For Quick Alerts
ALLOW NOTIFICATIONS  
For Daily Alerts
 

11 ಸಾವಿರ ರನ್ ಗಳಿಸಿ ಕೊಹ್ಲಿ ಮುರಿದ ದಾಖಲೆಗಳು : ಟ್ವೀಟ್ ವರದಿ

ICC World Cup 2019: Kohli smashes Tendulkars record as fastest man to 11,000 ODI runs: Twitter reacts

ಮ್ಯಾಂಚೆಸ್ಟರ್, ಜೂನ್ 16: ಏಕದಿನ ಕ್ರಿಕೆಟ್‌ನಲ್ಲಿ ಅತ್ಯಂತ ವೇಗವಾಗಿ 11 ಸಾವಿರ ರನ್‌ಗಳನ್ನು ಗಳಿಸಿದ ವಿಶ್ವ ದಾಖಲೆಯನ್ನು ಕಿಂಗ್‌ ಕೊಹ್ಲಿ ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ವಿಶ್ವಕಪ್ 2019ರ ಲೀಗ್ ಹಂತದ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಅರ್ಧಶತಕ ಸಿಡಿಸಿದ ಕೊಹ್ಲಿ ಸಾಧನೆಯನ್ನು ಅಂಕಿ ಅಂಶಗಳ ಮೂಲಕ ಟ್ವಿಟ್ಟರ್ ನಲ್ಲಿ ಕೊಂಡಾಡಲಾಗಿದೆ.

ಪಾಕಿಸ್ತಾನದ ವಿರುದ್ಧದ ಪಂದ್ಯಕ್ಕೂ ಮುನ್ನ ಕೊಹ್ಲಿಗೆ 11 ಸಾವಿರ ರನ್‌ ಗಡಿ ಮುಟ್ಟಲು 57 ರನ್‌ಗಳ ಅಗತ್ಯವಿತ್ತು. ಈ ಪಂದ್ಯದಲ್ಲಿ ತಂಡದ ಮೊತ್ತ 290/3 ಆಗಿದ್ದಾಗ, 57ರನ್ ಗಳಿಸಿದ್ದ ಕೊಹ್ಲಿ ಹೊಸ ಇತಿಹಾಸ ಬರೆದರು.

230 ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 222 ಇನ್ನಿಂಗ್ಸ್ ಗಳಲ್ಲಿ ಕೊಹ್ಲಿ 11 ಸಾವಿರ ರನ್‌ಗಳ ಗಡಿ ದಾಟಿದ್ದಾರೆ. ಹಾಲಿ ಏಕದಿನ ಕ್ರಿಕೆಟ್ ಮಾದರಿಯ ನಂ.1 ಆಟಗಾರ ಕೊಹ್ಲಿ ಅವರು 11 ಸಾವಿರ ರನ್ ಕ್ಲಬ್ ಸೇರಿದ 9ನೇ ಆಟಗಾರ ಎನಿಸಿಕೊಂಡಿದ್ದಾರೆ. ರನ್ ಮಷಿನ್ ಕೊಹ್ಲಿ ಮುರಿದ ದಾಖಲೆಗಳ ವಿವರಗಳ ಬಗ್ಗೆ ಬಂದಿರುವ ಟ್ವೀಟ್ ವರದಿ ಮುಂದಿದೆ...

ಕೊಹ್ಲಿಗೂ ಮುನ್ನ 11,000 ಪ್ಲಸ್ ರನ್ ಗಳಿಸಿದವರು:

ಕೊಹ್ಲಿಗೂ ಮುನ್ನ 11,000 ಪ್ಲಸ್ ರನ್ ಗಳಿಸಿದವರು:

ಕೊಹ್ಲಿಗೂ ಮುನ್ನ 11,000 ಪ್ಲಸ್ ರನ್ ಗಳಿಸಿದವರು:
* ಸಚಿನ್ ತೆಂಡೂಲ್ಕರ್(ಭಾರತ) : 18426ರನ್
* ಕುಮಾರ್ ಸಂಗಕ್ಕಾರ (ಶ್ರೀಲಂಕಾ): 14,234
* ರಿಕಿ ಪಾಂಟಿಂಗ್(ಆಸ್ಟ್ರೇಲಿಯಾ) : 13704
* ಸನತ್ ಜಯಸೂರ್ಯ (ಶ್ರೀಲಂಕಾ), 13430
* ಮಹೇಲ ಜಯವರ್ದನೆ (ಶ್ರೀಲಂಕಾ) : 12650
* ಇನ್ಜಮಾಮ್ ಉಲ್ ಹಕ್ (ಪಾಕಿಸ್ತಾನ): 11739
* ಜಾಕ್ ಕಾಲಿಸ್ (ದಕ್ಷಿಣ ಆಫ್ರಿಕಾ): 11579
* ಸೌರವ್ ಗಂಗೂಲಿ (ಭಾರತ): 11363
* ವಿರಾಟ್ ಕೊಹ್ಲಿ : 11003ರನ್*

