For Quick Alerts
ALLOW NOTIFICATIONS  
For Daily Alerts
 

David Malan: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಡೇವಿಡ್ ಮಲಾನ್ ನಿವೃತ್ತಿ

ಸ್ಪೋಟಕ ಬ್ಯಾಟಿಂಗ್‌ನಿಂದಲೇ ಹೆಸರುವಾಸಿಯಾಗಿದ್ದ ಇಂಗ್ಲೆಂಡ್ ತಂಡದ ಡೇವಿಡ್ ಮಲಾನ್‌ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. 37 ವರ್ಷದ ಮಲಾನ್‌ ಭಾರತದಲ್ಲಿ ನಡೆದಿದ್ದ ಏಕದಿನ ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ಪರ ಕೊನೆಯ ಪಂದ್ಯವನ್ನು ಆಡಿದ್ದರು. 2022ರಲ್ಲಿ ಆಂಗ್ಲರ ಪಡೆ ಆಸ್ಟ್ರೇಲಿಯಾದಲ್ಲಿ ನಡೆದಿದ್ದ ಟಿ20 ವಿಶ್ವಕಪ್‌ನ ಫೈನಲ್‌ನಲ್ಲಿ, ಪಾಕಿಸ್ತಾನ ತಂಡವನ್ನು ಮಣಿಸಿ ಟಿ20 ಟ್ರೋಫಿಗೆ ಮುತ್ತಿಟ್ಟಿತು. ಆಗ ಇವರು ತಂಡದ ಸದಸ್ಯರಾಗಿದ್ದರು.

ಡೇವಿಡ್‌ ಮಲಾನ್‌ ಹಲವು ಬಾರಿ ತಂಡವನ್ನು ಗೆಲುವಿನ ದಡವನ್ನು ಸೇರಿಸುವಲ್ಲಿ ಶ್ರಮಿಸಿದ್ದಾರೆ. ಅಲ್ಲದೆ ಐಸಿಸಿ ಟಿ20 ಶ್ರೇಯಾಂಕದಲ್ಲಿ ಹೆಚ್ಚು ಕಾಲ ನಂಬರ್ 1 ಸ್ಥಾನವನ್ನು ಅಲಂಕರಿಸಿದ್ದ ಹಿರಿಮೆಯನ್ನು ಹೊಂದಿದ್ದಾರೆ. ನಿವೃತ್ತಿಯ ಬಗ್ಗೆ ಮಲಾನ್‌ ಸಂದರ್ಶನದಲ್ಲಿ ತಿಳಿಸಿದ್ದಾರೆ. ಈ ವೇಳೆ ಇಂಗ್ಲೆಂಡ್ ಪರ ಆಡಿರುವ ಹೆಮ್ಮೆ ನನ್ನದಾಗಿದೆ ಎಂದು ತಿಳಿಸಿದ್ದಾರೆ.

David Malan Announces Retirement from International Cricket After Illustrious Career

ಡೇವಿಡ್ ಮಲಾನ್ ಇತ್ತೀಚೆಗೆ ಇಂಗ್ಲೆಂಡ್‌ನಲ್ಲಿ ನಡೆದ ಪುರುಷರ ಹಂಡ್ರೆಡ್ ಕ್ರಿಕೆಟ್‌ ಟೂರ್ನಿಯಲ್ಲಿ ಕಾಣಿಸಿಕೊಂಡಿದ್ದರು. ಈ ಸಮಯದಲ್ಲಿ ಅವರು ಓವಲ್ ಇನ್ವಿನ್ಸಿಬಲ್ ತಂಡದ ಪರ ಬ್ಯಾಟ್ ಬೀಸಿದ್ದರು. ಅಲ್ಲದೆ ತಂಡ ಚಾಂಪಿಯನ್‌ ಪಟ್ಟವನ್ನು ಅಲಂಕರಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸಿದ್ದರು.

ಇಂಗ್ಲೆಂಡ್ ಪರ 22 ಟೆಸ್ಟ್, 30 ODI ಮತ್ತು 62 T20 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿರುವ ಡೇವಿಡ್ ಮಲಾನ್, ಎಲ್ಲಾ ಮೂರು ಸ್ವರೂಪಗಳಲ್ಲಿ ಶತಕ ಸಿಡಿಸಿದ್ದಾರೆ. ಈ ಮೂಲಕ ಈ ಸಾಧನೆ ಮಾಡಿದ ಎರಡನೇ ಇಂಗ್ಲೆಂಡ್‌ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇವರಿಗಿಂತಲೂ ಮುನ್ನ ಜೋ ರೂಟ್ ಈ ಸಾಧನೆ ಮಾಡಿದ್ದರು. ಇವರು ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್‌ನಲ್ಲಿ ಆಡಿದ 9 ಪಂದ್ಯಗಳಲ್ಲಿ 404 ರನ್ ಗಳಿದ್ದರು. ಈ ಮೂಲಕ ತಂಡದ ಪರ ಅಗ್ರ ಸ್ಕೊರ್‌ ಆಗಿದ್ದರು.

David Malan Announces Retirement from International Cricket After Illustrious Career

ಡೇವಿಡ್ ಮಲಾನ್ ಸಾಧನೆ

ಡೇವಿಡ್ ಮಲಾನ್‌ 22 ಟೆಸ್ಟ್‌ ಪಂದ್ಯಗಳಲ್ಲಿ ಇಂಗ್ಲೆಂಡ್ ಪರ ಕಣಕ್ಕೆ ಇಳಿದಿದ್ದು, 1074 ರನ್ ಸಿಡಿಸಿದ್ದಾರೆ. ಇದರಲ್ಲಿ 1 ಶತಕ, 9 ಅರ್ಧಶತಕಗಳು ಸೇರಿವೆ. ಇನ್ನು 30 ಏಕದಿನ ಪಂದ್ಯಗಳಲ್ಲಿ 6 ಶತಕ, 7 ಅರ್ಧಶತಕ ಸೇರಿದಂತೆ 1450 ರನ್ ಸಿಡಿಸಿದ್ದಾರೆ. ಇನ್ನು 62 ಟಿ20 ಪಂದ್ಯಗಳಲ್ಲಿ 1892 ರನ್ ಸಿಡಿಸಿದ್ದಾರೆ. ಇದರಲ್ಲಿ ಒಂದು ಶತಕ ಸೇರಿದಂತೆ, 16 ಅರ್ಧಶತಕಗಳು ಸೇರಿವೆ.

Story first published: Wednesday, August 28, 2024, 15:33 [IST]
Other articles published on Aug 28, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+