IPL 2024: ಡರ್ನಾ ಮನಾ ಹೈ: ತಮ್ಮದೇ ಬಿಂಬವನ್ನು ನೋಡಿ ಬೆಚ್ಚಿಬಿದ್ದ ಇಶಾನ್! ಇಲ್ಲಿದೆ ಕಂಪ್ಲೀಟ್ ವಿಡಿಯೋ
ಇಶಾನ್ ಕಿಶನ್ ಮಾನಸಿಕ ಆಯಾಸ ಅನುಭವಿಸುತ್ತಿರುವುದಾಗಿ ಹೇಳಿದ ಬೆನ್ನಲ್ಲೆ, ಸ್ಟಾರ್ ವಿಕೆಟ್ ಕೀಪರ್ ಬ್ಯಾಟರ್ ಕ್ರಿಕೆಟ್‌ನಿಂದ ಹಿಂದೆ ಸರಿದರು. ಈ ಮೂಲಕವೇ ಅವರು ಚರ್ಚೆಯ ವಿಷಯವಾಗಿದ್ದಾರೆ. ದಕ್ಷಿಣ ಆಫ್ರಿಕಾ ಪ್ರವಾಸದ ವೇಳೆ ಇಶಾನ್ ಟೀಂ ಇಂಡಿಯಾದಿಂದ ತಮ್ಮ ಹೆಸರನ್ನು ಹಿಂಪಡೆದಿದ್ದರು. ಇಶಾನ್ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯಲ್ಲಿ ಕೊನೆಯ ಪಂದ್ಯವನ್ನು ಆಡಿದ್ದರು. ಇದೇ ಕಾರಣದಿಂದಲೇ ಅವರು ಮೈದಾನಕ್ಕೆ ಮರಳಲು ಸಾಧ್ಯವೇ ಆಗಿರಲಿಲ್ಲ. ಈಗ ಐಪಿಎಲ್‌ನಲ್ಲಿ ಮೈದಾನಕ್ಕೆ ಇಳಿಯಲು ಭರ್ಜರಿ ತಯಾರಿ ನಡೆಸಿದ್ದಾರೆ. ಆದರೆ ಇವರಲ್ಲಿನ ಭಯ ಇನ್ನೂ ಮಾಯವಾಗಿಲ್ಲ ಎಂಬ ಬಗ್ಗೆ ವಿಡಿಯೋ ವೈರಲ್ ಆಗಿದೆ.
ಮುಂಬೈ ಇಂಡಿಯನ್ಸ್ ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊವನ್ನು ಬಿಡುಗಡೆ ಮಾಡಿದೆ. ಈ ವಿಡಿಯೋದ ಆರಂಭದಲ್ಲೇ ನಾನು ಎದಕ್ಕೂ ಕೇರ್ ಮಾಡಿಕೊಳ್ಳದ ವ್ಯಕ್ತಿ ಎಂದು ತಿಳಿಸಿದ ಇಶಾನ್, ಕಾನ್ಫಿಡೆನ್ಸ್‌ನಿಂದಲೇ ರೂಮ್ ಪ್ರವೇಶ ಮಾಡುತ್ತಾರೆ. ಆದರೆ ಎಲ್ಲವೂ ಅಂದುಕೊಂಡಂತೆ ಇತ್ತು ಆದರೆ, ಕೆಲವೇ ಕ್ಷಣಗಳಲ್ಲಿ ಚಿತ್ರಣವೇ ಬದಲಾಗಿದೆ.

ವಿಡಿಯೋದಲ್ಲಿ ಇರುವುದು ಏನು?
ವಿಡಿಯೋದಲ್ಲಿ ನೋಡುವಂತೆ ಇಶಾನ್ ಕಿಶನ್ ಭಯಭೀತರಾಗಿದ್ದಾರೆ. ಭಯದ ಕಾರಣ, ಇಶಾನ್ ಕಿಶನ್ ರೂಮ್‌ನಿಂದ ಹೋರ ಹೋಗಿದ್ದಾರೆ. ಇಶಾನ್‌ಗೆ ಈಗಾಗಲೇ 'ದರ್ನಾ ಮನ ಹೈ' ಎಂಬ ಎಚ್ಚರಿಕೆ ಬಂದಿದೆ.
ಇಶಾನ್ ಕಿಶನ್ ಹೊಟೇಲ್ ರೂಮಿಗೆ ಹೋಗುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಕೋಣೆಯ ಗೇಟ್ ತಲುಪಿದ ತಕ್ಷಣ, "ಡರ್ನಾ ಮನಾ ಹೈ!" ಎಂದು ಬರೆದಿರುವ ಸ್ಟಿಕ್ಕರ್ ಅನ್ನು ಅವರು ನೋಡುತ್ತಾರೆ. ಇದನ್ನು ನೋಡಿ ಬೆಚ್ಚಿಬೀಳದೆ ಅವರು ಕೋಣೆಗೆ ಹೋಗುತ್ತಾರೆ. ಇದರ ನಂತರ, ಇಶಾನ್ ಕನ್ನಡಿಯ ಮುಂದೆ ನಿಂತು ಬಾಟಲಿಯನ್ನು ತಿರುಗಿಸಲು ಪ್ರಾರಂಭಿಸುತ್ತಾರೆ.
ಮೊದಮೊದಲು ಕನ್ನಡಿಯಲ್ಲಿ ಇಶಾನ್ ನೋಡುವ ಹಾಗೆ ನೋಡುತ್ತಾರೆ. ಆದರೆ ಆಮೇಲೆ ಇಶಾನ್ ಕನ್ನಡಿಯಲ್ಲಿ ಬೇರೆಯದೇ ತಮ್ಮ ಬಿಂಬವನ್ನು ನೋಡುತ್ತಾರೆ. ಇಶಾನ್ ತನ್ನ ಪ್ರತಿಬಿಂಬವನ್ನು ಕನ್ನಡಿಯಲ್ಲಿ ನೋಡುತ್ತಾರೆ. ಅವನು ಮಾಡದ ಕೆಲಸಗಳನ್ನು ಬಿಂಬಿಲಿನಲ್ಲಿ ಮಾಡಿದ್ದನ್ನು ನೋಡುತ್ತಾರೆ. ಇದನ್ನು ನೋಡಿದ ಇಶಾನ್ ತುಂಬಾ ಹೆದರಿ ಹೋಟೆಲ್ ರೂಂನಿಂದ ಓಡಿ ಹೋಗುತ್ತಾರೆ. ಇದು ತಮಾಷೆಯ ವೀಡಿಯೊ ಆಗಿದೆ. ಮುಂಬೈ ಈ ರೀತಿ ಇಶಾನ್ ಅವರನ್ನು ತಂಡಕ್ಕೆ ಬರ ಮಾಡಿಕೊಂಡಿದೆ. ವೀಡಿಯೋಗೆ ಶೀರ್ಷಿಕೆ ನೀಡಿ, "ಹೋಟೆಲ್‌ಗೆ ತಂಡ ಬಂದ ತಕ್ಷಣ ಬಾಟಲಿಯನ್ನು ಪಲ್ಟಿ ಮಾಡಿದ ಪರಿಣಾಮ ನೋಡಿ" ಎಂದು ಬರೆಯಲಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications