For Quick Alerts
ALLOW NOTIFICATIONS  
For Daily Alerts
 

CSK vs MI: ಮುಂಬೈ ತವರಿನಲ್ಲಿ ಮುಖಭಂಗ ಅನುಭವಿಸಲು ಈ ಪ್ಲೇಯರ್ ಕಾರಣ

ಮುಂಬೈ: 19ನೇ ಆವೃತ್ತಿ ಐಪಿಎಲ್‌ನ ಮಹತ್ವದ ಪಂದ್ಯಕ್ಕೆ ವಾಂಖೆಡೆ ಮೈದಾನ ಸಜ್ಜಾಗಿತ್ತು. 33ನೇ ಪಂದ್ಯದಲ್ಲಿ 5 ಬಾರಿ ಐಪಿಎಲ್ ಚಾಂಪಿಯನ್‌ ಪಟ್ಟವನ್ನು ಅಲಂಕರಿಸಿದ ಚೆನ್ನೈ ಸೂಪರ್ ಕಿಂಗ್ಸ್‌ (ಸಿಎಸ್‌ಕೆ) ಹಾಗೂ ಮುಂಬೈ ಇಂಡಿಯನ್ಸ್ (ಎಂಐ) ತಂಡಗಳು ಕಾದಾಟ ನಡೆಸಿದವು. ಈ ಪಂದ್ಯದಲ್ಲಿ ಗೆಲುವು ಸಾಧಿಸುವುದು ಉಭಯ ತಂಡಗಳಿಗೂ ಮಹತ್ವದಾಗಿತ್ತು.

ಮುಂಬೈ ಇಂಡಿಯನ್ಸ್‌ ತಂಡ ಟಾಸ್‌ ಸೋತರೂ ಮೊದಲು ಬೌಲಿಂಗ್ ಮಾಡಿತು. ಮೊದಲು ಬ್ಯಾಟ್ ಮಾಡಿದ ಚೆನ್ನೈ ತಂಡದ ಆರಂಭ ಸಾಧಾರಣವಾಗಿತ್ತು. ಟಾಪ್‌ ಆರ್ಡರ್ ಬ್ಯಾಟರ್‌ಗಳಾದ ರುತುರಾಜ್ ಗಾಯಕ್ವಾಡ್ (22), ಸರ್ಫರಾಜ್ ಖಾನ್ (14), ಶಿವಂ ದುಬೆ (5) ರನ್‌ ಕಲೆ ಹಾಕಿದರು. ಮಧ್ಯಮ ಕ್ರಮಾಂಕದಲ್ಲಿ ಡೆವಾಲ್ಡ್ ಬ್ರೆವಿಸ್ 21 ರನ್‌ ಸಿಡಿಸಿ ತಂಡಕ್ಕೆ ಆಧಾರವಾದರು.

CSK vs MI

ಚೆನ್ನೈ ತಂಡದ ರನ್‌ ವೇಗಕ್ಕೆ ಸಂಜು ಸ್ಯಾಮ್ಸನ್‌ ಚುರುಕು ಮುಟ್ಟಿಸಿದರು. ಇವರು ತಮ್ಮ ಕ್ಲಾಸಿಕ್ ಆಟವನ್ನು ಪ್ರದರ್ಶಿಸಿ ಶತಕ ಬಾರಿಸಿದರು. ಇವರು 54 ಎಸೆತಗಳಲ್ಲಿ 10 ಬೌಂಡರಿ, 6 ಸಿಕ್ಸರ್ ಸಹಾಯದಿಂದ ಅಜೇಯ 101 ರನ್‌ ಸಿಡಿಸಿದರು. ಈ ಮೂಲಕ ಈ ಲೀಗ್‌ನಲ್ಲಿ ಎರಡನೇ ಶತಕ ದಾಖಲಿಸಿದರು. ಇವರ ಈ ಅಬ್ಬರದ ಬ್ಯಾಟಿಂಗ್ ಸಿಎಸ್‌ಕೆ ತಂಡದ ಗೆಲುವಿನ ದಿಕ್ಕನ್ನು ನಿರ್ಧರಿಸಲು ಕಾರಣವಾಯಿತು.

208 ರನ್‌ ಗುರಿಯನ್ನು ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ ತಂಡದ ಟಾಪ್ ಆರ್ಡರ್ ಬ್ಯಾಟರ್‌ಗಳು ರನ್‌ ಕಲೆ ಹಾಕುವಲ್ಲಿ ವಿಫಲರಾದರು. ಸೂರ್ಯಕುಮಾರ್ ಯಾದವ್ 35, ತಿಲಕ್ ವರ್ಮಾ 37 ರನ್‌ ಸಿಡಿಸಿ ಸೋಲಿನ ಅಂತರವನ್ನು ಕಡಿಮೆ ಮಾಡಿದರು. ಉಳಿದ ಮುಂಬೈ ಬ್ಯಾಟರ್‌ಗಳು ರನ್‌ ಕಲೆ ಹಾಕುವಲ್ಲಿ ವಿಫಲರಾಗಿ 103 ರನ್ ಸೋಲು ಕಂಡಿತು.

ಪಂದ್ಯಕ್ಕೆ ತಿರುವು ನೀಡಿದ್ದೇ ಈ ಬೌಲರ್‌

ಅಕೇಲ್ ಹೊಸೈನ್ ಮುಂಬೈ ತಂಡದ ಬ್ಯಾಟರ್‌ಗಳಿಗೆ ಬಹುವಾಗಿ ಕಾಡಿದರು. ಆರಂಭಿಕ ದನೀಶ್ ಮಾಲೇವಾರ್ ಅವರನ್ನು ಅಕೇಲ್ ಹೊಸೈನ್ ಮೊದಲ ಓವರ್‌ನ ಕೊನೆಯ ಎಸೆತದಲ್ಲಿ ಖೆಡ್ಡಾ ತೋಡಿದರು. ಇವರು ತಮ್ಮ ಮುಂದಿನ ಓವರ್‌ನಲ್ಲಿ ನಮನ್‌ ಧಿರ್‌ (0) ಅವರನ್ನು ಪೆವಿಲಿಯನ್‌ಗೆ ಅಟ್ಟಿದರು. ಮಧ್ಯಮ ಕ್ರಮಾಂಕದಲ್ಲಿ ಭರವಸೆ ತಿಲಕ್ ವರ್ಮಾ (37), ಸೂರ್ಯಕುಮಾರ್ ಯಾದವ್ (35) ಅವರು ಮುಂಬೈ ಪರ ಗೆಲುವಿನ ಆಸೆ ಚಿಗುರಿಸಿತ್ತು. ಆದರೆ ಈ ಜೋಡಿಗೂ ಅಕೇಲ್ ಹೊಸೈನ್ ಔಟ್ ಮಾಡಿ ಚೆನ್ನೈ ತಂಡ ಪಂದ್ಯದಲ್ಲಿ ಮೇಲುಗೈ ಸಾಧಿಸುವಂತೆ ಮಾಡಿದರು. ನಿಜಕ್ಕೂ ಚೆನ್ನೈ ಗೆಲುವು ಸಾಧಿಸಲು ಇವರ ಮಾರಕ ಸ್ಪೆಲ್ ಕಾರಣ.


ಪಂದ್ಯದ ಫಲಿತಾಂಶ:

ಚೆನ್ನೈ ಸೂಪರ್ ಕಿಂಗ್ಸ್‌ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 207 ರನ್‌: ಸಂಜು ಸ್ಯಾಮ್ಸನ್‌ 101 ರನ್‌, ಗಜನ್‌ಫರ್ 25ಕ್ಕೆ 2

ಮುಂಬೈ ಇಂಡಿಯನ್ಸ್‌ 19 ಓವರ್‌ಗಳಲ್ಲಿ 104: ತಿಲಕ್ ವರ್ಮಾ 37, ಸೂರ್ಯಕುಮಾರ್ ಯಾದವ್ 35, ಅಕೇಲ್ ಹೊಸೈನ್ 17ಕ್ಕೆ 4

ಪಂದ್ಯದ ಫಲಿತಾಂಶ: ಸಿಎಸ್‌ಕೆ ಜಯ

Story first published: Friday, April 24, 2026, 7:05 [IST]
Other articles published on Apr 24, 2026
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+