For Quick Alerts
ALLOW NOTIFICATIONS  
For Daily Alerts
 

IND vs AUS Final: ಕೊಹ್ಲಿ ಅಲ್ಲ, ಶಮಿ ಅಲ್ಲ; ಫೈನಲ್‌ನಲ್ಲಿ ಈತನೇ ಭಾರತಕ್ಕೆ ಪ್ರಮುಖ ಆಟಗಾರ; ಗೌತಮ್ ಗಂಭೀರ್

ಭಾನುವಾರ, ನವೆಂಬರ್ 19ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿರುವ 2023ರ ಐಸಿಸಿ ಏಕದಿನ ವಿಶ್ವಕಪ್‌ನ ಫೈನಲ್‌ ಪಂದ್ಯದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾಗುತ್ತಿವೆ.

ಇದೇ ವೇಳೆ ಭಾರತದ ಮಾಜಿ ಆರಂಭಿಕ ಬ್ಯಾಟರ್ ಗೌತಮ್ ಗಂಭೀರ್ ಅವರು ಮಧ್ಯಮ ಕ್ರಮಾಂಕದ ಬ್ಯಾಟರ್ ಶ್ರೇಯಸ್ ಅಯ್ಯರ್ ಅವರನ್ನು ಶ್ಲಾಘಿಸಿದ್ದಾರೆ.

CWC 2023: Shreyas Iyer to be key player for India in Final against Australia Says Gautam Gambhir

2023ರ ವಿಶ್ವಕಪ್ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಆತಿಥೇಯ ಭಾರತೀಯ ತಂಡಕ್ಕೆ ಮಧ್ಯಮ ಕ್ರಮಾಂಕದ ಬ್ಯಾಟರ್ ಅತ್ಯಂತ ಪ್ರಭಾವಶಾಲಿ ಆಟಗಾರ ಎಂದು ಗೌತಮ್ ಗಂಭೀರ್ ಭವಿಷ್ಯ ನುಡಿದಿದ್ದಾರೆ.

ಸ್ಟಾರ್ ಸ್ಪೋರ್ಟ್ಸ್‌ನೊಂದಿಗೆ ಮಾತನಾಡಿದ ಗೌತಮ್ ಗಂಭೀರ್, ಗಾಯದ ನಂತರ ಭಾರತ ತಂಡದ ಆಡುವ 11ರ ಬಳಗದಲ್ಲಿ ಸ್ಥಾನವನ್ನು ಮರಳಿ ಪಡೆದ ಶ್ರೇಯಸ್ ಅಯ್ಯರ್ ಪ್ರಯಾಣವನ್ನು ಹೈಲೈಟ್ ಮಾಡಿದರು ಮತ್ತು ಪಂದ್ಯಾವಳಿಯ ಸೆಮಿಫೈನಲ್‌ನಲ್ಲಿ ಕೇವಲ 70 ಎಸೆತಗಳಲ್ಲಿ ಸಿಡಿಸಿದ ಶತಕವನ್ನು ಒತ್ತಿ ಹೇಳಿದರು.

2023ರ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಪರಾಕ್ರಮ ಪ್ರದರ್ಶಿಸಿ ಮಿಂಚಿದೆ. ಇದೇ ವೇಳೆ ಬಹುಕಾಲದ ಸಮಸ್ಯೆಗಳಲ್ಲಿ ಒಂದಾದ ನಾಲ್ಕನೇ ಕ್ರಮಾಂಕದಲ್ಲಿ ಸ್ಥಿರತೆಯನ್ನು ಕಂಡುಕೊಳ್ಳುವ ಹೋರಾಟವು ಶ್ರೇಯಸ್ ಅಯ್ಯರ್ ಅವರ ಅಸಾಧಾರಣ ಫಾರ್ಮ್‌ನೊಂದಿಗೆ ಅದರ ಪರಿಹಾರ ಕಂಡುಕೊಂಡಿದೆ.

CWC 2023: Shreyas Iyer to be key player for India in Final against Australia Says Gautam Gambhir

ಶ್ರೇಯಸ್ ಅಯ್ಯರ್ ಅವರು ಇತ್ತೀಚಿನ ಅದ್ಭುತ ಫಾರ್ಮ್ ಈ ಸಮಸ್ಯೆಯನ್ನು ಪರಿಹರಿಸಿದೆ. ಮಾತ್ರವಲ್ಲದೆ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವಾಗ ವಿಶ್ವಕಪ್‌ನಲ್ಲಿ 500ಕ್ಕೂ ಹೆಚ್ಚು ರನ್ ಗಳಿಸಿದ ಮೊದಲ ಭಾರತೀಯ ಎಂದು ಕ್ರಿಕೆಟ್ ಇತಿಹಾಸದಲ್ಲಿ ಅವರ ಹೆಸರು ಬರೆಯಲಾಯಿತು.

"ಈ ವಿಶ್ವಕಪ್‌ನಲ್ಲಿ ಶ್ರೇಯಸ್ ಅಯ್ಯರ್ ನನ್ನ ಪಾಲಿಗೆ ದೊಡ್ಡ ಗೇಮ್ ಚೇಂಜರ್ ಆಗಿದ್ದಾರೆ ಎಂದು ಭಾವಿಸುತ್ತಾನೆ. ಅವರು ಗಾಯಗೊಂಡಿದ್ದರು ಮತ್ತು ತಮ್ಮ ಸ್ಥಾನಕ್ಕಾಗಿ ಹೋರಾಡಬೇಕಾಯಿತು. ಸೆಮಿಸ್‌ನಲ್ಲಿ 70 ಎಸೆತಗಳಲ್ಲಿ ಶತಕ ಗಳಿಸುವುದು ಅತ್ಯುತ್ತಮವಾಗಿದೆ. ಮ್ಯಾಕ್ಸ್‌ವೆಲ್ ಮತ್ತು ಝಂಪಾ ಬೌಲ್ ಮಾಡುವಾಗ ಅವರು ಫೈನಲ್‌ನಲ್ಲಿ ಭಾರತ ತಂಡಕ್ಕೆ ಪ್ರಮುಖರಾಗುತ್ತಾರೆ," ಎಂದು ಗೌತಮ್ ಗಂಭೀರ್ ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಹೇಳಿದರು.

ಐಸಿಸಿ ಏಕದಿನ ವಿಶ್ವಕಪ್‌ನ ಒಂದೇ ಆವೃತ್ತಿಯಲ್ಲಿ 500 ರನ್‌ಗಳ ಗಡಿ ದಾಟಿದ ಮೊದಲ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಶ್ರೇಯಸ್ ಅಯ್ಯರ್ ಪಾತ್ರರಾದರು.

ಈ ಪಂದ್ಯಾವಳಿಯ ಉದ್ದಕ್ಕೂ ಶ್ರೇಯಸ್ ಅಯ್ಯರ್ 75.14ರ ಅತ್ಯುತ್ತಮ ಸರಾಸರಿ ಮತ್ತು 113ರ ಸ್ಟ್ರೈಕ್ ರೇಟ್‌ನಲ್ಲಿ 526 ರನ್ ಗಳಿಸಿದ್ದಾರೆ. ಇದರಲ್ಲಿ ಎರಡು ಶತಕಗಳು ಮತ್ತು ಮೂರು ಅರ್ಧ ಶತಕಗಳು ಒಳಗೊಂಡಿವೆ. ಅಜೇಯ 128 ರನ್ ಅತ್ಯಧಿಕ ಸ್ಕೋರ್ ಆಗಿದೆ. ಪ್ರಸ್ತುತ, ನಡೆಯುತ್ತಿರುವ ವಿಶ್ವಕಪ್ ಪಂದ್ಯಾವಳಿಯಲ್ಲಿ ಐದನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿದ್ದಾರೆ.

ನ್ಯೂಜಿಲೆಂಡ್ ವಿರುದ್ಧದ ಸೆಮಿಫೈನಲ್‌ನಲ್ಲಿ ಶ್ರೇಯಸ್ ಅಯ್ಯರ್ ತಮ್ಮ ಸತತ ಎರಡನೇ ಶತಕವನ್ನು ಗಳಿಸಿದರು. ಈ ಮೂಲಕ ಹಲವಾರು ದಾಖಲೆಗಳನ್ನು ಅಳಿಸಿಹಾಕಿದರು ಮತ್ತು ಏಕದಿನ ಕ್ರಿಕೆಟ್‌ನಲ್ಲಿ ತಮ್ಮ ಗಮನಾರ್ಹ ಫಾರ್ಮ್ ಅನ್ನು ವಿಸ್ತರಿಸಿದರು.

ನ್ಯೂಜಿಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ಕೇವಲ 70 ಎಸೆತಗಳಲ್ಲಿ 105 ರನ್ ಗಳಿಸುವ ಮೂಲಕ ತಮ್ಮ ಅತ್ಯುತ್ತಮ ಪರಾಕ್ರಮವನ್ನು ಪ್ರದರ್ಶಿಸಿದರು. ಅವರ ಇನ್ನಿಂಗ್ಸ್‌ನಲ್ಲಿ ನಾಲ್ಕು ಬೌಂಡರಿಗಳು ಮತ್ತು ಎಂಟು ಸಿಕ್ಸರ್‌ಗಳನ್ನು ಒಳಗೊಂಡಿದ್ದವು.

Story first published: Friday, November 17, 2023, 13:46 [IST]
Other articles published on Nov 17, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+