CWG 2022: ಚಿನ್ನ ಮೇಲೆ ಭಾರತದ ಮಹಿಳಾ ಕ್ರಿಕೆಟ್ ತಂಡದ ಕಣ್ಣು: ಟಾಸ್ ಗೆದ್ದ ಆಸ್ಟ್ರೇಲಿಯಾ: Live ಸ್ಕೋರ್

ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಇದೇ ಮೊದಲ ಬಾರಿಗೆ ಮಹಿಳಾ ಕ್ರಿಕೆಟ್‌ಗೆ ಅವಕಾಶ ದೊರೆತಿದ್ದು ಇಂದು ಫೈನಲ್ ಪಂದ್ಯ ನಡೆಯುತ್ತಿದೆ. ಈ ಪಂದ್ಯದಲ್ಲಿ ಭಾರತ ಮಹಿಳಾ ಕ್ರಿಕೆಟ್ ತಂಡ ಹಾಗೂ ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ ತಂಡಗಳು ಸೆಣೆಸಾಟವನ್ನು ನಡೆಸುತ್ತಿದ್ದು ಚಿನ್ನದ ಪದಕದ ಮೇಲೆ ಎರಡು ತಂಡಗಳು ಕೂಡ ಚಿತ್ತ ನೆಟ್ಟಿದೆ. ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಮಹಿಳಾ ತಂಡ ಟಾಸ್ ಗೆದ್ದಿದ್ದು ಮೊದಲಿಗೆ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.
ಹೀಗಾಗಿ ಭಾರತೀಯ ಮಹಿಳಾ ತಂಡ ರನ್ ಬೆನ್ನಟ್ಟುವ ಸವಾಲು ಸ್ವೀಕರಿಸಿದೆ. ಲೀಗ್ ಹಂತದಲ್ಲಿ ಆಸ್ಟ್ರೇಲಿಯಾ ತಂಡವನ್ನು ಭಾರತೀಯ ಮಹಿಳಾ ತಂಡ ಮೊದಲ ಪಂದ್ಯದಲ್ಲಿಯೇ ಎದುರಿಸಿತ್ತು. ಭಾರತ ತಮಡ ಈ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿತ್ತಾದರೂ ಪಂದ್ಯದಲ್ಲಿ ಗೆಲುವು ಸಾಧ್ಯವಾಗಿರಲಿಲ್ಲ. ಹೀಗಾಗಿ ಈ ಚಿನ್ನದ ಪದಕಕ್ಕಾಗಿ ನಡೆಯುವ ಹೋರಾಟದಲ್ಲಿ ಆಸಿಸ್ ಪಡೆಯನ್ನು ಮಣಿಸುವ ಆತ್ಮವಿಶ್ಚಾಸದಲ್ಲಿದೆ ಭಾರತ ಮಹಿಳಾ ತಂಡ.
Live ಸ್ಕೋರ್ ಹೀಗಿದೆ
ಕಾಮನ್‌ವೆಲ್ತ್ ಗೇಮ್ಸ್‌ನ ಫೈನಲ್ ಪಂದ್ಯದಲ್ಲಿ ಭಾರತ ಮಹಿಳೆಯರ ತಂಡ ಉತ್ತಮ ಪ್ರದರ್ಶನ ನೀಡಿದ್ದು ಆಸ್ಟ್ರೇಲಿಯಾ ತಂಡವನ್ನು 161 ರನ್‌ಗಳಿಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾಗಿದೆ. ಆಸ್ಟ್ರೇಲಿಯಾದ ಆರಂಬಿಕ ಆಟಗಾರ್ತಿ ಬೆನ್ ಬೂನಿ ಭರ್ಜರಿ ಅರ್ಧ ಶತಕ ಸಿಡಿಸಿದ ಪರಿಣಾಮವಾಗಿ ಆಸ್ಟ್ರೇಲಿಯಾ ಮಹಿಳಾ ತಂಡ ಸವಾಲಿನ ಮೊತ್ತ ಪೆರಿಸಲು ಸಾಧ್ಯವಾಯಿತು.
ಟಾಸ್ ಗೆದ್ದು ಮೊದಲಿಗೆ ಬ್ಯಾಟಿಂಗ್ ಆಯ್ಕೆ ಮಾಡಿದ ಆಸ್ಟ್ರೇಲಿಯಾ ತಂಡ ಒಂದು ಹಂತದಲ್ಲಿ ದೊಡ್ಡ ಮೊತ್ತದ ಗುರಿ ನೀಡುವಂತೆ ತೋರಿತ್ತು. ಆದರೆ ಅಂತಿಮ ಹಂತದಲ್ಲಿ ಭಾರತದ ಬೌಲಿಂಗ್ ಪಡೆ ಅದ್ಭುತ ನಿಯಂತ್ರಣ ಸಾಧಿಸುವಲ್ಲಿ ಯಶಸ್ವಿಯಾಗಿದೆ. ಅದರ ಪರಿಣಾಮವಾಗಿ ಆಸ್ಟ್ರೇಲಿಯಾ ತಂಡ 161 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಮೊತ್ತವನ್ನು ಭಾರತದ ಮಹಿಳೆಯರ ತಂಡ ಯಾವ ರೀತಿ ಬೆನ್ನಟ್ಟಲಿದೆ ಎಂಬುದು ಕುತೂಹಲ ಮೂಡಿಸದೆ.
ಭಾರತ ಮಹಿಳಾ ತಂಡ ಆಡುವ ಬಳಗ: ಸ್ಮೃತಿ ಮಂಧಾನ, ಶಫಾಲಿ ವರ್ಮಾ, ಜೆಮಿಮಾ ರಾಡ್ರಿಗಸ್, ಹರ್ಮನ್‌ಪ್ರೀತ್ ಕೌರ್ (ನಾಯಕಿ), ದೀಪ್ತಿ ಶರ್ಮಾ, ಪೂಜಾ ವಸ್ತ್ರಾಕರ್, ಸ್ನೇಹ ರಾಣಾ, ತನಿಯಾ ಭಾಟಿಯಾ (ವಿಕೆಟ್ ಕೀಪರ್), ರಾಧಾ ಯಾದವ್, ಮೇಘನಾ ಸಿಂಗ್, ರೇಣುಕಾ ಸಿಂಗ್
ಬೆಂಚ್: ರಾಜೇಶ್ವರಿ ಗಾಯಕ್ವಾಡ್, ಸಬ್ಬಿನೇನಿ ಮೇಘನಾ, ಹರ್ಲೀನ್ ಡಿಯೋಲ್, ಯಾಸ್ತಿಕಾ ಭಾಟಿಯಾ
ಆಸ್ಟ್ರೇಲಿಯಾ ಮಹಿಳಾ ತಂಡ ಆಡುವ ಬಳಗ: ಅಲಿಸ್ಸಾ ಹೀಲಿ (ವಿಕೆಟ್ ಕೀಪರ್), ಬೆತ್ ಮೂನಿ, ಮೆಗ್ ಲ್ಯಾನಿಂಗ್ (ನಾಯಕಿ), ತಹ್ಲಿಯಾ ಮೆಕ್‌ಗ್ರಾತ್, ರಾಚೆಲ್ ಹೇನ್ಸ್, ಆಶ್ಲೀ ಗಾರ್ಡ್ನರ್, ಗ್ರೇಸ್ ಹ್ಯಾರಿಸ್, ಜೆಸ್ ಜೊನಾಸೆನ್, ಅಲಾನಾ ಕಿಂಗ್, ಮೇಗನ್ ಶುಟ್, ಡಾರ್ಸಿ ಬ್ರೌನ್
ಬೆಂಚ್: ಎಲ್ಲೀಸ್ ಪೆರ್ರಿ, ನಿಕೋಲಾ ಕ್ಯಾರಿ, ಅಮಂಡಾ ವೆಲ್ಲಿಂಗ್ಟನ್, ಅನ್ನಾಬೆಲ್ ಸದರ್ಲ್ಯಾಂಡ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications