For Quick Alerts
ALLOW NOTIFICATIONS  
For Daily Alerts
 

ಟಿ20 ವಿಶ್ವಕಪ್‌ಗೂ ಪಾಕಿಸ್ತಾನ‌ ತಂಡದಿಂದ ಮುನ್ನ ಅಪಾಯಕಾರಿ ವೇಗದ ಬೌಲರ್‌ ಔಟ್!‌

ಮೇ 22 ಬುಧವಾರ, 2024ರ ಐಸಿಸಿ ಟಿ20 ವಿಶ್ವಕಪ್‌ಗೂ ಮುನ್ನ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮಹತ್ವದ ನಿರ್ಧಾರ ಕೈಗೊಂಡಿದೆ. ಹೆಡಿಂಗ್ಲಿಯಲ್ಲಿ ಬುಧವಾರ ಆರಂಭವಾಗಲಿರುವ ಇಂಗ್ಲೆಂಡ್ ವಿರುದ್ಧದ ನಾಲ್ಕು ಪಂದ್ಯಗಳ ಟಿ20 ಸರಣಿಗೆ ಮುನ್ನ ಪಾಕಿಸ್ತಾನಕ್ರಿಕೆಟ್‌ ಮಂಡಳಿ ಈ ನಿರ್ಧಾರವನ್ನು ಘೋಷಣೆ ಮಾಡಿದೆ.

ನಾಲ್ಕು ಪಂದ್ಯಗಳ ಸರಣಿಗಾಗಿ ಐಪಿಎಲ್‌ನ ಭಾಗವಾಗಿದ್ದ ಇಂಗ್ಲೆಂಡ್ ಆಟಗಾರರು ಭಾರತದಿಂದ ತೆರಳಿದ್ದಾರೆ. ಈ ನಡುವೆ ಪಾಕಿಸ್ತಾನದ ಅಪಾಯಕಾರಿ ಬಲಗೈ ವೇಗದ ಬೌಲರ್ ಹಸನ್ ಅಲಿ ಅವರನ್ನು ತಂಡದಿಂದ ಬಿಡುಗಡೆ ಮಾಡಿದೆ.

Dangerous fast bowler out of Pakistan team

ಈ ನಿರ್ಧಾರ ಹಸನ್ ಅಲಿ ಅಭಿಮಾನಿಗಳಿಗೆ ದೊಡ್ಡ ಆಘಾತ ತಂದಿದೆ. ಮತ್ತೊಂದೆಡೆ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಿಂದ ಹಸನ್ ಅಲಿ ಹೊರ ಉಳಿದಿದ್ದಾರೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ, 'ಹಸನ್ ಅಲಿ ಕೌಂಟಿ ಕ್ರಿಕೆಟ್‌ಗೆ ತಮ್ಮ ಬದ್ಧತೆಯನ್ನು ಪೂರೈಸಲು ತಂಡದಿಂದ ಅವರನ್ನು ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದೆ.

ವೇಗಿ ಹ್ಯಾರಿಸ್ ರೌಫ್ ಅವರು ಗಾಯಕ್ಕೆ ತುತ್ತಾದ ಕಾರಣ ಅವರ ಬದಲಿಗೆ ತಂಡಕ್ಕೆ ಬಹುದಿನಗಳ ನಂತರ ಹಸನ್ ಆಯ್ಕೆಯಾಗಿದ್ದರು. ಇದೀಗ ಗಾಯದ ಸಮಸ್ಯೆಯ ನಂತರ ರೌಫ್ ಆಡಲು ಫಿಟ್ ಆಗಿದ್ದಾರೆ. ಹಸನ್ ಈಗ ವಾರ್ವಿಕ್‌ಷೈರ್‌ಗಾಗಿ ಕೌಂಟಿ ಕ್ರಿಕೆಟ್ ಬದ್ಧತೆಗಳನ್ನು ಪೂರೈಸಲು ಹೋಗಲಿದ್ದಾರೆ ಎಂದು ಪಾಕ್‌ ಕ್ರಿಕೆಟ್‌ ಹೇಳಿದೆ.

ಟಿ20 ಕ್ರಿಕೆಟ್‌ ಮಾದರಿಯಲ್ಲಿ ಹಸನ್‌ ಆಲಿ 51 ಪಂದ್ಯಗಳಿಂದ 60 ವಿಕೆಟ್ ಪಡೆದಿದ್ದಾರೆ. ಐರ್ಲೆಂಡ್ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಹಸನ್ ದುಬಾರಿ ಬೌಲಿಂಗ್‌ ಪ್ರದರ್ಶನ ನೀಡಿದ್ದರು. ಮೂರು ಓವರ್‌ಗಳಲ್ಲಿ 42 ರನ್‌ ಬಿಟ್ಟು ಕೊಟ್ಟು ಯಾವುದೇ ವಿಕೆಟ್ ಪಡೆಯಲು ಸಾಧ್ಯವಾಗಿರಲಿಲ್ಲ.

Dangerous fast bowler out of Pakistan team

2009ರಲ್ಲಿ ಟಿ20 ವಿಶ್ವಕಪ್‌ ಗೆದ್ದ ಪಾಕಿಸ್ತಾನ, ಜೂನ್‌ 1ರಿಂದ ಅಮೆರಿಕ ಮತ್ತು ವೆಸ್ಟ್‌ ಇಂಡೀಸ್‌ನಲ್ಲಿ ನಡೆಯಲಿರುವ ಮೆಗಾ ಟೂರ್ನಿಗೆ ತಂಡವನ್ನು ಪ್ರಕಟಿಸದ ಏಕೈಕ ತಂಡವಾಗಿದೆ.

ಟೀಮ್‌ ಇಂಡಿಯಾ, ಆತಿಥೇಯ ಅಮೆರಿಕಾ, ಐರ್ಲೆಂಡ್ ಮತ್ತು ಕೆನಡಾ ಜೊತೆಗೆ ಪಾಕಿಸ್ತಾನವು ವಿಶ್ವಕಪ್‌ನಲ್ಲಿ "ಎ" ಗುಂಪಿನಲ್ಲಿದೆ. ಇಂಗ್ಲೆಂಡ್ ವಿರುದ್ಧದ ಸರಣಿಯಿಂದ ಹಸನ್ ಅಲಿ ಕೈ ಬಿಟ್ಟಿರುವ ಪಾಕ್‌ ಟಿ20 ವಿಶ್ವಕಪ್ ಎತ್ತಿ ಹಿಡಿಯಲು ಹೊಸ ಯೋಜನೆ ಹಾಕಿಕೊಂಡಂತಿದೆ.

Story first published: Wednesday, May 22, 2024, 20:45 [IST]
Other articles published on May 22, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+