CWG 2022: ಭಾರತ vs ಬಾರ್ಬಡೋಸ್ ಪಂದ್ಯದ ಸಂಭಾವ್ಯ ಆಡುವ ಬಳಗ ಮತ್ತು ನೇರಪ್ರಸಾರದ ಮಾಹಿತಿ

ಪ್ರಸ್ತುತ ಇಂಗ್ಲೆಂಡ್‌ನ ಬರ್ಮಿಂಗ್ಹ್ಯಾಮ್‌ನಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಕಾಮನ್ ವೆಲ್ತ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತದ ಹಲವಾರು ಕ್ರೀಡಾಪಟುಗಳು ವಿವಿಧ ವಿಭಾಗಗಳಲ್ಲಿ ಕಣಕ್ಕಿಳಿದಿದ್ದಾರೆ. ಈಗಾಗಲೇ ಹಲವಾರು ಕ್ರೀಡೆಗಳಲ್ಲಿ ಪದಕಗಳನ್ನು ಭಾರತ ತನ್ನದಾಗಿಸಿಕೊಂಡಿದ್ದು, ಈ ಬಾರಿಯ ಕಾಮನ್ ವೆಲ್ತ್ ಗೇಮ್ಸ್ ಕ್ರೀಡಾ ಕೂಟದಲ್ಲಿ ಕ್ರಿಕೆಟ್ ಕೂಡ ಒಂದು ಕ್ರೀಡೆಯಾಗಿರುವುದು ವಿಶೇಷವಾಗಿದೆ.
ಇನ್ನು ಕ್ರಿಕೆಟ್ ವಿಭಾಗದಲ್ಲಿ ಭಾರತ, ಆಸ್ಟ್ರೇಲಿಯಾ, ಪಾಕಿಸ್ತಾನ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್, ಶ್ರೀಲಂಕಾ ಮತ್ತು ಬಾರ್ಬಡೋಸ್ ವನಿತೆಯರ ತಂಡಗಳು ಕಣಕ್ಕಿಳಿದಿವೆ. ಈ 8 ತಂಡಗಳನ್ನು ಸಮನಾಗಿ 2 ಗುಂಪುಗಳಾಗಿ ವಿಂಗಡಿಸಲಾಗಿದ್ದು, ಗ್ರೂಪ್ ಹಂತದಲ್ಲಿ ಪ್ರತಿ ತಂಡಕ್ಕೆ 3 ಪಂದ್ಯಗಳನ್ನು ಆಯೋಜಿಸಲಾಗಿದೆ. ಈ ಪೈಕಿ ಅತಿ ಹೆಚ್ಚು ಪಂದ್ಯಗಳನ್ನು ಗೆದ್ದ ತಂಡಗಳು ಸೆಮಿಫೈನಲ್ ಪ್ರವೇಶಿಸಲಿವೆ.
ಸದ್ಯ ಭಾರತ ವನಿತೆಯರ ತಂಡ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಆಸ್ಟ್ರೇಲಿಯಾ ವನಿತೆಯರ ವಿರುದ್ಧ ಸೋಲನ್ನು ಕಂಡು ನಂತರ ನಡೆದ ದ್ವಿತೀಯ ಪಂದ್ಯದಲ್ಲಿ ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಸೋಲಿಸುವುದರ ಮೂಲಕ ಗೆಲುವಿನ ಹಾದಿಗೆ ಮರಳಿತು. ಹೀಗೆ ಪ್ರಥಮ ಪಂದ್ಯವನ್ನು ಸೋತು ದ್ವಿತೀಯ ಪಂದ್ಯವನ್ನು ಗೆದ್ದಿರುವ ಭಾರತ ವನಿತೆಯರ ತಂಡ ಗ್ರೂಪ್ ಹಂತದ ತನ್ನ ಅಂತಿಮ ಪಂದ್ಯದಲ್ಲಿ ಬಾರ್ಬಡೋಸ್ ವನಿತೆಯರ ತಂಡದ ವಿರುದ್ಧ ಇಂದು ( ಆಗಸ್ಟ್ 3 ) ಎಡ್ಜ್‌ಬಾಸ್ಟನ್ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಸೆಣಸಾಡಲಿದ್ದು, ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆಲ್ಲಲೇಬೇಕಾಗಿದೆ. ಅತ್ತ ಪ್ರಥಮ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಗೆದ್ದು ನಂತರ ಆಸ್ಟ್ರೇಲಿಯಾ ವನಿತೆಯರ ವಿರುದ್ಧ ಸೋತಿರುವ ಬಾರ್ಬಡೋಸ್ ವನಿತೆಯರಿಗೂ ಸಹ ಇದು ತೃತೀಯ ಪಂದ್ಯವಾಗಿದ್ದು, ಬಾರ್ಬಡೋಸ್ ವನಿತೆಯರು ಕೂಡ ಗೆಲುವಿನತ್ತ ಕಣ್ಣಿಟ್ಟಿದ್ದಾರೆ. ಹೀಗೆ ಸಾಕಷ್ಟು ರೋಚಕತೆ ಕೆರಳಿಸಿರುವ ಈ ಪಂದ್ಯದಲ್ಲಿ ಕಣಕ್ಕಿಳಿಯಬಹುದಾದ ಆಡುವ ಬಳಗ ಮತ್ತು ನೇರ ಪ್ರಸಾರದ ಕುರಿತಾದ ಮಾಹಿತಿಗಳು ಮುಂದೆ ಇದೆ ಓದಿ.

ಪಿಚ್ ವರದಿ
ಈ ಪಂದ್ಯ ನಡೆಯಲಿರುವ ಎಡ್ಜ್ ಬಾಸ್ಟನ್ ಕ್ರೀಡಾಂಗಣದ ಪಿಚ್ ಬ್ಯಾಟ್ಸ್‌ಮನ್‌ಗಳಿಗೆ ಹೆಚ್ಚು ಸಹಕರಿಸಲಿದೆ. ಸ್ಪಿನ್ ಬೌಲರ್‌ಗಳಿಗಿಂತ ವೇಗಿಗಳು ಈ ಪಿಚ್‌ನಲ್ಲಿ ಹೆಚ್ಚು ವಿಕೆಟ್ ಕಬಳಿಸುವ ಸಾಧ್ಯತೆಗಳಿದ್ದು, ಎರಡೂ ತಂಡಗಳ ಬ್ಯಾಟರ್ಸ್ ಹೆಚ್ಚು ರನ್ ಕಲೆಹಾಕಲು ಪಿಚ್ ಸಹಕರಿಸಲಿದೆ.

ಸಂಭಾವ್ಯ ಆಡುವ ಬಳಗ
ಭಾರತ ವನಿತೆಯರು: ಹರ್ಮನ್‌ಪ್ರೀತ್ ಕೌರ್ (ನಾಯಕಿ), ಜೆಮಿಮಾ ರಾಡ್ರಿಗಸ್, ಸ್ಮೃತಿ ಮಂಧಾನ, ಶಫಾಲಿ ವರ್ಮಾ, ಯಾಸ್ತಿಕಾ ಭಾಟಿಯಾ (ವಿಕೆಟ್ ಕೀಪರ್), ಸಬ್ಬಿನೇನಿ ಮೇಘನಾ, ದೀಪ್ತಿ ಶರ್ಮಾ, ರಾಧಾ ಯಾದವ್, ಸ್ನೇಹ ರಾಣಾ, ಮೇಘನಾ ಸಿಂಗ್/ಪೂಜಾ ವಸ್ತ್ರಾಕರ್, ರೇಣುಕಾ ಸಿಂಗ್
ಬರ್ಬಡೋಸ್: ಡಿಯಾಂಡ್ರಾ ಡಾಟಿನ್, ಹೇಲಿ ಮ್ಯಾಥ್ಯೂಸ್ (ನಾಯಕಿ), ಕಿಸಿಯಾ ನೈಟ್ (ವಿಕೆಟ್ ಕೀಪರ್), ಕಿಶೋನಾ ನೈಟ್, ಆಲಿಯಾ ಅಲೀನ್, ತ್ರಿಶನ್ ಹೋಲ್ಡರ್, ಅಲಿಸಾ ಸ್ಕ್ಯಾಂಟಲ್‌ಬರಿ, ಶಕೆರಾ ಸೆಲ್ಮನ್, ಶಾಮಿಲಿಯಾ ಕಾನೆಲ್, ಕೀಲಾ ಎಲಿಯಟ್, ಶಾನಿಕಾ ಬ್ರೂಸ್

ನೇರ ಪ್ರಸಾರ
ಭಾರತ ವನಿತೆಯರ ತಂಡ ಹಾಗೂ ಬಾರ್ಬಡೋಸ್ ವನಿತೆಯರ ತಂಡಗಳ ನಡುವಿನ ಈ ಪಂದ್ಯದ ನೇರ ಪ್ರಸಾರವನ್ನು ಸೋನಿ ಟೆನ್ ನೆಟ್‌ವರ್ಕ್ ಚಾನೆಲ್ ಹಾಗೂ ಸೋನಿ ಲೀವ್ ಅಪ್ಲಿಕೇಶನ್‌ನಲ್ಲಿ ವೀಕ್ಷಿಸಬಹುದಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications