ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತದ ವಿರುದ್ಧದ ಟಿ 20 ಸರಣಿಗೆ ಇಂಗ್ಲೆಂಡ್‌ ತಂಡದಲ್ಲಿ 'ಅಣ್ತಮ್ಮ'

curran brothers selected for england squad

ಲಂಡನ್, ಜೂನ್ 19: ಆಸ್ಟ್ರೇಲಿಯಾ ಮತ್ತು ಭಾರತ ವಿರುದ್ಧದ ಮಹತ್ವದ ಟಿ 20 ಸರಣಿಗೆ ಇಂಗ್ಲೆಂಡ್ ತಂಡಕ್ಕೆ ಸ್ಯಾಮ್ ಮತ್ತು ಟಾಮ್ ಕುರ್ರನ್ ಸಹೋದರರನ್ನು ಆಯ್ಕೆ ಮಾಡಲಾಗಿದೆ.

1999ರಲ್ಲಿ ಬೆನ್ ಹೋಲಿಯೋಕ್ ಮತ್ತು ಆಡಂ ಹೋಲಿಯೋಕ್ ಸಹೋದರರು ಒಟ್ಟಿಗೆ ಅಂತರರಾಷ್ಟ್ರೀಯ ಪಂದ್ಯವಾಡಿದ್ದರು. ಅವರ ಬಳಿಕ ಇದೇ ಮೊದಲ ಬಾರಿಗೆ ಸಹೋದರರ ಜೋಡಿ ಇಂಗ್ಲೆಂಡ್ ತಂಡದಲ್ಲಿ ಸೇರಿಕೊಂಡಿದೆ.

ಸರ್ರೆ ಕೌಂಟಿ ತಂಡದ ಪರ ಆಡಿ ಗುರುತಿಸಿಕೊಂಡಿರುವ ಕುರ್ರನ್ ಸಹೋದರರು ಈಗಾಗಲೇ ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಆದರೆ, ಇಬ್ಬರೂ ಒಟ್ಟಿಗೆ ತಂಡದಲ್ಲಿ ಆಡಿಲ್ಲ.

34 ವರ್ಷಗಳ ಬಳಿಕ ಏಕದಿನ Rankನಲ್ಲಿ ಆಸ್ಟ್ರೇಲಿಯಾ ತೀರಾ ಕುಸಿತ34 ವರ್ಷಗಳ ಬಳಿಕ ಏಕದಿನ Rankನಲ್ಲಿ ಆಸ್ಟ್ರೇಲಿಯಾ ತೀರಾ ಕುಸಿತ

ಇಂಗ್ಲೆಂಡ್ ತಂಡದ ಪ್ರಮುಖ ಆಲ್‌ರೌಂಡರ್‌ಗಳಾದ ಕ್ರಿಸ್ ವೋಕ್ಸ್ ಮತ್ತು ಬೆನ್ ಸ್ಟೋಕ್ಸ್ ಗಾಯದ ಕಾರಣ ಈ ಸರಣಿಗಳಿಂದ ದೂರವುಳಿದಿದ್ದಾರೆ. ಆದರೆ, ಬೆನ್ ಸ್ಟೋಕ್ಸ್ ತಂಡದಲ್ಲಿ ಉಳಿದುಕೊಳ್ಳಲಿದ್ದು, ಗುಣಮುಖರಾದರೆ ಆಡಲಿದ್ದಾರೆ.

ಹೀಗಾಗಿ ಕುರ್ರನ್ ಸಹೋದರರಿಬ್ಬರಿಗೂ ತಂಡದಲ್ಲಿ ಆಡುವ ಅವಕಾಶ ಸಿಗುವ ಸಾಧ್ಯತೆ ಹೆಚ್ಚಿದೆ. ಇಂಗ್ಲೆಂಡ್ ತಂಡವು ಆಡಿದ ಕಳೆದ 10 ಟಿ 20 ಪಂದ್ಯಗಳಲ್ಲಿ 3ರಲ್ಲಿ ಮಾತ್ರ ಗೆಲುವು ಕಂಡಿದೆ.

ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ವಿರುದ್ಧದ ತ್ರಿಕೋನ ಸರಣಿಯಲ್ಲಿ ಆಡಿದ್ದ ಸ್ಯಾಮ್ ಬಿಲ್ಲಿಂಗ್ಸ್, ಡೇವಿಡ್ ಮಲಾನ್, ಲಿಯಾಮ್ ಡಾಸನ್, ಜೇಮ್ಸ್ ವಿನ್ಸ್ ಅವರಿಗೆ ತಂಡದಲ್ಲಿ ಸ್ಥಾನ ಸಿಕ್ಕಿಲ್ಲ.

ಚೆಂಡು ವಿರೂಪ: ಚಂಡಿಮಾಲ್ ಸಿಕ್ಕಿಬಿದ್ದಿದ್ದು ಹೇಗೆ ಗೊತ್ತಾ?ಚೆಂಡು ವಿರೂಪ: ಚಂಡಿಮಾಲ್ ಸಿಕ್ಕಿಬಿದ್ದಿದ್ದು ಹೇಗೆ ಗೊತ್ತಾ?

ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿಯಲ್ಲಿ ವಿಫಲರಾದ ಬೌಲರ್ ಮಾರ್ಕ್ ವುಡ್ ಅವರಿಗೆ ವಿಶ್ರಾಂತಿ ನೀಡಲಾಗಿದೆ.

ಹಾಗೆಯೇ, ಕಳೆದ ಟಿ 20 ಸರಣಿಯಲ್ಲಿ ವಿಶ್ರಾಂತಿ ಪಡೆದಿದ್ದ ಮೋಯಿನ್ ಅಲಿ, ಜೋ ರೂಟ್ ಮತ್ತು ಜಾನಿ ಬೈರ್‌ಸ್ಟೋ ಹಾಗೂ ಜೇಕ್ ಬಾಲ್ ತಂಡಕ್ಕೆ ಮರಳಿದ್ದಾರೆ.

ಟಿ 20 ವೇಳಾಪಟ್ಟಿ:
ಇಂಗ್ಲೆಂಡ್-ಆಸ್ಟ್ರೇಲಿಯಾ (ಜೂನ್ 27)

ಭಾರತದ ವಿರುದ್ಧದ ಸರಣಿ: ಜುಲೈ 3, ಜುಲೈ 6 ಮತ್ತು ಜುಲೈ 8

ಇಂಗ್ಲೆಂಡ್ ತಂಡ:
ಇಯಾನ್ ಮಾರ್ಗನ್ (ನಾಯಕ), ಮೋಯಿನ್ ಅಲಿ, ಜೊನಾಥನ್ ಬೈರ್‌ಸ್ಟೋ, ಜೇಕ್ ಬಾಲ್, ಜೋಸ್ ಬಟ್ಲರ್, ಸ್ಯಾಮ್ ಕುರ್ರನ್, ಟಾಮ್ ಕುರ್ರನ್, ಅಲೆಕ್ಸ್ ಹೇಲ್ಸ್, ಕ್ರಿಸ್ ಜೋರ್ಡಾನ್, ಲಿಯಾಮ್ ಪ್ಲಂಕೆಟ್, ಆದಿಲ್ ರಷೀದ್, ಜೋ ರೂಟ್, ಜೇಸನ್ ರಾಯ್, ಡೇವಿಡ್ ವಿಲ್ಲೆ.

Story first published: Tuesday, June 19, 2018, 19:06 [IST]
Other articles published on Jun 19, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X