For Quick Alerts
ALLOW NOTIFICATIONS  
For Daily Alerts
 

IND vs ENG 2nd ODI: ಕಟಕ್‌ನಲ್ಲಿ ಹೇಗಿರಲಿದೆ ಪಿಚ್‌? ಏನು ಹೇಳುತ್ತೆ ಅಂಕಿ ಅಂಶ?

ಭಾರತ ಹಾಗೂ ಇಂಗ್ಲೆಂಡ್ ನಡುವಣ ಎರಡನೇ ಏಕದಿನ ಪಂದ್ಯ ಭಾನುವಾರ ಕಟಕ್‌ನಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಗೆಲುವು ಸಾಧಿಸಿ, ಸರಣಿಯನ್ನು ವಶಕ್ಕೆ ಪಡೆಯುವ ನಿಟ್ಟಿನಲ್ಲಿ ಆತಿಥೇಯ ತಂಡ ಪ್ಲ್ಯಾನ್ ಮಾಡಿಕೊಂಡಿದೆ. ಇನ್ನು ಈ ಪಂದ್ಯದಲ್ಲಿ ಗೆಲುವು ಸಾಧಿಸಿ ಸರಣಿಯನ್ನು ವಶಕ್ಕೆ ಪಡೆಯುವ ಕನಸಿನಲ್ಲಿ ಇಂಗ್ಲೆಂಡ್‌ ತಂಡವಿದೆ. ಹಾಗಿದ್ದರೆ, ಎರಡನೇ ಏಕದಿನ ಪಂದ್ಯದಲ್ಲಿ ಪಿಚ್ ಹೇಗಿರಲಿದೆ?, ಏನು ಹೇಳುತ್ತೆ ಅಂಕಿ ಅಂಶ ಎಂಬ ಬಗ್ಗೆ ವರದಿ ಇಲ್ಲಿದೆ.

ನಾಗ್ಪುರದಲ್ಲಿ ಅಮೋಘ ಪ್ರದರ್ಶನ ನೀಡಿ ಗೆಲುವು ಸಾಧಿಸಿರುವ ಭಾರತ, ಆತ್ಮವಿಶ್ವಾಸದಿಂದ ಕಣಕ್ಕೆ ಇಳಿಯುತ್ತಿದೆ. ಈ ವೇಳೆ ಸ್ಟಾರ್ ಆಟಗಾರರ ಮೇಲೆ ಎಲ್ಲರ ಚಿತ್ತ ನೆಟ್ಟಿರಲಿದೆ. ಅನುಭವಿ ಆಟಗಾರರು ಫಾರ್ಮೆಗೆ ಮರಳುವುದು ಅನಿವಾರ್ಯವಾಗಿದೆ. ಅಲ್ಲದೆ ಕಳೆದ ಎರಡು ದಶಕದಿಂದ ಸೋಲನ್ನೇ ಕಾಣದ ಅಂಗಳದಲ್ಲಿ, ಸರಣಿ ಗೆಲುವಿನ ಕೇಕೆ ಹಾಕಲು ಪ್ಲ್ಯಾನ್ ಮಾಡಿಕೊಂಡಿದೆ.

Cuttack ODI Pitch Report Spin to Play Key Role as India Eyes Series Win Against England

ಹೇಗಿರಲಿದೆ ಪಿಚ್?

ಕಟಕ್‌ ಬಾರಬತಿ ಮೈದಾನದಲ್ಲೂ ಸ್ಪಿನ್ ಬೌಲರ್‌ಗಳಿಗೆ ಉತ್ತಮ ನೆರವು ಸಿಗುವ ಸಾಧ್ಯತೆ ಇದ್ದು, ವೇಗದ ಬೌಲರ್‌ಗಳು ಕೊಂಚ ಬೌನ್ಸ್‌ ಪಡೆಯಲಿದ್ದಾರೆ. ಚೆಂಡು ಕೊಂಚ ಹಳೆಯದಾದಂತೆ ಬೌಲರ್‌ಗಳು ಸಹಾಯ ಪಡೆಯಬಹುದು. ಈ ಮೈದಾನದಲ್ಲಿ ಏಕದಿನ ಕ್ರಿಕೆಟ್‌ನಲ್ಲಿ 280 ಉತ್ತಮ ಮೊತ್ತವಾಗಿದೆ. ಟೀಮ್ ಇಂಡಿಯಾ ಭಾನುವಾರದ ಪಂದ್ಯಕ್ಕೂ ಸ್ಪಿನ್ ಮಂತ್ರವನ್ನೇ ಪಠಿಸಲಿದೆ.

ಏನು ಹೇಳುತ್ತೆ ಅಂಕಿ ಅಂಶ?

ಈ ಮೈದಾನದಲ್ಲಿ ಟೀಮ್ ಇಂಡಿಯಾ ಉತ್ತಮ ದಾಖಲೆಯನ್ನು ಹೊಂದಿದೆ. ಇನ್ನು ಈ ಮೈದಾನದಲ್ಲಿ ಮೊದಲು ಬ್ಯಾಟ್ ಮಾಡಿದ ತಂಡ 7 ಪಂದ್ಯಗಳಲ್ಲಿ ಜಯ ದಾಖಲಿಸಿದರೆ, ಚೇಸ್ ಮಾಡಿದ ತಂಡ 12 ಪಂದ್ಯಗಳನ್ನು ತನ್ನದಾಗಿಸಿಕೊಂಡಿದೆ. ಈ ಅಂಗಳದಲ್ಲಿ ಸ್ಟಾರ್‌ ಬ್ಯಾಟರ್‌ಗಳು ಹಾವಳಿ ನಡೆಸಿದ್ದಾರೆ.

Cuttack ODI Pitch Report Spin to Play Key Role as India Eyes Series Win Against England

ವಿರಾಟ್‌ ಮೇಲೆ ಎಲ್ಲರ ಕಣ್ಣು

ಟೀಮ್ ಇಂಡಿಯಾದ ಚೇಸಿಂಗ್ ಸ್ಟಾರ್ ಖ್ಯಾತಿಯ ವಿರಾಟ್ ಕೊಹ್ಲಿ ಈ ಅಂಗಳದಲ್ಲಿ ಸ್ಥಿರ ಪ್ರದರ್ಶನ ಆಟಗಾರರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಇವರು 2019ರಲ್ಲಿ ವೆಸ್ಟ್‌ ಇಂಡೀಸ್‌ ವಿರುದ್ಧ 85 ರನ್‌ಗಳ ಅಮೋಘ ಪ್ರದರ್ಶನ ನೀಡಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದರು. ಇದೇ ಪಂದ್ಯದಲ್ಲಿ ಆರಂಭಿಕರಾಗಿ ಕಣಕ್ಕೆ ಇಳಿದಿದ್ದ ಕೆಎಲ್ ರಾಹುಲ್‌ ಹಾಗೂ ರೋಹಿತ್ ಶರ್ಮ ಸಹ ಅರ್ಧಶತಕ ಬಾರಿಸಿ ಮಿಂಚಿದ್ದರು.

ಜಡ್ಡು ಕಮಾಲ್‌

ಟೀಮ್ ಇಂಡಿಯಾದ ಪರ ಮೊದಲ ಏಕದಿನ ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡಿದ್ದ ರವೀಂದ್ರ ಜಡೇಜಾ ಮೇಲೂ ಎಲ್ಲರ ಕಣ್ಣುಗಳು ನೆಟ್ಟಿರಲಿವೆ. ಈ ಮೈದಾನದಲ್ಲಿ ಜಡೇಜಾ ಆಡಿದ ನಾಲ್ಕು ಪಂದ್ಯಗಳಲ್ಲಿ 7 ವಿಕೆಟ್‌ ಪಡೆದ ಹಿರಿಮೆ ಹೊಂದಿದ್ದಾರೆ. ಇನ್ನು ಕಳೆದ ಪಂದ್ಯದಲ್ಲಿ ಬಿಗುವಿನ ದಾಳಿ ನಡೆಸಿರುವ ಮೊಹಮ್ಮದ್ ಶಮಿ ಅವರಿಗೂ ಈ ಅಂಗಳದಲ್ಲಿ ಬೌಲಿಂಗ್ ಮಾಡುವ ಕಲೆ ತಿಳಿದಿದೆ.

ಗರಿಷ್ಠ ರನ್‌: 381ಕ್ಕೆ 6
ಕನಿಷ್ಠ ರನ್‌: 169

Story first published: Saturday, February 8, 2025, 13:21 [IST]
Other articles published on Feb 8, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+