ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 19ನೇ ಆವೃತ್ತಿಗೆ ತೆರೆ ಮರೆಯ ಕಾರ್ಯಗಳು ನಡೆದಿವೆ. ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡ ಕಾದಾಡಲಿವೆ. ಈ ಆವೃತ್ತಿಯನ್ನು ಗೆಲುವಿನೊಂದಿಗೆ ಆರಂಭಿಸಲು ಸನ್ ತಂಡ ಪ್ಲ್ಯಾನ್ ಮಾಡಿಕೊಂಡಿದೆ. ಆದರೆ ತಂಡದ ನಾಯಕ ಪ್ಯಾಟ್ ಕಮಿನ್ಸ್ ಆರಂಭಿಕ ಪಂದ್ಯಗಳಲ್ಲಿ ಆಡುವುದು ಅನುಮಾನವಾಗಿದೆ. ಇವರ ಅನುಪಸ್ಥಿತಿಯಲ್ಲಿ ತಂಡವನ್ನು ಮುನ್ನಡೆಸುವ ಜವಾಬ್ದಾರಿ ಎಸ್‌ಆರ್‌ಎಚ್ ತಂಡ ಯುವ ಆಟಗಾರನ ಹೆಗಲಿಗೆ ಹೇರುವ ಸಾಧ್ಯತೆ ಇದೆ.
ಪ್ಯಾಟ್ ಕಮಿನ್ಸ್ ಅವರಿಗೆ ನೀಡಿದ ಜವಾಬ್ದಾರಿಯನ್ನು ಅವರು ಸಮರ್ಥವಾಗಿ ನಿಭಾಯಿಸಿದ್ದರು. ಇವರ ನಾಯಕತ್ವದಲ್ಲಿ ತಂಡ ಒಮ್ಮೆ ಫೈನಲ್‌ಗೆ ಅರ್ಹತೆ ಪಡೆದಿತ್ತು. ವಿಶ್ವ ಕ್ರಿಕೆಟ್‌ನಲ್ಲಿ ತಮ್ಮ ಬಿಗುವಿನ ದಾಳಿಯಿಂದ ಹೆಸರುವಾಸಿಯಾಗಿರುವ ಇವರ ಅನುಪಸ್ಥಿತಿ ಆರಂಭಿಕ ಪಂದ್ಯಗಳಲ್ಲಿ ಎಸ್‌ಆರ್‌ಎಚ್ ತಂಡಕ್ಕೆ ಕಾಡಲಿದೆ. ಆಷಸ್ ಸರಣಿಯ ಬಳಿಕ ಇವರು ಮೈದಾನಕ್ಕೆ ಇಳಿದಿಲ್ಲ. ಗಾಯದಿಂದ ಇನ್ನು ಚೇತರಿಸಿಕೊಳ್ಳದ ಕಾರಣ ಇವರು ಆರಂಭಿಕ ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ. ಈ ವೇಳೆ ಈ ಸ್ಥಾನವನ್ನು ಭಾರತದ ಇಬ್ಬರು ಯುವ ಎಡಗೈ ಆಟಗಾರರು ಈ ಸ್ಥಾನ ತುಂಬುವ ನಿರೀಕ್ಷೆ ಇದೆ.

ವರದಿಗಳ ಅನುಸಾರ ಎಸ್‌ಆರ್‌ಎಚ್ ತಂಡವನ್ನು ಪ್ಯಾಟ್ ಕಮಿನ್ಸ್ ಅವರ ಅನುಪಸ್ಥಿತಿಯಲ್ಲಿ ಇಶಾನ್ ಕಿಶನ್ ಮುನ್ನಡೆಸಬಹುದು ಎಂದು ತಿಳಿದು ಬಂದಿದೆ. ಇಶಾನ್ ಅವರು ದೇಶೀಯ ಟೂರ್ನಿಗಳಲ್ಲಿ ಜಾರ್ಖಂಡ್ ತಂಡವನ್ನು ಮುನ್ನಡೆಸಿದ ಅನುಭವ ಹೊಂದಿದ್ದಾರೆ. ಹೀಗಾಗಿ ಇವರಿಗೆ ತಂಡದ ಪಟ್ಟ ಕಟ್ಟುವ ಸಾಧ್ಯತೆ ಇದೆ.
ಇನ್ನು ಈ ಸ್ಥಾನವನ್ನು ಅಭಿಷೇಕ್ ಶರ್ಮಾ ಅವರಿಗೂ ನೀಡಬಹುದು ಎಂಬ ಮಾತುಗಳು ಕೇಳಿ ಬರುತ್ತಿವೆ. ಅಭಿಷೇಕ್ ಶರ್ಮಾ ತಂಡದ ನಾಯಕರಾಗುವ ನಿರೀಕ್ಷೆಯಿದೆ. ಈ ಬಗ್ಗೆ ಅಭಿಷೇಕ್ ಶರ್ಮಾ ಅಥವಾ ಸನ್‌ರೈಸರ್ಸ್ ಹೈದರಾಬಾದ್‌ನಿಂದ ಯಾವುದೇ ಮಾಹಿತಿ ಬಂದಿಲ್ಲ.
ಈ ಇಬ್ಬರೂ ಆಟಗಾರರು ಇತ್ತೀಚಿಗೆ ನಡೆದ ಟಿ20 ವಿಶ್ವಕಪ್‌ನಲ್ಲಿ ಸ್ಥಿರ ಪ್ರದರ್ಶನ ನೀಡಿದ್ದಾರೆ. ಅದರಲ್ಲೂ ಇಶಾನ್ ಕಿಶನ್ ಸಿಕ್ಕ ಅವಕಾಶವನ್ನು ಎರಡೂ ಕೈಗಳಿಂದ ಬಳಸಿಕೊಂಡು ಅಬ್ಬರಿಸಿದ್ದಾರೆ. ಅಭಿಷೇಕ್ ಶರ್ಮಾ ಮಹತ್ವದ ಫೈನಲ್ ಪಂದ್ಯದಲ್ಲಿ ಅರ್ಧಶತಕ ಬಾರಿಸಿ ಮಿಂಚಿದ್ದಾರೆ. ಅಲ್ಲದೆ ಈ ಇಬ್ಬರೂ ಆಟಗಾರರಿಗೆ ಐಪಿಎಲ್ ಆಡಿದ ಅನುಭವ ಹೆಚ್ಚಿದೆ. ಹೀಗಾಗಿ ಈ ಇಬ್ಬರಲ್ಲಿ ಯಾರಿಗೆ ನಾಯಕತ್ವ ಸಿಗುತ್ತದೆ ಎಂಬುದು ಕುತೂಹಲ ಮೂಡಿಸಿದೆ. ಈ ಇಬ್ಬರೂ ಆಟಗಾರರು ಎಸ್‌ಆರ್‌ಎಚ್ ಪರ ಟಾಪ್ ಆರ್ಡರ್‌ನಲ್ಲಿ ಬ್ಯಾಟಿಂಗ್ ಮಾಡಲಿದ್ದು, ಬಿರುಸಿನ ಆಟಕ್ಕೆ ಹೆಸರುವಾಸಿಯಾಗಿದ್ದಾರೆ.

ಮಾರ್ಚ್ 28, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಬೆಂಗಳೂರು
ಏಪ್ರಿಲ್ 2, ಕೋಲ್ಕತ್ತಾ ನೈಟ್ ರೈಡರ್ಸ್, ಕೋಲ್ಕತ್ತಾ
ಏಪ್ರಿಲ್ 5, ಲಕ್ನೋ ಸೂಪರ್ ಜೈಂಟ್ಸ್, ಹೈದರಾಬಾದ್
ಏಪ್ರಿಲ್ 11, ಪಂಜಾಬ್ ಕಿಂಗ್ಸ್ , ನ್ಯೂ ಚಂಡೀಗಢ