For Quick Alerts
ALLOW NOTIFICATIONS  
For Daily Alerts
 

ಡೇಲ್ ಸ್ಟೇನ್ ರ ಕಡೆಯ ಏಕದಿನ ಪಂದ್ಯಾಟವಾಗಲಿದೆ 2019ರ ವಿಶ್ವಕಪ್!

Dale Steyn Set For ODI Swansong At 2019 World Cup

ಕೇಪ್ ಟೌನ್, ಜುಲೈ 27: ದಕ್ಷಿಣ ಆಫ್ರಿಕಾದ ಮಾರಕ ವೇಗಿ ಡೇಲ್ ಸ್ಟೇನ್ ಅವರಿಗೆ 2019ರ ವಿಶ್ವಕಪ್ ಕೊನೆಯ ಏಕದಿನ ಪಂದ್ಯಾಟವಾಗಲಿದೆ. ಈ ಪಂದ್ಯಾಟದಲ್ಲಿ ದಕ್ಷಿಣ ಆಫ್ರಿಕಾಕ್ಕೆ ಕಪ್ ಗೆದ್ದು ಕೊಡುವ ಕನಸು ಕಾದಿರಿಕೊಂಡಿರುವ ಸ್ಟೇನ್, ಆ ಬಳಿಕ ಅಂತಾರಾಷ್ಟ್ರೀಯ ಏಕದಿನದಿಂದ ದೂರ ಉಳಿಯಲಿದ್ದಾರೆ.

ಸುಮಾರು ಮೂರು ವರ್ಷಗಳ ಕಾಲ ಗಾಯದಲ್ಲೇ ಬಳಲಿದ ಸ್ಟೇನ್ ಗೆ ಮುಂದಿನ ವರ್ಷ ಮೇ 30ಕ್ಕೆ ನಡೆಯಲಿರುವ ವಿಶ್ವಕಪ್ ಕ್ರಿಕೆಟ್ ನ ದಕ್ಷಿಣ ಆಫ್ರಿಕಾ-ಇಂಗ್ಲೆಂಡ್ ಮೊದಲ ಮುಖಾಮುಖಿಯ ವೇಳೆಗೆ ಸರಿಯಾಗಿ 36 ವರ್ಷ ಮೂರು ದಿನ ತುಂಬಲಿದೆ.

ಶ್ರೀಲಂಕಾ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಗಾಗಿ ಸ್ಟೇನ್ ದಕ್ಷಿಣ ಆಫ್ರಿಕಾ ತಂಡಕ್ಕೆ ಆಯ್ಕೆಗೊಂಡಿಲ್ಲ. ಆದರೆ ಡೇಲ್ ಅವರು ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ಜಿಂಬಾಬ್ವೆ, ಪಾಕಿಸ್ತಾನ ಮತ್ತು ಶ್ರೀಲಂಕಾ ವಿರುದ್ಧದ ಏಕದಿನ ಸರಣಿ ವೇಳೆ ಗಾಯದಿಂದ ಸುಧಾರಿಸಿಕೊಂಡು ತಂಡ ಸೇರಿಕೊಳ್ಳುವ ಯೋಜನೆಯಲ್ಲಿದ್ದಾರೆ.

ಈ ಬಗ್ಗೆ ಮುಂಬೈಯ ಪ್ರಚಾರ ಕಾರ್ಯಕ್ರಮವೊಂದರಲ್ಲಿ ಸ್ಟೇನ್ ಮಾತನಾಡಿ, 'ಮುಂಬರಲಿರುವ ವಿಶ್ವಕಪ್ ವೇಳೆಗೆ ಸುಧಾರಿಸಿಕೊಳ್ಳಲು ಬೇಕಾದ ಎಲ್ಲಾ ಪ್ರಯತ್ನ ಮಾಡಲಿದ್ದೇನೆ. ಆದರೆ ವಿಶ್ವಕಪ್ ಬಳಿಕ ಏಕದಿನದಲ್ಲಿ ನನ್ನನ್ನು ನಾನು ಕಾಣಿಸಿಕೊಳ್ಳದಿರಲು ಬಯಸಿದ್ದೇನೆ' ಎಂದಿದ್ದಾರೆ.

Story first published: Friday, July 27, 2018, 17:59 [IST]
Other articles published on Jul 27, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+