For Quick Alerts
ALLOW NOTIFICATIONS  
For Daily Alerts
 

ICC ODI Rankings: ಮಿಚಲ್‌ಗೆ ಅಗ್ರ ಸ್ಥಾನ, ವಿರಾಟ್‌ಗೆ 2ನೇ ಸ್ಥಾನ: ಕನ್ನಡಿಗ ರಾಹುಲ್‌ಗೆ ಬಡ್ತಿ

ನವದೆಹಲಿ: ಭಾರತದ ವಿರುದ್ಧದ ಏಕದಿನ ಸರಣಿಯಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ್ದ ಡ್ಯಾರಿಲ್‌ ಮಿಚೆಲ್‌ ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ (ಐಸಿಸಿ) ಹೊರಡಿಸಿರುವ ನೂತನ ಶ್ರೇಯಾಂಕದಲ್ಲಿ ನಂಬರ್ 1 ಸ್ಥಾನವನ್ನು ಪಡೆದಿದ್ದಾರೆ. ಈ ಮೂಲಕ ವಿರಾಟ್‌ ಕೊಹ್ಲಿ ಏಕದಿನ ಫಾರ್ಮೆಟ್‌ನಲ್ಲಿ ಎರಡನೇ ಸ್ಥಾನಕ್ಕೆ ಕುಸಿತ ಕಂಡಿದ್ದಾರೆ.

ಭಾರತದ ವಿರುದ್ಧದ ಮೂರು ಏಕದಿನ ಪಂದ್ಯಗಳ ಸರಣಿಯಲ್ಲಿ ಡ್ಯಾರಿಲ್ ಮಿಚಲ್‌ ಅಬ್ಬರದ ಬ್ಯಾಟಿಂಗ್ ನಡೆಸಿದ್ದರು. ಅಲ್ಲದೆ ಕೊನೆಯ ಎರಡು ಏಕದಿನ ಪಂದ್ಯಗಳಲ್ಲಿ ಬ್ಯಾಕ್ ಟು ಬ್ಯಾಕ್ ಶತಕ ಬಾರಿಸಿ ಅಬ್ಬರಿಸಿದ್ದರು. ಇವರು ಆಡಿದ ಮೂರು ಪಂದ್ಯಗಳಲ್ಲಿ 176ರ ಸರಾಸರಿಯಲ್ಲಿ 352 ರನ್‌ ಸಿಡಿಸಿದ್ದಾರೆ. ಡ್ಯಾರಿಲ್ ಮಿಚಲ್ ಅವರ ಅಮೋಘ ಬ್ಯಾಟಿಂಗ್ ಪ್ರದರ್ಶನದ ಬಲದಿಂದ ಈಗ ಇವರು ಏಕದಿನ ಶ್ರೇಯಾಂಕದಲ್ಲಿ ಏರಿಕೆ ಸಹ ಕಂಡಿದ್ದಾರೆ. ಡ್ಯಾರಿಲ್ ಮಿಚಲ್‌ 845 ರೇಟಿಂಗ್ ಪಾಯಿಂಟ್‌ಗಳೊಂದಿಗೆ ನಂಬರ್ 1 ಸ್ಥಾನವನ್ನು ಅಲಂಕರಿಸಿದ್ದಾರೆ. ಡ್ಯಾರಿಲ್ ಮಿಚೆಲ್ ತಮ್ಮ ಏಕದಿನ ವೃತ್ತಿಜೀವನದ ಅತ್ಯುತ್ತಮ ರೇಟಿಂಗ್ ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Daryl Mitchell Tops ICC ODI Rankings Virat Kohli Slips to Second After NZ Series Performance

ಕಳೆದ ವಾರ ಬಿಡುಗಡೆಯಾಗಿದ್ದ ಶ್ರೇಯಾಂಕದಲ್ಲಿ ಡ್ಯಾರಿಲ್ ಮಿಚಲ್‌ ಎರಡನೇ ಸ್ಥಾನದಲ್ಲಿದ್ದರು. ಅಲ್ಲದೆ ಅಗ್ರ ಸ್ಥಾನದಲ್ಲಿದ್ದ ವಿರಾಟ್ ಅವರಿಗಿಂತ ಕೇವಲ 1 ಅಂಕ ಹಿನ್ನಡೆ ಅನುಭವಿಸಿದ್ದರು. ಆದರೆ ಭಾರತದಲ್ಲಿ ಅವರು ನೀಡಿರುವ ಭರ್ಜರಿ ಪ್ರದರ್ಶನದ ಬಲದಿಂದ ಅವರ ಶ್ರೇಯಾಂಕದಲ್ಲೂ ಏರಿಕೆ ಆಗಿದೆ. ಇವರು ಕೊಹ್ಲಿಯನ್ನು ಹಿಂದಿಕ್ಕಿದ್ದಲ್ಲದೆ ಗಮನಾರ್ಹ ಮುನ್ನಡೆಯನ್ನು ಗಳಿಸಿದ್ದಾರೆ.

ಮೂರನೇ ಏಕದಿನ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ್ದ ವಿರಾಟ್‌ ಕೊಹ್ಲಿ ಶತಕ ಬಾರಿಸಿ ಮಿಂಚಿದ್ದರು. ಇವರ ಈ ಶತಕವು ಅವರನ್ನ ನಂಬರ್ 1 ಸ್ಥಾನ ಉಳಿಸಿಕೊಳ್ಳಲು ಸಹಾಯ ಮಾಡಲಿಲ್ಲ. ಕಿವೀಸ್‌ ವಿರುದ್ಧದ ಏಕದಿನ ಸರಣಿಯಲ್ಲಿ ವಿರಾಟ್‌ ಗರಿಷ್ಠ ರನ್‌ ಸಾಧಕರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಇವರು 3 ಪಂದ್ಯಗಳಲ್ಲಿ 240 ರನ್‌ ಸಿಡಿಸಿದ್ದಾರೆ. ಇನ್ನು ಮೂರನೇ ಸ್ಥಾನದಲ್ಲಿದ್ದ ರೋಹಿತ್ ಶರ್ಮಾ ಅವರ ಶ್ರೇಯಾಂಕದಲ್ಲೂ ಕುಸಿತವಾಗಿದ್ದು, ಇವರು ಈಗ ನಾಲ್ಕನೇ ಸ್ಥಾನದಲ್ಲಿದ್ದಾರೆ.

Daryl Mitchell Tops ICC ODI Rankings Virat Kohli Slips to Second After NZ Series Performance

ಟೀಮ್ ಇಂಡಿಯಾದ ನಾಯಕ ಶುಭಮನ್‌ ಗಿಲ್‌ ಐದನೇ ಸ್ಥಾನವನ್ನು ಹೊಂದಿದ್ದಾರೆ. ರಾಜ್‌ಕೋಟ್‌ನಲ್ಲಿ ನಡೆದಿದ್ದ ಎರಡನೇ ಏಕದಿನ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿ ಶತಕ ಬಾರಿಸಿದ್ದ ಕನ್ನಡಿಗ ಕೆಎಲ್ ರಾಹುಲ್ 10ನೇ ಶ್ರೇಯಾಂಕವನ್ನು ಹೊಂದಿದ್ದಾರೆ. ಉಪನಾಯಕ ಶ್ರೇಯಸ್‌ ಅಯ್ಯರ್‌ ಒಂದು ಸ್ಥಾನ ಕುಸಿತ ಕಂಡಿದ್ದು, 11ನೇ ಸ್ಥಾನದಲ್ಲಿದ್ದಾರೆ.

4 ಸ್ಥಾನ ಕುಸಿತ ಕಂಡ ಕುಲ್‌ದೀಪ್‌

ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದ ಕುಲ್‌ದೀಪ್ ಯಾದವ್ ಅವರು ಐಸಿಸಿ ಬೌಲರ್‌ಗಳ ಶ್ರೇಯಾಂಕದಲ್ಲಿ 4 ಸ್ಥಾನ ಕುಸಿತ ಕಂಡಿದ್ದಾರೆ. ವೇಗದ ಬೌಲರ್‌ ಮೊಹಮ್ಮದ್‌ ಸಿರಾಜ್‌ ಒಂದು ಸ್ಥಾನ ಏರಿಕೆ ಕಂಡಿದ್ದು, 14ನೇ ಸ್ಥಾನ ಪಡೆದಿದ್ದಾರೆ.

ಹರ್ಷಿತ್ ರಾಣಾ 27 ಸ್ಥಾನ ಜಿಗಿತ

ವೇಗದ ಬೌಲರ್‌ ಹರ್ಷಿತ್ ರಾಣಾ ನ್ಯೂಜಿಲೆಂಡ್ ವಿರುದ್ಧ ಏಕದಿನ ಸರಣಿಯಲ್ಲಿಉತ್ತಮ ಪ್ರದರ್ಶನ ನೀಡಿದ್ದರು. ಅಲ್ಲದೆ 6 ವಿಕೆಟ್‌ ಪಡೆದು ಅಬ್ಬರಿಸಿದ್ದರು. ಇವರ ಸ್ಥಿರ ಪ್ರದರ್ಶನದ ಬಲದಿಂದ ಇವರು 27 ಸ್ಥಾನ ಏರಿಕೆ ಕಂಡಿದ್ದು, ಸದ್ಯ 50ನೇ ಶ್ರೇಯಾಂಕದಲ್ಲಿದ್ದಾರೆ. ಭರವಸೆಯ ಬೌಲರ್‌ ಅರ್ಷದೀಪ್ ಸಿಂಗ್ ಟೀಮ್ ಇಂಡಿಯಾ ಪರ ಈ ಸರಣಿಯಲ್ಲಿ ಒಂದು ಪಂದ್ಯವನ್ನು ಆಡಿದ್ದು ಈ ಪಂದ್ಯದಲ್ಲಿ ಇವರು 3 ವಿಕೆಟ್‌ ಕಬಳಿಸಿದ್ದರು. ಇದರ ಪರಿಣಾಮ ಇವರು 15 ಸ್ಥಾನ ಏರಿಕೆ ಕಂಡಿದ್ದು 56ನೇ ಸ್ಥಾನದಲ್ಲಿದ್ದಾರೆ.

Story first published: Wednesday, January 21, 2026, 14:34 [IST]
Other articles published on Jan 21, 2026
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+