ವಿಶ್ವಕಪ್ ಉದ್ಘಾಟನಾ ಪಂದ್ಯದಿಂದ ದಕ್ಷಿಣ ಆಫ್ರಿಕಾದ ಈ ವೇಗಿ ಔಟ್!

ಲಂಡನ್, ಮೇ 28: ಇಂಗ್ಲೆಂಡ್ ಮತ್ತು ವೇಲ್ಸ್ ಆತಿಥ್ಯದಲ್ಲಿ ಮೇ 30ರಂದು ಆರಂಭವಾಗಲಿರುವ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್‌ನ 12ನೇ ಆವೃತ್ತಿಯ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ವಿರುದ್ಧ ದಕ್ಷಿಣ ಆಫ್ರಿಕಾ ತಂಡದ ವೇಗಿ ಡೇಲ್ ಸ್ಟೇನ್ ಕಣಕ್ಕಿಳಿಯುವುದಿಲ್ಲ.
35 ವರ್ಷದ ಅನುಭವಿ ವೇಗದ ಬೌಲರ್ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ವೇಳೆ ಆರ್‌ಸಿಬಿ ತಂಡದ ಪರ ಆಡುವಾಗ ಭುಜದ ಗಾಯದ ಸಮಸ್ಯೆಗೆ ತುತ್ತಾಗಿದ್ದರು. ಇದರಿಂದ ಸಂಪೂರ್ಣ ಚೇತರಿಸದ ಅವರು ದಿ ಓವಲ್ ಕ್ರೀಡಾಂಗಣದಲ್ಲಿ ಗುರುವಾರ ನಡೆಯಲಿರುವ ಉದ್ಘಾಟನಾ ಪಂದ್ಯದಿಂದ ಹೊರಗುಳಿದಿದ್ದಾರೆ.
"ಡೇಲ್ ಸ್ಟೇನ್ ಸಂಪೂರ್ಣ ಸಿದ್ದರಿಲ್ಲ. ಆದರೆ ಶೀಘ್ರವೇ ಸಂಪೂರ್ಣ ಸಜ್ಜಾಗಲಿದ್ದಾರೆ. ಹೀಗಾಗಿ ಮೊದಲ ಪಂದ್ಯಕ್ಕೆ ಅವರು ಲಭ್ಯರಾಗುವುದಿಲ್ಲ. ಇದು ದೊಡ್ಡ ಟೂರ್ನಿ ಆದಷ್ಟು ಬೇಗ ಚೇತರಿಸಿ ಅವರು ಸೇವೆಗೆ ಲಭ್ಯರಾಗಲಿದ್ದಾರೆ. ಅಲ್ಲಿಯವರೆಗೂ ತಂಡದ ಉಳಿದ 14 ಆಟಗಾರಲ್ಲಿ ಒಬ್ಬರನ್ನು ಅವರ ಸ್ಥಾನದಲ್ಲಿ ಬಳಕೆ ಮಾಡಿಕೊಳ್ಳಲಿದ್ದೇವೆ,'' ಎಂದು ದಕ್ಷಿಣ ಆಫ್ರಿಕಾ ತಂಡದ ಮುಖ್ಯ ಕೋಚ್ ಓಟಿಸ್ ಗಿಬ್ಸನ್ ಹೇಳಿದ್ದಾರೆ.
ಕಳೆದ ಏಪ್ರಿಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಬದಲಿ ಆಟಗಾರನಾಗಿ ಸೇರ್ಪಡೆಗೊಂಡು ಬೌಲಿಂಗ್ ವಿಭಾಗದಲ್ಲಿ ಶಕ್ತಿ ತುಂಬಿದ್ದ ಸ್ಟೇನ್, ದುರದೃಷ್ಟವಶಾತ್ ಗಾಯದ ಸಮಸ್ಯೆಗೆ ತುತ್ತಾದರು. ಅಂದಿನಿಂದ ಅವರು ಯಾವುದೇ ಸ್ಪರ್ಧಾತ್ಮಕ ಪಂದ್ಯಗಳಲ್ಲಿ ಬೌಲಿಂಗ್ ನಡೆಸಿಲ್ಲ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications