CSK vs SRH IPL 2025: ಮೂರನೇ ಗೆಲುವಿನ ಹುಡುಕಾಟದಲ್ಲಿ ಸಿಎಸ್‌ಕೆ, ಸನ್‌ರೈಸರ್ಸ್ ಹೈದರಾಬಾದ್
ಚೆನ್ನೈ ಎಂ ಚಿದಂಬರಂ ಮೈದಾನದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಕಾದಾಟ ನಡೆಸಲಿವೆ. ಉಭಯ ತಂಡಗಳು ಅಂಕಪಟ್ಟಿಯಲ್ಲಿ ಕೆಳಗಿನಿಂದ ಮೊದಲ ಹಾಗೂ ಎರಡನೇ ಸ್ಥಾನದಲ್ಲಿದೆ. 18ನೇ ಆವೃತ್ತಿಯ ಐಪಿಎಲ್‌ನಲ್ಲಿ ಉಭಯ ತಂಡಗಳು 8 ಪಂದ್ಯಗಳನ್ನು ಆಡಿದ್ದು, ಕೇವಲ 2 ಜಯ ದಾಖಲಿಸಿದೆ. ಮೂರನೇ ಗೆಲುವಿಗಾಗಿ ಸನ್ ಹಾಗು ಸಿಎಸ್‌ಕೆ ತಂಡಗಳು ಪ್ಲ್ಯಾನ್ ಮಾಡಿಕೊಂಡಿವೆ.
ಉಭಯ ತಂಡಗಳು ಈಗಾಗಲೇ ಐಪಿಎಲ್‌ನಲ್ಲಿ 21 ಬಾರಿ ಮುಖಾಮುಖಿ ಆಗಿದ್ದು, ಚೆನ್ನೈ 15, ಎಸ್‌ಆರ್‌ಎಚ್ 6 ಪಂದ್ಯಗಳಲ್ಲಿ ಜಯ ಸಾಧಿಸಿದೆ. ಇನ್ನು ಉಭಯ ತಂಡಗಳ ನಡುವಿನ ಕಾದಾಟದಲ್ಲಿ 223 ರನ್ ಗರಿಷ್ಠ ಸ್ಕೋರ್ ಆಗಿದ್ದು, 132 ರನ್ ಕಡಿಮೆ ಸ್ಕೋರ್ ಆಗಿದೆ.

ಹೇಗಿದೆ ಪಿಚ್
ಚೆನ್ನೈ ಪಿಚ್ ಸ್ಪಿನ್ ಬೌಲರ್‌ಗಳಿಗೆ ಸಹಾಯ ಮಾಡಲಿದೆ. ಈ ಮೈದಾನದಲ್ಲಿ ಒಟ್ಟು 50 ವಿಕೆಟ್ ಬಿದ್ದಿದ್ದು, 27 ವಿಕೆಟ್‌ಗಳನ್ನು ಸ್ಪಿನ್ ಬೌಲರ್‌ಗಳು ಪಡೆದಿದ್ದಾರೆ. ಚೆನ್ನೈ ತಂಡದ ಸ್ಪಿನ್ ಬೌಲರ್‌ಗಳಿಗೆ ಉತ್ತರಿಸುವಲ್ಲಿ ಹೆಣಗಾಟ ನಡೆಸಿದೆ. ಎಸ್‌ಆರ್‌ಎಚ್ ಚೆನ್ನೈನಲ್ಲಿ ಒಮ್ಮೆಯೂ ಪಂದ್ಯವನ್ನ ಗೆದ್ದಿಲ್ಲ.
ಧೋನಿ ಆಕರ್ಷಣೆ
ತಮ್ಮ ಟಿ20 ಕ್ರಿಕೆಟ್‌ನ 400ನೇ ಪಂದ್ಯವನ್ನು ಆಡುತ್ತಿರುವ ಧೋನಿ ಅವರ ಮೇಲೆ ಎಲ್ಲರ ಚಿತ್ತ ನೆಟ್ಟಿರಲಿದೆ. ಇವರು ಎಸ್‌ಆರ್‌ಎಚ್ ವಿರುದ್ಧದ ಪಂದ್ಯದಲ್ಲಿ ಅಂಗಳಕ್ಕೆ ಇಳಿಯುತ್ತಿದ್ದಂತೆ ಇತಿಹಾಸದ ಪುಟ ಸೇರಲಿದ್ದಾರೆ. ಇವರ ಈ ಸ್ಮರಣೀಯ ಪಂದ್ಯವನ್ನು ಅವಿಸ್ಮರಣೀಯವಾಗಿಸಲು ಚೆನ್ನೈ ಸಹ ಪ್ಲ್ಯಾನ್ ಮಾಡಿಕೊಂಡಿದೆ.

ಚೆನ್ನೈ ತಂಡದಲ್ಲೂ ಸ್ಟಾರ್ ಆಟಗಾರರು ಇದ್ದು ಸಿಎಸ್‌ಕೆ ಗೆಲುವಿಗೆ ಅಗತ್ಯ ಕಾಣಿಕೆ ನೀಡಬೇಕಿದೆ. ರಚಿನ್ ರವೀಂದ್ರ, ಶೈಕ್ ರಶೀದ್, ಆಯುಷ್ ಮಾತ್ರೆ, ಶಿವಂ ದುಬೆ, ವಿಜಯ್ ಶಂಕರ್ ಈ ಬ್ಯಾಟರ್‌ಗಳು ತಮ್ಮ ಅನುಭವ ಬಳಸಿಕೊಂಡು ಬ್ಯಾಟ್ ಮಾಡಿ ತಂಡಕ್ಕೆ ನೆರವಾಗಬೇಕಿದೆ. ಆಲ್‌ರೌಂಡರ್ ರೂಪದಲ್ಲಿ ಕಾಣಿಸಿಕೊಳ್ಳಲಿರುವ ರವೀಂದ್ರ ಜಡೇಜಾ, ಅಶ್ವಿನ್ ಬಿಗುವಿನ ದಾಳಿ ಹಾಗೂ ಅಮೋಘ ಬ್ಯಾಟಿಂಗ್‌ನಿಂದ ತಂಡಕ್ಕೆ ನೆರವಾಗಬೇಕಿದೆ.
ಚೆನ್ನೈ ತಂಡದ ವೇಗ ಬೌಲಿಂಗ್ ನೊಗವನ್ನು ಖಲೀಲ್ ಅಹ್ಮದ್ ಮತೀಶ್ ಪತಿರಾಣ ಹೊರಲಿದ್ದು ಪರ್ಫೆಕ್ಟ್ ಲೈನ್ ಹಾಗೂ ಲೆಂಥ್‌ನಲ್ಲಿ ದಾಳಿ ನಡೆಬೇಕು. ಸ್ಪಿನ್ ಬೌಲರ್ ನೂರ್ ಅಹ್ಮದ್ ತಮ್ಮ ಸ್ಥಿರ ಪ್ರದರ್ಶನವನ್ನು ನೀಡುವಲ್ಲಿ ಸಫಲರಾದರೆ, ಗೆಲುವಿನ ಆಸೆ ಚಿಗುರಬಹುದು.
ಒತ್ತಡದಲ್ಲಿ ಸನ್
ಸನ್‌ರೈಸರ್ಸ್ ತಂಡದ ಟಾಪ್ ಆರ್ಡರ್ ಬ್ಯಾಟರ್‌ಗಳ ಬ್ಯಾಟ್‌ನಿಂದ ರನ್‌ಗಳು ಬಾರದೆ ಇರುವುದು ಟೆನ್ಷನ್ ಹೆಚ್ಚಿಸಿದೆ. ಮಹತ್ವದ ಪಂದ್ಯದಲ್ಲಿ ಈ ಆಟಗಾರರು ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡುವ ಅನಿವಾರ್ಯತೆ ಇದೆ. ಇನ್ನು ಹ್ಯಾನ್ರಿಕ್ ಕ್ಲಾಸೆನ್, ಕನ್ನಡಿಗ ಅಭಿನವ್ ಮನೋಹರ್ ತಮ್ಮ ನೈಜ್ಯ ಆಟವನ್ನು ಆಡಿ ತಂಡದ ಮೊತ್ತವನ್ನು ಹಿಂದಿನ ಪಂದ್ಯದಲ್ಲಿ ಹಿಗ್ಗಿಸಿದ್ದರು. ಈ ಪಂದ್ಯದಲ್ಲೂ ಅವಕಾಶ ಸಿಕ್ಕಾಗಲೆಲ್ಲಾ ಇದೇ ರೀತಿ ಪ್ರದರ್ಶನ ನೀಡಬೇಕಿದೆ. ಇನ್ನು ಬೌಲರ್‌ಗಳು ತಮ್ಮ ಲೈನ್ ಹಾಗೂ ಲೆಂಥ್ ಮೇಲೆ ಕಂಟ್ರೋಲ್ ಇಟ್ಟುಕೊಂಡು ಬೌಲ್ ಮಾಡಿದ್ದೇ ಆದಲ್ಲಿ ಗೆಲುವಿನ ಆಸೆ ಚಿಗುರುತ್ತದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications