ಆಸ್ಟ್ರೇಲಿಯಾ ವಿರುದ್ಧದ ಭಾರತದ ಗೆಲುವಿಗೆ ಸಾಕ್ಷಿಯಾದ ಕಿಚ್ಚ ಸುದೀಪ್

ಲಂಡನ್ ಪ್ರವಾಸ ಕೈಗೊಂಡಿರುವ ಸುದೀಪ್ ದಂಪತಿ ಇಂದು ಲಂಡನ್ನಿನ ದಿ ಓವೆಲ್ ಮೈದಾನದಲ್ಲಿ ನಡೆದ ರೋಚಕ ಕ್ರಿಕೆಟ್ ಪಂದ್ಯವನ್ನು ವೀಕ್ಷಿಸಿ ಖುಷಿಯಾಗಿದ್ದಾರೆ. ಟೀಂ ಇಂಡಿಯಾ ಪರ ಚಿಯರ್ ಮಾಡಿ, ಸಂತಸದಿಂದ 'ಇಂಡಿಯಾ, ಇಂಡಿಯಾ' ಎಂದು ಹರ್ಷೋದ್ಗಾರ ಮಾಡಿದ್ದಾರೆ.
ವಿಶ್ವಕಪ್ 2019 ಸಮರದಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ನಿರೀಕ್ಷಿಸಿದಂತೆ ಜಿದ್ದಾಜಿದ್ದಿನ ಹಣಾಹಣಿ ಕಂಡುಬಂದಿತ್ತು. ಕಪ್ ಗೆಲ್ಲಬಲ್ಲ ನೆಚ್ಚಿನ ತಂಡಗಳೆನಿಸಿರುವ ಕೊಹ್ಲಿ ಹಾಗೂ ಫಿಂಚ್ ಪಡೆಯಲ್ಲಿ ಪ್ರತಿಭಾವಂತರ ದಂಡು ನೀಡಿದ ಪ್ರದರ್ಶನಕ್ಕೆ ಪ್ರೇಕ್ಷಕರು ಮಾರುಹೋಗಿದ್ದಾರೆ. 352/5 ಸ್ಕೋರ್ ಮಾಡಿದ ಟೀಂ ಇಂಡಿಯಾ, ಆಸ್ಟ್ರೇಲಿಯಾವನ್ನು 316ಕ್ಕೆ ನಿಯಂತ್ರಿಸಿ ಗೆಲುವು ಸಾಧಿಸಿದೆ.
ಪಂದ್ಯ ಆರಂಭದಿಂದ ಕೊನೆ ತನಕ ರಸ ನಿಮಿಷಗಳನ್ನು ಲೈವ್ ನೋಡಿ ಆನಂದಿಸಿದ ನಟ ಕಿಚ್ಚ ಸುದೀಪ ಅವರು ಪ್ರಮುಖ ಹಂತಗಳಲ್ಲಿ ಟ್ವೀಟ್ ಮಾಡಿದ್ದಾರೆ.
ಎರಡು ಕಪ್ ಎತ್ತಿರುವ ಭಾರತ ಹಾಗೂ ಐದು ಬಾರಿ ಚಾಂಪಿಯನ್ ಆಗಿರುವ ಆಸ್ಟ್ರೇಲಿಯಾ ನಡುವಿನ ಆಟಕ್ಕೆ ಓವಲ್ ಮೈದಾನ ವೇದಿಕೆ ಒದಗಿಸಿತ್ತು. ದಿ ಓವಲ್ ಪಂದ್ಯಕ್ಕೂ ಮುನ್ನ ವಿಶ್ವಕಪ್ ಪಂದ್ಯಗಳ ಪೈಕಿ 11 ಬಾರಿ ಎದುರಾಗಿದ್ದು, ಆಸ್ಟ್ರೇಲಿಯಾ 8 ಹಾಗೂ ಭಾರತ 3 ಬಾರಿ ಗೆಲುವು ಸಾಧಿಸಿತ್ತು.
ಟಾಸ್ ಹಂತದಿಂದಲೇ ಟ್ವೀಟ್ ಮಾಡಿ ಕಿಚ್ಚು ಹಚ್ಚಿದ ಸುದೀಪ್
ಟೀಂ ಇಂಡಿಯಾ ಪರ ಚಿಯರ್ ಮಾಡಿ, ಸಂತಸದಿಂದ 'ಇಂಡಿಯಾ, ಇಂಡಿಯಾ' ಎಂದು ಹರ್ಷೋದ್ಗಾರ ಮಾಡಿದ ನಟ ಕಿಚ್ಚ ಸುದೀಪ್, ಟಾಸ್ ಗೂ ಮುನ್ನ ಉಭಯ ತಂಡಗಳು ಸಾಲು ಸಾಲಾಗಿ ನಿಂತು ರಾಷ್ಟ್ರಗೀತೆಗೆ ಗೌರವ ಸಲ್ಲಿಸುವ ಸಣ್ಣ ವಿಡಿಯೋವನ್ನು ಹಂಚಿಕೊಂಡಿದ್ದರು.
ಶಿಖರ್ ಧವನ್ ಶತಕ ಗಳಿಸಿದ ವಿಡಿಯೋ
ಟೀಂ ಇಂಡಿಯಾದ ಆರಂಭಿಕ ಆಟಗಾರ ಶಿಖರ್ ಧವನ್ ಅವರು 109 ಎಸೆತಗಳಲ್ಲಿ 117ರನ್(16 ಬೌಂಡರಿ) ಗಳಿಸಿದ್ದನ್ನು ಸಂಭ್ರಮದಿಂದ ವಿಡಿಯೋ ಮಾಡಿ ಟ್ವೀಟ್ ಮಾಡಿದ ಸುದೀಪ್. ಇದಕ್ಕೂ ಮುನ್ನ ರೋಹಿತ್ ಶರ್ಮ 3 ಬೌಂಡರಿ ಹಾಗೂ 1 ಸಿಕ್ಸರ್ ಇದ್ದ 57ರನ್ ಗಳಿಸಿ ಔಟಾಗಿದ್ದರು. ನಂತರ ಮೂರನೆ ಕ್ರಮಾಂಕದಲ್ಲಿ ಬಂದಿದ್ದ ಕೊಹ್ಲಿ 77 ಎಸೆತಗಳಲ್ಲಿ 82ರನ್(4 ಬೌಂಡರಿ, 2 ಸಿಕ್ಸರ್) ಸಿಡಿಸಿದ್ದರು. ಧವನ್ ಶತಕ ಗಳಿಸುವ ವೇಳೆಗೆ ವಿಕೆಟ್ ಗೆ ಚೆಂಡು ಬಡಿದು ಓವರ್ ಥ್ರೋ ಆಗಿತ್ತು. ಕೊಹ್ಲಿ ಔಟಾದರೆನೋ ಎಂಬ ಆತಂಕ ಮೂಡಿತ್ತು. ಆದರೆ, ನಂತರ ಆತಂಕ ದೂರಾಗಿ ಧವನ್ ಶತಕ ಸಂಭ್ರಮ ಮನೆ ಮಾಡಿತು.
ಮಿಂಚಿನ ಸಂಚಾರ ಮೂಡಿಸಬಲ್ಲ ವಾತಾವರಣ
ಮಿಂಚಿನ ಸಂಚಾರ ಮೂಡಿಸಬಲ್ಲ ವಾತಾವರಣ ಇಲ್ಲಿ ಮನೆ ಮಾಡಿದೆ. ಮೈದಾನದಲ್ಲಿ ಪ್ರೇಕ್ಷಕರ ಹರ್ಷದ ಕೇಕೆ, ಆಟಗಾರರ ಪ್ರದರ್ಶನ ಎಲ್ಲವೂ ಸ್ಮರಣೀಯ ಅನುಭವ ನೀಡಿದೆ ಎಂದು ಕಿಚ್ಚ ಸುದೀಪ ಟ್ವೀಟ್ ಮಾಡಿದ್ದಾರೆ. ಕ್ರಿಕೆಟ್ ಕಾಶಿ ಲಾರ್ಡ್ ನಲ್ಲೂ ಕ್ರಿಕೆಟ್ ದಿಗ್ಗಜರ ಜೊತೆ ಪಂದ್ಯ ಆಡಿರುವ ಕಿಚ್ಚ ಸುದೀಪ ಅವರು ಇಂದು ಪತ್ನಿ ಮತ್ತು ಸ್ನೇಹಿತರ ಜೊತೆ ಮೈದಾನದಲ್ಲಿ ಕುಳಿತು ವರ್ಲ್ಡ್ ಕಪ್ ವೀಕ್ಷಿಸಿ ಆನಂದಿಸಿದರು.

ಸುದೀಪ್ ಹಾಗೂ ಲಂಡನ್ ಜತೆಗಿನ ನಂಟು
ಸುದೀಪ್ ಅವರು ಕರ್ನಾಟಕ ಬುಲ್ಡೋಜರ್ಸ್, ರಾಕ್ ಸ್ಟಾರ್ಸ್ ತಂಡದ ಪರ ಬಲಗೈ ಬ್ಯಾಟ್ಸ್ ಮನ್, ವಿಕೆಟ್ ಕೀಪರ್,ಕ್ಯಾಪ್ಟನ್ ಆಗಿ ಆಡಿರುವ ಅನುಭವ ಹೊಂದಿದ್ದಾರೆ. ಕಾರ್ಪೋರೇಟ್ ಕ್ರಿಕೆಟ್ ಡೇ' ಟೂರ್ನಿಯಲ್ಲಿ ಪಾಲ್ಗೊಂಡಿದ್ದರು. ಹೀಗಾಗಿ, ಲಂಡನ್, ಲಾರ್ಡ್ಸ್ ಮೈದಾನ ಕಿಚ್ಚ ಸುದೀಪ್ ಅವರ ಜೀವನದಲ್ಲಿ ವಿಶೇಷ ಸ್ಥಾನ ಹೊಂದಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications