ಮ್ಯಾಚ್ ಫಿಕ್ಸಿಂಗ್ ಆರೋಪ ಒಪ್ಪಿಕೊಂಡ ಪಾಕಿಸ್ತಾನಿ ಸ್ಪಿನ್ನರ್

ಲಂಡನ್, ಅಕ್ಟೋಬರ್ 18: 2012ರಲ್ಲಿ ಇಂಗ್ಲೆಂಡ್ ಕೌಂಟಿ ಕ್ರಿಕೆಟ್ ನಲ್ಲಿ ನಡೆದಿದೆ ಎನ್ನಲಾದ ಮ್ಯಾಚ್ ಫಿಕ್ಸಿಂಗ್ ಪ್ರಕರಣದಲ್ಲಿ ಭಾಗಿಯಾಗಿದ್ದೆ ಎಂದು ಪಾಕಿಸ್ತಾನದ ಮಾಜಿ ಲೆಗ್ ಸ್ಪಿನ್ನರ್ ದನೇಶ್ ಕನೇರಿಯಾ ಅವರು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ ಎಂದು ಬ್ರಿಟನ್ನಿನ 'ಡೈಲಿ ಮೈಲ್' ವರದಿ ಮಾಡಿದೆ.
ಲೆಗ್ ಸ್ಪಿನ್ನರ್ ಕನೇರಿಯಾ ಅವರು ಕಳೆದ ಆರು ವರ್ಷಗಳಿಂದ ತಮ್ಮ ಮೇಲಿನ ಫಿಕ್ಸಿಂಗ್ ಆರೋಪವನ್ನು ನಿರಾಕರಿಸುತ್ತಾ ಬಂದಿದ್ದರು. ಆದರೆ, ಈ ಪ್ರಕರಣದ ಮತ್ತೊಬ್ಬ ಆರೋಪಿ ಸಹ ಆಟಗಾರ ಎಸೆಕ್ಸ್ ತಂಡದಲ್ಲಿ ಆಡಿದ್ದ ಮೆರ್ವಿನ್ ವೆಸ್ಟ್‌ಫೀಲ್ಡ್ ಕೂಡ 2 ತಿಂಗಳು ಜೈಲು ಶಿಕ್ಷೆಗೆ ಗುರಿಯಾಗಿದ್ದರು.
ಮ್ಯಾಚ್ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿ ಇಂಗ್ಲೆಂಡ್ ಹಾಗೂ ವೇಲ್ಸ್ ಬೋರ್ಡ್ ಮುಖ್ಯಸ್ಥರು ಕನೇರಿಯಾಗೆ ವಿಶ್ವದ್ಯಾಂತ ಯಾವುದೇ ಕ್ರಿಕೆಟ್ ಟೂರ್ನಿಯಲ್ಲಿ ಭಾಗವಹಿಸದಂತೆ ಆಜೀವ ನಿಷೇಧ ವಿಧಿಸಿದ್ದರು.
"ಇಂಗ್ಲೆಂಡ್ ಹಾಗೂ ವೇಲ್ಸ್ ಕ್ರಿಕೆಟ್ ಮಂಡಳಿಯು ತನ್ನ ಮೇಲೆ ವಿಧಿಸಿರುವ ಎರಡು ಪ್ರಕರಣದಲ್ಲಿ ನಾನು ತಪ್ಪಿತಸ್ಥನಾಗಿದ್ದೇನೆ. ನನ್ನ ಎಸ್ಸೆಕ್ಸ್ ಕ್ಲಬ್‌ನ ಸಹ ಆಟಗಾರ ವೆಸ್ಟ್‌ಫೀಲ್ಡ್, ಕ್ರಿಕೆಟ್ ಕ್ಲಬ್‌ನ ಅಭಿಮಾನಿಗಳು ಹಾಗೂ ಪಾಕಿಸ್ತಾನದ ಅಭಿಮಾನಿಗಳ ಬಳಿ ಕ್ಷಮೆಯಾಚಿಸುವೆ'' ಎಂದು ಕನೇರಿಯಾ ಅಲ್ ಜಝೀರಾ ಟಿವಿಗೆ ನೀಡಿದ್ದ ಸಂದರ್ಶನವನ್ನು ಉಲ್ಲೇಖಿಸಿ 'ಡೈಲಿ ಮೈಲ್' ವರದಿ ಮಾಡಿದೆ.
37ರ ಹರೆಯದ ಕನೇರಿಯಾ ಪಾಕಿಸ್ತಾನದ ಪರ ಟೆಸ್ಟ್ ಕ್ರಿಕೆಟ್‌ನಲ್ಲಿ 261 ವಿಕೆಟ್‌ಗಳನ್ನು ಪಡೆದ ಸಾಧನೆ ಮಾಡಿದ್ದರು. ಈಗಲೂ ಪಾಕ್ ತಂಡದ ಮುಂಚೂಣಿ ಸ್ಪಿನ್ನರ್ ಆಗಿ ಗುರುತಿಸಿಕೊಂಡಿದ್ದಾರೆ. 2010ರಲ್ಲಿ ಟ್ರೆಂಟ್‌ಬ್ರಿಡ್ಜ್‌ನಲ್ಲಿ ಪಾಕ್ ಪರ ಕೊನೆಯ ಟೆಸ್ಟ್ ಪಂದ್ಯ ಆಡಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications