For Quick Alerts
ALLOW NOTIFICATIONS  
For Daily Alerts
 

ವೇಗಿ ಮೊಹಮ್ಮದ್‌ ಶಮಿ ಬೆನ್ನಿಗೆ ನಿಂತ ದಾದಾ

ಟೀಮ್ ಇಂಡಿಯಾ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಮೊದಲ ಟೆಸ್ಟ್‌ ನ.14 ರಂದು ಕೋಲ್ಕತ್ತಾದಲ್ಲಿ ಆರಂಭವಾಗಲಿದೆ. ಈ ಸರಣಿಗೆ ಈಗಾಗಲೇ ತಂಡವನ್ನು ಪ್ರಕಟಿಸಲಾಗಿದೆ. ಟೀಮ್ ಇಂಡಿಯಾದ ಸ್ಟಾರ್ ವೇಗದ ಬೌಲರ್‌ ಮೊಹಮ್ಮದ್ ಶಮಿ ಈ ತಂಡದಲ್ಲಿ ಸ್ಥಾನ ಪಡೆಯದೇ ಇದ್ದಿದ್ದರಿಂದ ತಮ್ಮ ಬೇಸರವನ್ನು ಹೊರ ಹಾಕಿದ್ದರು. ರಣಜಿ ಟ್ರೋಫಿಯಲ್ಲಿ ಪಂಜಾಬ್ ತಂಡವನ್ನು ಪ್ರತಿನಿಧಿಸುವ ಶಮಿ, ಸದ್ಯ ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ. ಆದರೂ ಇವರನ್ನು ಕಡೆಗಣನೆ ಮಾಡಲಾಗಿದೆ. ಈ ಬಗ್ಗೆ ಟೀಮ್ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ ತಮ್ಮ ಅನಿಸಿಕೆ ತಿಳಿಸಿದ್ದಾರೆ.

ಟೀಮ್ ಇಂಡಿಯಾದ ವೇಗಿ ಶಮಿ ದೇಶೀಯ ಟೂರ್ನಿಯಲ್ಲಿ ಉತ್ತಮವಾಗಿ ಬೌಲಿಂಗ್ ಮಾಡುತ್ತಿದ್ದಾರೆ. ಅಲ್ಲದೆ ಇವರು ಮೂರು ಫರ್ಮೆಟ್‌ಗಳಲ್ಲಿ ತಂಡಕ್ಕೆ ಮರಳಬೇಕು ಎಂದು ಗಂಗೂಲಿ ನಂಬಿದ್ದಾರೆ. ಸೋಮವಾರ ಖಾಸಗಿ ಕಾರ್ಯಕ್ರಮದಲ್ಲಿ ಮಾತನಾಡಿದ ಗಂಗೂಲಿ, ಶಮಿ ಫಿಟ್ ಆಗಿದ್ದಾರೆ. ಅವರು ಆಡುವುದನ್ನು ರಣಜಿ ಟ್ರೋಫಿಯಲ್ಲಿ ನೋಡಿದ್ದೇನೆ ಎಂದು ತಿಳಿಸಿದ್ದಾರೆ.

Dada Backs Pacer Mohammed Shami Fit and Deserves Place in All Three Formats

ಮೊಹಮ್ಮದ್ ಶಮಿ ಅವರ ಮೇಲೆ ಆಯ್ಕೆದಾರರ ಸಹ ಕಣ್ಣು ನೆಟ್ಟಿದ್ದಾರೆ. ಖಚಿತವಾಗಿ ಅವರ ಮೇಲೂ ಚರ್ಚೆಗಳು ನಡೆದಿರುತ್ತವೆ. ಫಿಟ್ನೆಸ್‌ ಹಾಗೂ ಕೌಶಲ್ಯದ ವಿಚಾರದಲ್ಲಿ ಶಮಿ ಉತ್ತಮವಾಗಿದ್ದಾರೆ. ನನ್ನ ಅನಸಿಕೆ ಪ್ರಕಾರ ಇವರು ಭಾರತದ ಪರ ಮೂರು ಫಾರ್ಮೆಟ್‌ಗಳಲ್ಲಿ ಆಡಬಹುದು. ಟೆಸ್ಟ್‌, ಏಕದಿನ, ಟಿ20 ಫಾರ್ಮೆಟ್‌ನಿಂದ ಇವರನ್ನು ದೂರ ಇಟ್ಟ ಬಗ್ಗೆ ಯಾವುದೇ ಕಾರಣ ನನಗೆ ಕಾಣುತ್ತಿಲ್ಲ ಎಂದು ಹೇಳಿದ್ದಾರೆ.

ಚಾನ್ಸ್‌ ಯಾವಾಗ?

ಭಾರತದ ಪರ ಮೊಹಮ್ಮದ್‌ ಶಮಿ ಪ್ರಸಕ್ತ ವರ್ಷದ ಆರಂಭದಲ್ಲಿ ದುಬೈನಲ್ಲಿ ನಡೆದ ವಿಶ್ವ ಚಾಂಪಿಯನ್ಸ್‌ ಟ್ರೋಫಿಯಲ್ಲಿ ಭಾರತದ ಪರ ಕಣಕ್ಕೆ ಇಳಿದಿದ್ದರು. ಈ ವೇಳೆ ಸ್ಥಿರ ಬೌಲಿಂಗ್ ಪ್ರದರ್ಶನ ನೀಡಿದ್ದರು. ಆ ಬಳಿಕ ಇವರು ಗಾಯಕ್ಕೆ ತುತ್ತಾಗಿದ್ದರಿಂದ ತಂಡದಿಂದ ಹೊರಗಿಳಿಯಬೇಕಾಯಿತು. ಇದಾದ ಬಳಿಕ ದಕ್ಷಿಣ ಆಫ್ರಿಕಾ ವಿರದ್ಧದ ಟೆಸ್ಟ್‌ ಸರಣಿಗೆ ಇವರನ್ನು ತಂಡದಲ್ಲಿ ಆಯ್ಕೆ ಮಾಡಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ಇವರ ಈ ಆಸೆ ಮಣ್ಣು ಪಾಲಾಗಿದೆ. ಇವರಿಗೆ ಏಕದಿನ ಸರಣಿಯಲ್ಲಾದ್ರೂ ಚಾನ್ಸ್‌ ಸಿಗುತ್ತದಾ ಕಾದು ನೋಡಬೇಕಿದೆ.

Dada Backs Pacer Mohammed Shami Fit and Deserves Place in All Three Formats

35 ವರ್ಷದ ಮೊಹಮ್ಮದ್ ಶಮಿ ರಣಜಿ ಟ್ರೋಫಿಯಲ್ಲಿ ಸ್ಥಿರ ಪ್ರದರ್ಶನ ನೀಡಿದ್ದು, 15 ವಿಕೆಟ್‌ ಕಬಳಿಸಿದ್ದಾರೆ. ಈ ವೇಳೆ ಇವರು 91 ಓವರ್ ಬೌಲಿಂಗ್ ಮಾಡಿದ್ದಾರೆ. ಇವರು ಬೌಲಿಂಗ್ ಮಾಡುವದನ್ನು ನೋಡಿದರೆ ಇವರು ಸಂಪೂರ್ಣ ಫಿಟ್ ಆಗಿರುವಂತೆ ಕಾಣುತ್ತದೆ. ಇವರು 2023ರ ಏಕದಿನ ವಿಶ್ವಕಪ್‌ ಬಳಿಕ 14 ತಿಂಗಳು ಕಾಲ ಮೈದಾನದಿಂದ ದೂರ ಉಳಿದಿದ್ದರು. ಭಾರತದ ಪರ ಮೂರು ಫಾರ್ಮೆಟ್‌ಗಳಲ್ಲಿ ಆಡಿದ ಹೆಗ್ಗಳಿಕೆ ಶಮಿ ಅವರಿಗೆ ಸಲ್ಲುತ್ತದೆ. ಶಮಿ ಭಾರತದ ಪರ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಒಟ್ಟು 197 ಪಂದ್ಯಗಳನ್ನು ಆಡಿದ್ದು, ಒಟ್ಟು 659 ವಿಕೆಟ್‌ ಪಡೆದಿದ್ದಾರೆ.

Story first published: Tuesday, November 11, 2025, 15:03 [IST]
Other articles published on Nov 11, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+