"ಕಠಿಣ ವಿಕೆಟ್‌ನಲ್ಲಿ ಟೆಸ್ಟ್ ಮ್ಯಾಚ್ ಆಡಿದಂತೆ": ಸದ್ಯದ ಪರಿಸ್ಥಿತಿ ವಿವರಿಸಿದ ಗಂಗೂಲಿ

ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಸದ್ಯದ ಪರಿಸ್ಥಿತಿಯನ್ನು ಟೆಸ್ಟ್ ಕ್ರಿಕೆಟ್‌ಗೆ ಹೋಲಿಸಿ ವಿವರಿಸಿದ್ದಾರೆ. ಈಗಿನ ಪರಿಸ್ಥಿತಿ ಹೇಗಿದೆಯೆಂದರೆ ಅಪಾಯಕಾರಿ ಪಿಚ್‌ನಲ್ಲಿ ಟೆಸ್ಟ್ ಪಂದ್ಯವನ್ನಾಡಿದಂತೆ ಇದೆ. ಸ್ವಲ್ಪ ಎಡವಿದರೂ ಕೊರೊನಾ ವೈರಸ್‌ಗೆ ತುತ್ತಾಗುವ ಸಂಭವವಿದೆ ಎಂದು ಸೌರವ್ ಗಂಗೂಲಿ ಹೇಳಿದ್ದಾರೆ.
ವಿಶ್ವಾದ್ಯಂತ ಕೊರೊನಾ ವೈರಸ್ 2.40 ಲಕ್ಷ ಜನರ ಪ್ರಾಣವನ್ನು ಬಲಿ ಪಡೆದುಕೊಂಡಿದ್ದರೆ, ಸುಮಾರು 34 ಲಕ್ಷ ಜನರು ಈ ಸಾಂಕ್ರಾಮಿಕ ಕಾಯಿಲೆಗೆ ತುತ್ತಾಗಿದ್ದಾರೆ. ಈ ಪರಿಸ್ಥಿತಿಯ ಬಗ್ಗೆ ಬಿಸಿಸಿಐ ಅಧ್ಯಕ್ಷ ಮಾಜಿ ನಾಯಕ ಸೌರವ್ ಗಂಗೂಲಿ ಮಾತನಾಡಿದ್ದಾರೆ.
ಅಪಾಯಕಾರಿ ಪಿಚ್ ನಲ್ಲಿ ಟೆಸ್ಟ್ ಪಂದ್ಯವನ್ನು ಆಡುತ್ತಿರುವಂತಿದೆ ಈ ಪರಿಸ್ಥಿತಿ. ಬಾಲ್ ಅತ್ಯಂತ ವೇಗವಾಗಿ ಅದರ ಜೊತೆಗೆ ಸ್ವಿಂಗ್ ಆಗಿ ಬರುತ್ತಿರುವಂತಿದೆ. ಬ್ಯಾಟ್ಸ್‌ಮನ್ ಸಣ್ಣ ತಪ್ಪಿಗೂ ಬೆಲೆ ತೆರಬೇಕಾಗುತ್ತದೆ ಎಂದು ಗಂಗೂಲಿ ಹೇಳಿದ್ದಾರೆ. "100 ಅವರ್ಸ್ 100 ಸ್ಟಾರ್ಸ್" ಎಂಬ ಖಾಸಗಿ ವಾಹಿನಿಯೊಂದರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅವರು ಈ ರೀತಿ ಹೇಳಿಕೆ ನೀಡಿದ್ದಾರೆ.
ಇದೊಂದು ಅತ್ಯಂತ ಸಂಕಷ್ಟದ ಪರಿಸ್ಥಿತಿ. ಆದರೆ ನಾವು ಈ ಕಠಿಣ ಪಂದ್ಯದಲ್ಲಿ ಗೆಲುವನ್ನು ಸಾಧಿಸುತ್ತೇವೆ ಎಂದು ಸೌರವ್ ಗಂಗೂಲಿ ಹೇಳಿದ್ದಾರೆ. ಕೊರೊನಾ ವೈರಸ್‌ನಿಂದಾಗಿ ಪ್ರಾಣವನ್ನು ಕಳೆದುಕೊಂಡ ಸಾವಿರಾರು ಜನರ ಬಗ್ಗೆ ಸೌರವ್ ಗಂಗೂಲಿ ಇದೇ ಸಂದರ್ಭದಲ್ಲಿ ಬೇಸರವನ್ನು ವ್ಯಕ್ತಪಡಿಸಿದ್ದರು.
ಈಗಿನ ಪರಿಸ್ಥಿತಿಯನ್ನು ನೋಡಿ ನಾನು ನಿಜಕ್ಕೂ ತಲ್ಲಣಗೊಂಡಿದ್ದೇನೆ, ಹೊರಗಡೆ ಅಸಂಖ್ಯಾತ ಜನರು ಸಂಕಷ್ಟದಲ್ಲಿದ್ದಾರೆ, ಈ ಸಾಂಕ್ರಾಮಿಕ ರೋಗದಿಂದ ಹೊರಗೆ ಬರಲು ನಾವಿನ್ನೂ ಪರದಾಡುತ್ತಿದ್ದೇವೆ, ವಿಶ್ವಾದ್ಯಂತ ಇರುವ ಈ ಪರಿಸ್ಥಿತಿ ನನ್ನನ್ನು ಆತಂಕಕ್ಕೀಡು ಮಾಡಿದೆ ಎಲ್ಲಿಂದ ಹೇಗೆ ಯಾವಾಗ ಬಂತು ಎಂಬುದು ಯಾರಿಗೂ ಗೊತ್ತಿಲ್ಲ. ಈ ಪರಿಸ್ಥಿತಿಗೆ ನಾವು ಸಿದ್ಧರಾಗಿರಲಿಲ್ಲ ಎಂದು ಸೌರವ್ ಗಂಗೂಲಿ ಈ ಸಂದರ್ಭದಲ್ಲಿ ನೋವಿನ ಮಾತುಗಳನ್ನಾಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications