್ಲಿ 1139 ರನ್ ಗಳಿಸಿದ್ದಾರೆ.
ಇದೀಗ ಶುಬ್ಮನ್ ಗಿಲ್‌ಗೆ ಈ ಇಬ್ಬರು ಆಟಗಾರರನ್ನು ಕುಡ ಹಿಂದಿಕ್ಕುವ ಅದ್ಭುತ ಅವಕಾಶವಿದೆ. ರಿಜ್ವಾನ್ ಹಿಂದಿಕ್ಕಲು ಗಿಲ್‌ಗೆ 11 ರನ್‌ಗಳ ಅಗತ್ಯವಿದ್ದರೆ ಫಾಫ್ ಹಿಂದಿಕ್ಕಲು 87 ರನ್ ಗಳಿಸಬೇಕಿದೆ. ಪ್ರಸ್ತುತ ಹೊಂದಿರುವ ಅಮೋಘ ಫಾರ್ಮ್ ನೋಡಿದರೆ ಅಗ್ರಸ್ಥಾನದಲ್ಲಿರುವ ಇಬ್ಬರು ಆಟಗಾರರನ್ನು ಕೂಡ ಗಿಲ್ ಸುಲಭವಾಗಿ ಹಿಂದಿಕ್ಕಲಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್: ಎಂಎಸ್ ಧೋನಿ(ನಾಯಕ), ಋತುರಾಜ್ ಗಾಯಕ್ವಾಡ್, ಡೆವೊನ್ ಕಾನ್ವೇ, ಮೊಯಿನ್ ಅಲಿ, ಸುಭ್ರಾಂಶು ಸೇನಾಪತಿ, ಅಂಬಾಟಿ ರಾಯುಡು, ರವೀಂದ್ರ ಜಡೇಜಾ, ಶಿವಂ ದುಬೆ, ರಾಜವರ್ಧನ್ ಹಂಗರ್ಗೇಕರ್, ಡ್ವೈನ್ ಪ್ರಿಟೋರಿಯಸ್, ಮಿಚೆಲ್ ಸ್ಯಾಂಟ್ನರ್, ಮಹೇಶ್ ತೀಕ್ಷಣ, ಪ್ರಶಾಂತ್ ಸೋಲಂಕಿ, ದೀಪಕ್ ಚಾಹರ್, ಮುಖೇಶ್ ಚೌಧರಿ, ಸಿಮರ್ಜೀತ್ ಸಿಂಗ್, ತುಷಾರ್ ದೇಶಪಾಂಡೆ, ಮಥೀಶ ಪತಿರಾನ, ಬೆನ್ ಸ್ಟೋಕ್ಸ್, ಸಿಸಂದಾ ಮಗಲಾ, ಅಜಿಂಕ್ಯ ರಹಾನೆ, ಶೇಕ್ ರಶೀದ್, ನಿಶಾಂತ್ ಸಿಂಧು, ಅಜಯ್ ಮಂಡಲ್, ಭಗತ್ ವರ್ಮಾ, ಆಕಾಶ್ ಸಿಂಗ್
ಗುಜರಾತ್ ಟೈಟನ್ಸ್: ಹಾರ್ದಿಕ್ ಪಾಂಡ್ಯ(ನಾಯಕ), ಶುಬ್ಮನ್ ಗಿಲ್, ಸಾಯಿ ಸುದರ್ಶನ್, ವೃದ್ಧಿಮಾನ್ ಸಹಾ, ಮ್ಯಾಥ್ಯೂ ವೇಡ್, ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ಅಭಿನವ್ ಮನೋಹರ್, ವಿಜಯ್ ಶಂಕರ್, ರಶೀದ್ ಖಾನ್, ಸಾಯಿ ಕಿಶೋರ್, ನೂರ್ ಅಹ್ಮದ್, ಜಯಂತ್ ಯಾದವ್, ಅಲ್ಜಾರಿ ಜೋಸೆಫ್, ಮೊಹಮ್ಮದ್ ಶಮಿ, ಯಶ್ ದಯಾಳ್, ದರ್ಶನ್ ನಲ್ಕಂಡೆ, ಪ್ರದೀಪ್ ಸಾಂಗ್ವಾನ್, ಶಿವಂ ಮಾವಿ, ಜೋಶುವಾ ಲಿಟಲ್, ಕೆಎಸ್ ಭರತ್, ಒಡಿಯನ್ ಸ್ಮಿತ್, ಮೋಹಿತ್ ಶರ್ಮಾ, ಉರ್ವಿಲ್ ಪಟೇಲ್.