For Quick Alerts
ALLOW NOTIFICATIONS  
For Daily Alerts
 

PKL 12: ದಬಾಂಗ್‌ ದೆಹಲಿ, ಹರಿಯಾಣ ಸ್ಟೀಲರ್ಸ್‌ಗೆ ಭರ್ಜರಿ ಜಯ

ಜೈಪುರ: ಭರವಸೆಯ ಆಟಗಾರ ಶಿವಂ ಪತಾರೆ ಅವರ ಭರ್ಜರಿ ಪ್ರದರ್ಶನ ಬಲದಿಂದ ಹರಿಯಾಣ ಸ್ಟೀಲರ್ಸ್‌ 12ನೇ ಆವೃತ್ತಿಯ ಪ್ರೋ ಕಬಡ್ಡಿ ಟೂರ್ನಿಯಲ್ಲಿ ಪಾಟ್ನಾ ಪೈರೇಟ್ಸ್‌ ತಂಡವನ್ನ ಮಣಿಸಿ ಅಂಕ ಪಟ್ಟಿಯಲ್ಲಿ ಬಡ್ತಿ ಪಡೆದಿದೆ.

ಬುಧವಾರ ನಡೆದ ಎರಡನೇ ಪಂದ್ಯದಲ್ಲಿ ಹರಿಯಾಣ 42-32 ರಿಂದ ಮಾಜಿ ಚಾಂಪಿಯನ್ ಪಾಟ್ನಾ ಪೈರೇಟ್ಸ್‌ ತಂಡವನ್ನು ಮಣಿಸಿತು. ಹರಿಯಾಣ ಸ್ಟೀಲರ್ಸ್‌ ತಂಡ ಮೊದಲ 20 ನಿಮಿಷದಲ್ಲಿ ಭರ್ಜರಿ ಪ್ರದರ್ಶನ ನೀಡಿತು. ಈ ಅವಧಿಯಲ್ಲಿ ಹರಿಯಾಣ 21-18 ಅಂಕಗಳಿಂದ ಮುನ್ನಡೆ ಸಾಧಿಸಿತ್ತು. ಈ ವೇಳೆ ದಾಳಿ ಹಾಗೂ ಟ್ಯಾಕಲ್‌ನಲ್ಲಿ ಸ್ಟೀಲರ್ಸ್‌ ಆಟಗಾರರು ಭರ್ಜರಿ ಪ್ರದರ್ಶನ ನೀಡಿದರು. ಈ ಅವಧಿಯಲ್ಲಿ ಉಭಯ ತಂಡಗಳು ತಲಾ ಒಮ್ಮೆ ಅಂಗಳವನ್ನು ಖಾಲಿ ಮಾಡಿದ್ದವು.

Dabang Delhi KC and Haryana Steelers Shine in PKL 12 Securing Victories and Boosting Standings

ಎರಡನೇ ಅವಧಿಯ ಆಟದಲ್ಲೂ ಹರಿಯಾಣ ಸ್ಟೀಲರ್ಸ್‌ ತಾನು ಸಾಧಿಸಿದ್ದ ಅಂಕಗಳಿಕೆಯ ಅಂತರವನ್ನು ಸುಲಭವಾಗಿ ಬಿಟ್ಟು ಕೊಡಲಿಲ್ಲ. ಈ ಅವಧಿಯಲ್ಲೂ ಸ್ಟಾರ್‌ ಆಟಗಾರರು ಅಮೋಘ ಪ್ರದರ್ಶನ ನೀಡಿದರು. ಈ ವೇಳೆಯಲ್ಲೂ ದಾಳಿ ಹಾಗೂ ಟ್ಯಾಕಲ್‌ನಲ್ಲಿ ಸ್ಥಿರ ಪ್ರದರ್ಶನ ನೀಡಿದ್ದ ಪರಿಣಾಮ ಹರಿಯಾಣ ಪಂದ್ಯವನ್ನು ಸುಲಭವಾಗಿ ಗೆದ್ದಿತು. ಒಟ್ಟಾರೆ ಹರೊಯಾಣ ದಾಳಿಯಲ್ಲಿ 16 ಅಂಕ ಕಲೆ ಹಾಕಿದರೆ, ಟ್ಯಾಕಲ್‌ನಲ್ಲೂ 16 ಅಂಕ ಸೇರಿಸಿತು. ಹರಿಯಾಣ ತಂಡದ ಪರ ಶಿವಂ ಪತಾರೆ ಅಮೋಘ ದಾಳಿ ನಡೆಸಿದರು. ಇವರು 17 ಬಾರಿ ದಾಳಿ ನಡೆಸಿ 15 ಅಂಕಗಳನ್ನು ಕಲೆ ಹಾಕಿದರು. ಈ ಗೆಲುವಿನ ಮೂಲಕ ಹರಿಯಾಣ 8 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆ ಬಡ್ತಿ ಪಡೆದಿದೆ.

ದಬಾಂಗ್‌ ಅಗ್ರ ಸ್ಥಾನ

ಇದಕ್ಕೂ ಮೊದಲು ನಡೆದ ಪಂದ್ಯದಲ್ಲಿ ದಬಾಂಗ್‌ ದೆಹಲಿ ಕೆಸಿ 33-29 ಅಂಕಗಳಿಂದ ತೆಲುಗು ಟೈಟಾನ್ಸ್‌ ತಂಡವನ್ನು ಸೋಲಿಸಿ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ಬಡ್ತಿ ಪಡೆಯಿತು. ಈ ಪಂದ್ಯದ ಮೊದಲ 20 ನಿಮಿಷದಲ್ಲಿ ತೆಲುಗು ಟೈಟಾನ್ಸ್ ತಂಡ ಅಮೋಘ ಪ್ರದರ್ಶನ ನೀಡಿ ದಾಳಿ ಹಾಗೂ ಟ್ಯಾಕಲ್‌ನಲ್ಲಿ ಅಂಕಗಳನ್ನು ಸಮನಾಗಿ ಕಲೆ ಹಾಕಿತು. ಅಲ್ಲದೆ ಈ ಅವಧಿಯಲ್ಲಿ 14-9 ಅಂಕಗಳಿಂದ ಮುನ್ನಡೆಯನ್ನು ಸಾಧಿಸಿತ್ತು. ಆದರೆ ಎರಡನೇ ಅವಧಿಯ ಆಟದಲ್ಲಿ ದಬಾಂಗ್ ದೆಹಲಿ, ಅದ್ಭುತ ಪ್ರದರ್ಶನ ನೀಡಿತು. ಈ ವೇಳೆ ಸಂಘಟಿತ ಆಟದ ಪ್ರದರ್ಶನ ನೀಡಿದ ತಂಡ ಅಂಕಗಳಿಕೆಯಲ್ಲಿ ಭಾರಿ ಮುನ್ನಡೆ ಕಾಯ್ದುಕೊಂಡಿತು. ಈ ವೇಳೆಯಲ್ಲಿ ದಾಳಿ ಹಾಗೂ ಟ್ಯಾಕಲ್‌ನಲ್ಲಿ ಆಟಗಾರರು ಅಮೋಘ ಪ್ರದರ್ಶನ ನೀಡಿದರು. ಅಲ್ಲದೆ ಇದೇ ವೇಳೆ ಟೈಟಾನ್ಸ್ ತಂಡ ಸಹ ಒಮ್ಮೆ ಆಲೌಟ್ ಆಯಿತು. ಇಲ್ಲಿಂದ ದಬಾಂಗ್ ದೆಹಲಿ ಪಂದ್ಯವನ್ನು ಕೈ ಬಿಡಲಿಲ್ಲ. ದಬಾಂಗ್ ದೆಹಲಿ ತಂಡದ ಪರ ನೀರಜ್ ನರ್ವಾಲ್‌ 9, ಡಿಫೆಂಡರ್‌ಗಳಾದ ಸೌರಭ್ ಹಾಗೂ ಫಜಲ್‌ 5 ಅಂಕ ಕಲೆ ಹಾಕಿ ಜಯದಲ್ಲಿ ಮಿಂಚಿದರು.

Story first published: Wednesday, September 17, 2025, 22:41 [IST]
Other articles published on Sep 17, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+