Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಅಮೆರಿಕಾ ಕನಸಿನ ಬೆನ್ನತ್ತಿ ದಕ್ಷಿಣ ಆಫ್ರಿಕಾ ಕ್ರಿಕೆಟ್ ತೊರೆದ ಡೇನ್ ಪೀಡ್ಟ್

Dane Piedt quits South Africa cricket to chase American dream

ಜೋಹಾನ್ಸ್‌ಬರ್ಗ್, ಮಾರ್ಚ್ 28: ದಕ್ಷಿಣ ಆಫ್ರಿಕಾದ ಆಫ್‌ ಸ್ಪಿನ್ನರ್ ಡೇನ್ ಪೀಡ್ಟ್ ತನ್ನ ಕ್ರಿಕೆಟ್‌ ವೃತ್ತಿಯನ್ನೇ ತೊರೆದು ಅಮೆರಿಕಾಕ್ಕೆ ಹೋಗಲಿದ್ದಾರೆ. ಮುಂದಿನ ಕೆಲ ತಿಂಗಳಲ್ಲಿ ಪೀಡ್ಟ್, ಸೌತ್ ಆಫ್ರಿಕಾ ತೊರೆದು ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾಕ್ಕೆ (ಯುಎಸ್‌ಎ)ಗೆ ಹೋಗಲಿದ್ದಾರೆ.

ದಕ್ಷಿಣ ಆಫ್ರಿಕಾ ಪರ 9 ಟೆಸ್ಟ್ ಪಂದ್ಯಗಳಲ್ಲಿ 26 ವಿಕೆಟ್‌ ಮುರಿದಿರುವ ಡೇನ್ ಪೀಡ್ಟ್, ಈ ಬೇಸಗೆಯಲ್ಲಿ ಉದ್ಘಾಟನೆಗೊಳ್ಳಬೇಕಿದ್ದ ಮೈನಲ್ ಲೀಗ್ ಟಿ20 ಟೂರ್ನಿಯ ಭಾಗವಾಗಿ ಮುಂದಿನ ಕೆಲ ತಿಂಗಳಿನಲ್ಲಿ ಅಮೆರಿಕಾಗೆ ಹೊರಡಲು ಸಜ್ಜಾಗಿದ್ದಾರೆ. ಅಮೆರಿಕಾದಲ್ಲಿ ವೃತ್ತಿ ಬದುಕು ಕಟ್ಟಿಕೊಳ್ಳುವ ಯೋಜನೆಯಲ್ಲಿ ಪೀಡ್ಟ್ ಇದ್ದಾರೆ.

'ಕಳೆದ ವರ್ಷ ಅಮೆರಿಕಾಕ್ಕೆ ಏಕದಿನ ಸ್ಥಾನಮಾನ ನೀಡಲಾಗಿದೆ. ಆದ್ದರಿಂದ ಯುಎಸ್‌ಎ ಏಕದಿನ ಕ್ರಿಕೆಟ್‌ನಲ್ಲಿ ಗಟ್ಟಿಗೊಳ್ಳಲಿದೆ ಎನ್ನುವುದರಲ್ಲಿ ಅನುಮಾನವಿಲ್ಲ,' ಎಂದು ಇಎಸ್‌ಪಿಎನ್ ಕ್ರಿಕ್‌ ಇನ್ಫೋ ಜೊತೆ ಮಾತನಾಡಿರುವ ಪೀಡ್ಟ್ ಹೇಳಿಕೊಂಡಿದ್ದಾರೆ.

ಅಮೆರಿಕಾ ಜೊತೆಗಿನ ಒಪ್ಪಂದಕ್ಕೆ ನಾನು ಈ ಬೆಳಗ್ಗೆ ಸಹಿ ಹಾಕಿದ್ದೇನೆ. ಆದರೆ ಅಮೆರಿಕಾಕ್ಕೆ ಹೋಗಲು ಯಾವಾಗ ಸಾಧ್ಯವಾಗುತ್ತದೆ ಎಂಬುದು ಗೊತ್ತಿಲ್ಲ. ಅದೊಂದು ಅಪೂರ್ವ ಅವಕಾಶವಾಗಿರುವುದರಿಂದ ಇದನ್ನು ಬಿಟ್ಟುಕೊಡಲು ಮನಸ್ಸಾಗಲಿಲ್ಲ,' ಎಂದು ಪೀಡ್ಟ್ ವಿವರಿಸಿದ್ದಾರೆ.

Story first published: Saturday, March 28, 2020, 13:08 [IST]
Other articles published on Mar 28, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+