ಬೇರೆ ಎಲ್ಲರಿಗಿಂತ 54 ಇನ್ನಿಂಗ್ಸ್ ಕಡಿಮೆ

11 ಸಾವಿರ ಪ್ಲಸ್ ರನ್ ಗಳಿಸಿರುವ ಮಿಕ್ಕ ಎಲ್ಲಾ 8 ಆಟಗಾರರಿಗಿಂತ 54 ಇನ್ನಿಂಗ್ಸ್ ಮುಂಚಿತವಾಗೇ 11 ಸಾವಿರ ರನ್ ಗಡಿ ದಾಟಿದ ಕೊಹ್ಲಿ. ಈ ಮೂಲಕ ಹೊಸ ಇತಿಹಾಸ ನಿರ್ಮಿಸಿದ್ದಾರೆ. 222 ಇನ್ನಿಂಗ್ಸ್ ಗಳಲ್ಲಿ ಇಲ್ಲಿ ತನಕ ಪಟ್ಟಿಯಲ್ಲಿರುವ ಯಾವ ಆಟಗಾರ ಕೂಡಾ ಈ ಸಾಧನೆ ಮಾಡಿಲ್ಲ.

1000ರನ್ ಮೈಲಿಗಲ್ಲು

ಪ್ರತಿ 1000ರನ್ ಗಳಿಸಲು ವಿರಾಟ್ ಕೊಹ್ಲಿ ತೆಗೆದುಕೊಂಡ ಇನ್ನಿಂಗ್ಸ್ ಗಳ ಲೆಕ್ಕಾಚಾರ ಇಲ್ಲಿದೆ. ಅತಿ ಕಡಿಮೆ ಇನ್ನಿಂಗ್ಸ್ ಗಳಲ್ಲಿ ಪ್ರತಿ ಸಾವಿರ ರನ್ ಗಳಿಸಿದ ಕೆಲವೇ ಆಟಗಾರರ ಪೈಕಿ ಕೊಹ್ಲಿ ಒಬ್ಬರು. ಒಟ್ಟಾರೆ, ಅತಿ ಕಡಿಮೆ ಇನ್ನಿಂಗ್ಸ್ ಗಳಲ್ಲಿ 11 ಸಾವಿರ ರನ್ ಮೈಲಿಗಲ್ಲು ದಾಟಿದ್ದು ಕೂಡಾ ಕೊಹ್ಲಿ ಮಾತ್ರ.

ತ್ವರಿತಗತಿಯಲ್ಲಿ ರನ್ ಗಳಿಕೆ

ರನ್ ಮಷಿನ್ ಗಳಂತೆ ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ತ್ವರಿತ ಗತಿಯಲ್ಲಿ ರನ್ ಗಳಿಸಿದ ಆಟಗಾರರ ಪೈಕಿ ಕೊಹ್ಲಿ ಹಾಗೂ ನಂತರ ದಕ್ಷಿಣ ಆಫ್ರಿಕಾದ ಹಶೀಂ ಅಮ್ಲಾ ಕಂಡು ಬರುತ್ತಾರೆ. ಕೊಹ್ಲಿ ದಾಖಲೆಗಳನ್ನು ಆಮ್ಲಾ ಮುರಿಯುತ್ತಾ ಬಂದಿದ್ದಾರೆ. ಆದರೆ, ಕೊಹ್ಲಿ ಮುನ್ನಡೆ ಪಡೆಯುತ್ತಲೆ ಇದ್ದಾರೆ.
* 5000ರನ್ - ಹಶೀಂ ಆಮ್ಲಾ(101)
* 6000ರನ್ -ಹಶೀಮ್ ಆಮ್ಲಾ(123)

* 7000ರನ್ - ಹಶೀಂ ಆಮ್ಲಾ (150ಇನ್ನಿಂಗ್ಸ್)

* 8000ರನ್ - ವಿರಾಟ್ ಕೊಹ್ಲಿ(175)

* 9000ರನ್ -ವಿರಾಟ್ ಕೊಹ್ಲಿ(194)

* 10000ರನ್ - ವಿರಾಟ್ ಕೊಹ್ಲಿ( 205)

* 11000 ರನ್- ವಿರಾಟ್ ಕೊಹ್ಲಿ (222)

11 ಸಾವಿರ ರನ್ ಕ್ಲಬ್ ನಲ್ಲಿರುವ ದಿಗ್ಗಜರು

11 ಸಾವಿರ ರನ್ ಕ್ಲಬ್ ನಲ್ಲಿರುವ ದಿಗ್ಗಜರು ಹಾಗೂ ಗಳಿಸಲು ತೆಗೆದುಕೊಂಡ ಇನ್ನಿಂಗ್ಸ್:
* ವಿರಾಟ್ ಕೊಹ್ಲಿ (ಭಾರತ) : 222 ಇನ್ನಿಂಗ್ಸ್
* ಸಚಿನ್ ತೆಂಡೂಲ್ಕರ್(ಭಾರತ): 276

* ರಿಕಿ ಪಾಂಟಿಂಗ್ (ಆಸ್ಟ್ರೇಲಿಯಾ) : 286

* ಸೌರವ್ ಗಂಗೂಲಿ (ಭಾರತ) : 288

* ಜಾಕ್ ಕಾಲಿಸ್ (ದಕ್ಷಿಣ ಆಫ್ರಿಕಾ) : 293

Story first published: Sunday, June 16, 2019, 22:27 [IST]
Other articles published on Jun 16, 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+