Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

CSK vs LSG: ಉರ್ವಿಲ್ ಪಟೇಲ್ ಅರ್ಧಶತಕ, ಸಿಎಸ್‌ಕೆ ಪ್ಲೇ ಆಫ್‌ ರೇಸ್‌ ಈಗಲೂ ಓಪನ್

ಚೆನ್ನೈ: ಯುವ ಆಟಗಾರ ಉರ್ವಿಲ್ ಪಟೇಲ್‌ (65 ರನ್) ಹಾಗೂ ಜೇಮಿ ಓವರ್‌ಟನ್‌ ಅವರ ಭರ್ಜರಿ ಪ್ರದರ್ಶನದ ಬಲದಿಂದ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) 19ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್‌)ನ 53ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಮಣಿಸಿ, ತನ್ನ ಪ್ಲೇ ಆಫ್‌ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ.

ಸ್ಪರ್ಧಾತ್ಮಕ ಮೊತ್ತದ ಗುರಿಯನ್ನು ಬೆನ್ನಟ್ಟಿದ ಸಿಎಸ್‌ಕೆ ತಂಡದ ಆರಂಭ ಉತ್ತಮವಾಗಿತ್ತು. ಆರಂಭಿಕರಾದ ಸಂಜು ಸ್ಯಾಮ್ಸನ್‌ (26) ಹಾಗೂ ನಾಯಕ ರುತುರಾಜ್ ಗಾಯಕ್ವಾಡ್ (42) ಜೋಡಿ ಮೊದಲ ವಿಕೆಟ್‌ಗೆ 3.4 ಓವರ್‌ಗಳಲ್ಲಿ 45 ರನ್‌ ಸೇರಿಸಿತು.

CSK vs LSG

ಎರಡನೇ ವಿಕೆಟ್‌ಗೆ ನಾಯಕ ರುತುರಾಜ್ ಗಾಯಕ್ವಾಡ್ ಹಾಗೂ 27 ವರ್ಷದ ಉರ್ವಿಲ್ ಪಟೇಲ್ ಜೋಡಿ ಸಮಯೋಚಿತ ಬ್ಯಾಟಿಂಗ್ ನಡೆಸಿತು. ಈ ಜೋಡಿ ಎರಡನೇ ವಿಕೆಟ್‌ಗೆ 34 ಎಸೆತಗಳಲ್ಲಿ 81 ರನ್‌ ಸೇರಿಸಿತು. ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ ಉರ್ವಿಲ್ ಪಟೇಲ್ ಸಿಕ್ಕ ಅವಕಾಶವನ್ನು ಬಳಸಿಕೊಂಡು ಅಬ್ಬರಿಸಿದರು. ಇವರು 23 ಎಸೆತಗಳಲ್ಲಿ 2 ಬೌಂಡರಿ, 8 ಸಿಕ್ಸರ್ ಸಹಾಯದಿಂದ 65 ರನ್‌ ಸಿಡಿಸಿ ಔಟ್ ಆದರು. ಕಾರ್ತಿಕ್ ಶರ್ಮಾ 20, ಡೆವಾಲ್ಡ್ ಬ್ರೇವಿಸ್ 10 ರನ್ ಬಾರಿಸಿ ಔಟ್ ಆದರು.

ಶಿವಂ ದುಬೇ (ಅಜೇಯ 15) ಹಾಗೂ ಪ್ರಶಾಂತ್ ವೀರ್ (ಅಜೇಯ 17) ತಂಡವನ್ನು ಜಯದ ದಡ ದಾಟಿಸಿದರು. ಸಿಎಸ್‌ಕೆ 19.2 ಓವರ್‌ಗಳಲ್ಲಿ 5 ವಿಕೆಟ್‌ಗೆ 208 ರನ್‌ ಸೇರಿಸಿತು.

ಇಂಗ್ಲಿಸ್‌ ಅಬ್ಬರ

ಟಾಸ್ ಗೆದ್ದ ಸಿಎಸ್‌ಕೆ ಬೌಲಿಂಗ್ ಮಾಡುವ ನಿರ್ಧಾರವನ್ನು ಮಾಡಿತು. ಚೆನ್ನೈ ವಿರುದ್ಧದ ಪಂದ್ಯದಲ್ಲಿ ಎಲ್‌ಎಸ್‌ಜಿ ಮತ್ತೊಮ್ಮೆ ಆರಂಭಿಕ ಆಟಗಾರರನ್ನು ಬದಲಾವಣೆ ಮಾಡಿ ಕಣಕ್ಕೆ ಇಳಿಸಿತು. ಮಿಚೆಲ್ ಮಾರ್ಷ್ ಅವರೊಂದಿಗೆ ಇನಿಂಗ್ಸ್ ಆರಂಭಿಸುವ ಹೊಣೆಯನ್ನು ಎಲ್‌ಎಸ್‌ಜಿ ತಂಡ 31 ವರ್ಷದ ಆಸ್ಟ್ರೇಲಿಯಾದ ಜೋಶ್‌ ಇಂಗ್ಲಿಸ್‌‌ ಅವರಿಗೆ ಅವಕಾಶ ಸಿಕ್ಕಿತು. ಈ ಅವಕಾಶವನ್ನು ಎರಡೂ ಕೈಗಳಿಂದ ಬಳಸಿಕೊಂಡ ಜೋಶ್‌ ಅಬ್ಬರಿಸಿದರು. ಪವರ್‌ ಪ್ಲೇನ ಸಂಪೂರ್ಣ ಲಾಭ ಪಡೆದ ಎಲ್‌ಎಸ್‌ಜಿ ಆರಂಭಿಕರು 91 ರನ್‌ಗಳ ಉಪಯುಕ್ತ ಕಾಣಿಕೆ ನೀಡಿದರು. ಈ ವೇಳೆ ಮಿಚೆಲ್‌ ಮಾರ್ಶ್ 10 ರನ್ ಬಾರಿಸಿ ಔಟ್ ಆದರು. ನಿಕೋಲಸ್ ಪೂರನ್ (1) ರನ್‌ ಕಲೆ ಹಾಕುವಲ್ಲಿ ಎಡವಿದರು.

CSK vs LSG

ಆರಂಭಿಕ ಜೋಶ್ ಇಂಗ್ಲಿಸ್‌‌ ಕೇವಲ 33 ಎಸೆತಗಳಲ್ಲಿ 10 ಬೌಂಡರಿ, 6 ಸಿಕ್ಸರ್ ಸಹಾಯದಿಂದ 85 ರನ್ ಬಾರಿಸಿ ಔಟ್ ಆದರು. 91 ರನ್‌ಗಳಿಗೆ 1 ವಿಕೆಟ್‌ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡ 130 ರನ್‌ ಆಗುವಷ್ಟರಲ್ಲಿ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಕೆಳ ಮಧ್ಯಮ ಕ್ರಮಾಂಕದಲ್ಲಿ ಶಹಬಾಜ್ ಅಹ್ಮದ್ 25 ಎಸೆತಗಳಲ್ಲಿ 3 ಬೌಂಡರಿ, 3 ಸಿಕ್ಸರ್ ಸಹಾಯದಿಂದ ಅಜೇಯ 43 ರನ್‌ ಸಿಡಿಸಿ ತಂಡದ ಮೊತ್ತ ಹಿಗ್ಗಿಸಿದರು. ಅಂತಿಮವಾಗಿ ಎಲ್‌ಎಸ್‌ಜಿ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 203 ರನ್‌ ಕಲೆ ಹಾಕಿತು. ಸಿಎಸ್‌ಕೆ ಪರ ಜೇಮಿ ಓವರ್‌ಟನ್‌ 4 ಓವರ್‌ ಬೌಲ್ ಮಾಡಿ 36 ರನ್‌ ನೀಡಿ 3 ವಿಕೆಟ್‌ ಪಡೆದರು.

ಅಂಕಪಟ್ಟಿಯ ಮಾಹಿತಿ

ಚೆನ್ನೈ ಸೂಪರ್ ಕಿಂಗ್ಸ್ ತಂಡ ಆಡಿದ 11 ಪಂದ್ಯಗಳಲ್ಲಿ 6 ಜಯ, 5 ಸೋಲು ಕಂಡಿದ್ದು, 12 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ. ಎಲ್‌ಎಸ್‌ಜಿ ಲೀಗ್‌ನಲ್ಲಿ 8ನೇ ಸೋಲು ಕಂಡಿದ್ದು ಪ್ಲೇ ಆಫ್‌ ಆಸೆಯನ್ನು ಕೈ ಬಿಟ್ಟಿದೆ.

Story first published: Sunday, May 10, 2026, 20:56 [IST]
Other articles published on May 10, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+