ಇಂಗ್ಲೆಂಡ್ ವಿರುದ್ಧ ದಾಳಿಗಿಳಿಯಲಿದ್ದಾರೆ ಮಾರಕ ವೇಗಿ ಡೇಲ್ ಸ್ಟೇನ್!

ಕೇಪ್‌ಟೌನ್, ಫೆಬ್ರವರಿ 8: ದಕ್ಷಿಣ ಆಫ್ರಿಕಾದ ಮಾರಕ ವೇಗಿ ಡೇಲ್ ಸ್ಟೇನ್ ಮರಳಿ ತಂಡ ಸೇರಿಕೊಂಡಿದ್ದಾರೆ. ಇಂಗ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ಟಿ20ಐ ಸರಣಿಗಾಗಿ ಕ್ರಿಕೆಟ್ ಸೌತ್ ಆಫ್ರಿಕಾ, ಸ್ಟೇನ್ ಅವರನ್ನು ಹೆಸರಿಸಿದೆ. ಇದರರ್ಥ, ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ವಿಚಾರದಲ್ಲಿ ದಕ್ಷಿಣ ಆಫ್ರಿಕಾ ಆಯ್ಕೆ ಸಮಿತಿಯು ಸ್ಟೇನ್ ಅವರನ್ನು ತಲೆಯಲ್ಲಿರಿಸಿಕೊಂಡಿದೆ ಅನ್ನೋದು ನಿಜ.
ಕಳೆದ ವರ್ಷ ಅಂದರೆ 2019ರ ಮಾರ್ಚ್‌ನಿಂದ ಡೇಲ್ ಸ್ಟೇನ್ ದಕ್ಷಿಣ ಆಫ್ರಿಕಾ ಪರ ಯಾವುದೇ ಪಂದ್ಯಗಳನ್ನಾಡಿಲ್ಲ. ಆದರೆ ಅನುಭವಿ ವೇಗಿ ಸದ್ಯ ಭುಜದ ಗಾಯದಿಂದ ಸಂಪೂರ್ಣ ಚೇತರಿಸಿಕೊಂಡಿದ್ದಾರೆ. ಇತ್ತೀಚಿಗೆ ಆಸ್ಟ್ರೇಲಿಯಾದ ದೇಸಿ ಕ್ರಿಕೆಟ್ ಬಿಗ್‌ಬ್ಯಾಷ್ ಲೀಗ್‌ನಲ್ಲಿ ಮೆಲ್ಬರ್ನ್ ಸ್ಟಾರ್ಸ್ ಪರ ಆಡಿದ್ದರು.
ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿರುವ ಇಂಗ್ಲೆಂಡ್ ತಂಡ, ಅಲ್ಲಿ ಏಕದಿನ ಸರಣಿ ಆಡುತ್ತಿದೆ. ಫೆಬ್ರವರಿ 12ರಿಂದ ಟಿ20 ಸರಣಿ ಆರಂಭಗೊಳ್ಳಲಿದೆ. ಈ ಸರಣಿಯಲ್ಲಿ ಫಾ ಡು ಪ್ಲೆಸಿಸ್ ಮತ್ತು ಕಾಗಿಸೋ ರಬಾಡ ವಿಶ್ರಾಂತಿಯಲ್ಲಿರಲಿದ್ದಾರೆ. ಇನ್ನೊಂದೆಡೆ ತಂಡ ಸೇರಿಕೊಳ್ಳುವುದಾಗಿ ಹೇಳಿರುವ ಎಬಿ ಡಿ ವಿಲಿಯರ್ಸ್ ಇನ್ನಷ್ಟೇ ರಾಷ್ಟ್ರೀಯ ತಂಡದಲ್ಲಿ ಕಾಣಿಸಿಕೊಳ್ಳಬೇಕಿದೆ.
'ಪರಿಶ್ರಮಿ ಆಟಗಾರರಿಗೆ ಅವಕಾಶ ನೀಡುವತ್ತ ನಾವು ಯೋಚಿಸುತ್ತಿದ್ದೇವೆ. ನಮ್ಮ ಕೆಲ ಪ್ರಮುಖ ಆಟಗಾರರನ್ನು ಅತೀ ಅಗತ್ಯದ ಸಂದರ್ಭಗಳಲ್ಲಿ ಬಳಸಿಕೊಳ್ಳಲಿದ್ದೇವೆ,' ಎಂದು ದಕ್ಷಿಣ ಆಫ್ರಿಕಾ ಕ್ರಿಕೆಟ್ ಡೈರೆಕ್ಟರ್ ಗ್ರೇಮ್ ಸ್ಮಿತ್ ಹೇಳಿದ್ದಾರೆ. ಅಂದ್ಹಾಗೆ, ಬಹು ನಿರೀಕ್ಷಿತ ಟಿ20 ವಿಶ್ವಕಪ್ ಟೂರ್ನಿ ಅಕ್ಟೋಬರ್ 18ರಿಂದ ನವೆಂಬರ್ 15ರ ವರೆಗೆ ನಡೆಯಲಿದೆ.
ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಗೆ ದಕ್ಷಿಣ ಆಫ್ರಿಕಾ ತಂಡ
ಕ್ವಿಂಟನ್ ಡಿ ಕಾಕ್ (ನಾಯಕ), ರೀಜಾ ಹೆಂಡ್ರಿಕ್ಸ್, ಟೆಂಬಾ ಬವುಮಾ, ರಾಸ್ಸಿ ವಾನ್ ಡೆರ್ ಡುಸೆನ್, ಡೇವಿಡ್ ಮಿಲ್ಲರ್, ಪೈಟ್ ವ್ಯಾನ್ ಬಿಲ್ಜಾನ್, ಡ್ವೈನ್ ಪ್ರಿಟೋರಿಯಸ್, ಆ್ಯಂಡಿಲೆ ಫೆಹ್ಲುಕ್ವಾಯೊ, ಜಾನ್-ಜಾನ್ ಸ್ಮಟ್ಸ್, ಬ್ಯೂರನ್ ಹೆಂಡ್ರಿಕ್ಸ್, ತಬ್ರೈಜ್ ಶಮ್ಸಿ, ಲುಂಗಿ ಎನ್‌ಗಿಡಿ, ಸಿಸಾಂಡಾ ಮಾಗಲಾ , ಡೇಲ್ ಸ್ಟೇನ್, ಹೆನ್ರಿಕ್ ಕ್ಲಾಸೆನ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications