ದಕ್ಷಿಣ ಆಫ್ರಿಕಾಕ್ಕೆ ಆಘಾತ, ಡೇಲ್ ಸ್ಟೇನ್ ಸರಣಿಯಿಂದ ಔಟ್!

ಕೇಪ್ ಟೌನ್, ಜನವರಿ 07: ಭಾರತ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಟೆಸ್ಟ್ ಪಂದ್ಯದಲ್ಲೇ ದಕ್ಷಿಣ ಆಫ್ರಿಕಾ ಆಘಾತ ಅನುಭವಿಸಿದೆ. ಬಹುಕಾಲದ ನಂತರ ತಂಡಕ್ಕೆ ಮರಳಿದ್ದ ಪ್ರಮುಖ ವೇಗಿ ಡೇಲ್ ಸ್ಟೇನ್ ಅವರು ಗಾಯಾಳುವಾಗಿದ್ದಾರೆ. ಭಾರತ ವಿರುದ್ಧದ ಮೂರು ಟೆಸ್ಟ್ ಸರಣಿಯಿಂದ ಸ್ಟೇನ್ ಹೊರಗುಳಿಯಬೇಕಾಗಿದೆ.
ಮೊದಲ ಟೆಸ್ಟ್ ಪಂದ್ಯದಲ್ಲಿ 18ನೇ ಓವರ್ ನಲ್ಲಿ ಮೂರು ಎಸೆತ ಹಾಕಿದ ಬಳಿಕ ಸ್ಟೇನ್ ಅವರ ಎಡ ಪಾದದಲ್ಲಿ ನೋವು ಕಾಣಿಸಿಕೊಂಡಿತು. 'ಮೊದಲಿಗೆ ಶೂ, ಸಾಕ್ಸ್ ಸಮಸ್ಯೆ ಎಂದು ಎಲ್ಲರೂ ತಿಳಿದಿದ್ದರು. ಆದರೆ, ನಂತರ ಪಾದದ ಸ್ನಾಯು ಸೆಳೆತ ತೀವ್ರವಾಗಿದ್ದು ಕಂಡು ಬಂದಿದೆ. ಕನಿಷ್ಟ 4 ರಿಂದ 6 ವಾರಗಳ ಕಾಲ ವಿಶ್ರಾಂತಿ ಅಗತ್ಯವಿದೆ' ಎಂದು ದಕ್ಷಿಣ ಆಫ್ರಿಕಾ ತಂಡದ ವೈದ್ಯ ಮೊಹಮ್ಮದ್ ಮೂಸಾಜೀ ಹೇಳಿದ್ದಾರೆ.
ಭುಜದ ಸಮಸ್ಯೆಗೆ ಒಳಗಾಗಿ ಒಂದು ವರ್ಷಗಳಿಗೂ ಅಧಿಕ ಕಾಲ ತಂಡದಿಂದ ದೂರವುಳಿದಿದ್ದ ಸ್ಟೇನ್ ಅವರು ಮತ್ತೆ ತಂಡಕ್ಕೆ ಮರಳಿದ್ದರು. ಕೇಪ್ ಟೌನ್ ಟೆಸ್ಟ್ ನಲ್ಲಿ ಉತ್ತಮವಾಗಿ ಬೌಲಿಂಗ್ ಮಾಡಿದ್ದರು. ಆದರೆ, ಈಗ ಮತ್ತೆ ಗಾಯಾಳುವಾಗಿ, ತಂಡದಿಂದ ಹೊರ ಬೀಳಬೇಕಾಗಿದೆ.(ಪಿಟಿಐ)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications