ಡ್ಯಾರಿಲ್ ಮಿಚಲ್, ಗ್ಲೇನ್ ಫಿಲಿಪ್ಸ್ ಶತಕ: ಭಾರತಕ್ಕೆ 338 ರನ್ ಗುರಿ ನೀಡಿದ ನ್ಯೂಜಿಲೆಂಡ್
ಇಂದೋರ್: ಭರವಸೆಯ ಬ್ಯಾಟರ್ ಡ್ಯಾರಿಲ್ ಮಿಚಲ್ (137 ರನ್) ಹಾಗೂ ಗ್ಲೇನ್ ಫಿಲಿಪ್ಸ್ (106 ರನ್) ಅವರು ಬಾರಿಸಿದ ಭರ್ಜರಿ ಶತಕದ ನೆರವಿನಿಂದ ನ್ಯೂಜಿಲೆಂಡ್ ಮೂರನೇ ಏಕದಿನ ಪಂದ್ಯದಲ್ಲಿ 338 ರನ್‌ಗಳ ಗುರಿಯನ್ನು ಟೀಮ್ ಇಂಡಿಯಾಗೆ ನೀಡಿದೆ.
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಡೆವೊನ್ ಕಾನ್ವೇ ಮತ್ತು ಹೆನ್ರಿ ನಿಕೋಲ್ಸ್ ಜೋಡಿ ಉತ್ತಮ ಆರಂಭವನ್ನು ನೀಡುವಲ್ಲಿ ವಿಫಲವಾಯಿತು. ಹೆನ್ರಿ ನಿಕೋಲ್ಸ್ ಅವರಿಗೆ ಅರ್ಷದೀಪ್ ಸಿಂಗ್ ಖೆಡ್ಡಾ ತೋಡಿದರೆ, ಡೆವೊನ್ ಕಾನ್ವೇ ಅವರಿಗೆ ಹರ್ಷಿತ್ ರಾಣಾ ಪೆವಿಲಿಯನ್ ಸೇರಿದರು. 1.1 ಓವರ್‌ಗಳಲ್ಲಿ ನ್ಯೂಜಿಲೆಂಡ್ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಈ ಅವಧಿಯಲ್ಲಿ ವಿಲ್ ಯಂಗ್ ಹಾಗೂ ಡ್ಯಾರಿಲ್ ಮಿಚಲ್ ಜೋಡಿ 66 ಎಸೆತಗಳಲ್ಲಿ 53 ರನ್ ಸೇರಿಸಿತು. ಈ ಅವಧಿಯಲ್ಲಿ ವಿಲ್ ಯಂಗ್ 30 ರನ್ ಬಾರಿಸಿದ್ದಾಗ ಹರ್ಷಿತ್ ರಾಣಾಗೆ ಬಲಿಯಾದರು. ಈ ಮೂಲಕ ಹರ್ಷಿತ್ ರಾಣಾ, ವಿಲ್ ಯಂಗ್ ಅವರಿಗೆ ಮೂರನೇ ಬಾರಿ ಸರಣಿಯಲ್ಲಿ ಪೆವಿಲಿಯನ್‌ಗೆ ಕಳಿಸಿದರು.

58 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ಡ್ಯಾರಿಲ್ ಮಿಚಲ್ ಹಾಗೂ ಗ್ಲೇನ್ ಫಿಲಿಪ್ಸ್ ಜೋಡಿ ತಂಡಕ್ಕೆ ಆಧಾರವಾಯಿತು. ಈ ಜೋಡಿ ತಂಡವನ್ನು ಸಂಕಷ್ಟದಿಂದ ಪಾರು ಮಾಡಿತು. ಈ ಜೋಡಿಯನ್ನು ಕಟ್ಟಿ ಹಾಕುವಲ್ಲಿ ಟೀಮ್ ಇಂಡಿಯಾದ ಬೌಲರ್‌ಗಳು ವಿಫಲರಾದರು. ಮಿಡ್ಲ್ ಓವರ್‌ಗಳಲ್ಲಿ ವಿಕೆಟ್ ಬೀಳದಂತೆ ಕಾಯ್ದುಕೊಂಡ ಜೋಡಿ ಅಬ್ಬರಿಸಿತು. ಆರಂಭದಲ್ಲಿ ತಾಳ್ಮೆಯಿಂದ ಬ್ಯಾಟ್ ಮಾಡಿದ ಮಿಚಲ್ ಹಾಗೂ ಫಿಲಿಪ್ಸ್ ಜೋಡಿ ಬಳಿಕ ರನ್ ವೇಗಕ್ಕೆ ಚುರುಕು ಮುಟ್ಟಿಸಿತು.
3ನೇ ವಿಕೆಟ್‌ಗೆ 219 ರನ್ ಜೊತೆಯಾಟ
3ನೇ ವಿಕೆಟ್‌ಗೆ ಡ್ಯಾರಿಲ್ ಮಿಚಲ್ ಹಾಗೂ ಗ್ಲೇನ್ ಫಿಲಿಪ್ಸ್ ಜೋಡಿ 188 ಎಸೆತಗಳಲ್ಲಿ 219 ರನ್ ಸೇರಿಸಿ ತಂಡ ಸ್ಪರ್ಧಾತ್ಮಕ ಮೊತ್ತ ಕಲೆ ಹಾಕುವಲ್ಲಿ ನೆರವಾದರು. ಈ ವೇಳೆ ಗ್ಲೇನ್ ಫಿಲಿಪ್ಸ್ 88 ಎಸೆತಗಳಲ್ಲಿ 9 ಬೌಂಡರಿ, 3 ಸಿಕ್ಸರ್ ಸಹಾಯದಿಂದ 106 ರನ್ ಸಿಡಿಸಿತು.
ಮಿಚಲ್ ಶತಕದ ಅಬ್ಬರ
ನ್ಯೂಜಿಲೆಂಡ್ ತಂಡದ ಸ್ಟಾರ್ ಮಧ್ಯಮ ಕ್ರಮಾಂಕದ ಆಟಗಾರ ಡ್ಯಾರಿಲ್ ಮಿಚೆಲ್ ಸೊಗಸಾದ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಎರಡನೇ ಏಕದಿನ ಪಂದ್ಯದಲ್ಲಿ ಆಡಿದ ರೀತಿ ಬ್ಯಾಟ್ ಮಾಡಿದ ಡ್ಯಾರಿಲ್ ಭಾರತದ ಬೌಲರ್‌ಗಳನ್ನು ಕಾಡಿದರು. ಇವರು 131 ಎಸೆತಗಳಲ್ಲಿ 15 ಬೌಂಡರಿ, 3 ಸಿಕ್ಸರ್ ನೆರವಿನಿಂದ 137 ರನ್ ಸಿಡಿಸಿ ತಂಡಕ್ಕೆ ಆಧಾರವಾದರು.

ನಾಯಕ ಮಿಚಲ್ ಬ್ರಾಸ್‌ವೆಲ್ 1 ಬೌಂಡರಿ, 3 ಸಿಕ್ಸರ್ ನೆರವಿನಿಂದ 28 ರನ್ ಸಿಡಿಸಿದರು. ಅಂತಿಮವಾಗಿ ನ್ಯೂಜಿಲೆಂಡ್ 50 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 337 ರನ್ ಸೇರಿಸಿತು. ಭಾರತದ ಪರ ವೇಗದ ಬೌಲರ್ ಅರ್ಷದೀಪ್ ಸಿಂಗ್, ಹರ್ಷಿತ್ ರಾಣಾ ತಲಾ ಮೂರು ವಿಕೆಟ್ ಪಡೆದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications