For Quick Alerts
ALLOW NOTIFICATIONS  
For Daily Alerts
 

ಡೇವಿಡ್ ವಾರ್ನರ್ ಟೆಸ್ಟ್ ನಿವೃತ್ತಿಯ ಬಗ್ಗೆ ಮಹತ್ವದ ಮಾಹಿತಿ ನೀಡಿದ ಏಜೆಂಟ್

David Warner agent said Warner Has No Plans To Retire From Test Cricket

ಆಸ್ಟ್ರೇಲಿಯಾದ ಸ್ಟಾರ್ ಆಟಗಾರ ಡೇವಿಡ್ ವಾರ್ನರ್ ಟೆಸ್ಟ್ ಕ್ರಿಕೆಟ್ ಭವಿಷ್ಯದ ಬಗ್ಗೆ ಇತ್ತೀಚೆಗೆ ಸಾಕಷ್ಟು ಪ್ರಶ್ನೆಗಳು ಎದ್ದಿವೆ. ಟೆಸ್ಟ್ ಮಾದರಿಯಲ್ಲಿ ಇತ್ತೀಚೆಗೆ ವಾರ್ನರ್ ಫಾರ್ಮ್ ಕಳೆದುಕೊಂಡಿದ್ದು ಸಾಕಷ್ಟು ಟೀಕೆಗಳನ್ನು ಕೂಡ ಎದುರಿಸಿದ್ದಾರೆ. ಈ ಸಂದರ್ಭದಲ್ಲಿ ಡೇವಿಡ್ ವಾರ್ನರ್ ಅವರ ಏಜೆಂಟ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು ಸದ್ಯಕ್ಕೆ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಪಡೆಯುವ ಯೋಚನೆಯನ್ನು ಡೇವಿಡ್ ವಾರ್ನರ್ ಹೊಂದಿಲ್ಲ ಎಂದಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿಯೂ ವಾರ್ನರ್ ವಿಫಲವಾಗಿದ್ದರು. ಮೊದಲ ಇನ್ನಿಂಗ್ಸ್‌ನಲ್ಲಿ ಶೂನ್ಯಕ್ಕೆ ಔಟಾಗಿದ್ದ ವಾರ್ನರ್ ಎರಡನೇ ಇನ್ನಿಂಗ್ಸ್‌ನಲ್ಲಿ 3 ರನ್‌ಗಳಿಸಿ ವಿಕೆಟ್ ಕಳೆದುಕೊಂಡಿದ್ದರು. ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ಎರಡು ದಿನಗಳಿಗೂ ಮುನ್ನವೇ ದಕ್ಷಿಣ ಆಫ್ರಿಕಾ ವಿರುದ್ಧ ಗೆದ್ದು ಬೀಗಿತ್ತು.

ಡೇವಿಡ್ ವಾರ್ನರ್ ಕಳೆದ ಒಂದೆರಡು ವರ್ಷಗಳಿಂದ ಟೆಸ್ಟ್ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಲು ಸತತವಾಗಿ ವಿಫಲವಾಗುತ್ತಾ ಬಂದಿದೆ. ಟೆಸ್ಟ್ ಮಾದರಿಯಲ್ಲಿ ವಾರ್ನರ್ ಅವರ ಕೊನೆಯ ಶತಕ 2020ರ ಕನವರಿಯಲ್ಲಿ ಬಂದಿತ್ತು. ಇನ್ನು ದಕ್ಷಿಣ ಆಫ್ರಿಕಾ ವಿರುದ್ಧ ಸದ್ಯ ನಡೆಯುತ್ತಿರುವ ಟೆಸ್ಟ್ ಸರಣಿಗೂ ಹಿಂದಿನ ನಾಲ್ಕು ಇನ್ನಿಂಗ್ಸ್‌ಗಳಲ್ಲಿ ವಾರ್ನರ್ ಗಳಿಸಿದ್ದು 5, 48, 21 ಮತ್ತು 28. ಆದರೆ ಡೇವಿಡ್ ವಾರ್ನರ್ ಅವರ ಏಜೆಂಟ್ ಜೇಮ್ಸ್ ಎರ್ಸ್ಕೈನ್ ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಪಂದ್ಯಗಳ ಟೆಸ್ಟ್ ಸರಣಿಯ ಬಳಿಕ ವಾರ್ನರ್ ಟೆಸ್ಟ್‌ನಿಂದ ನಿವೃತ್ತಿ ಪಡೆಯುವುದಿಲ್ಲ ಎಂದು ಹೇಳಿಕೆ ನೀಡಿದ್ದಾರೆ.

ಮಂಗಳವಾರ ಸಿಡ್ನಿ ಮಾರ್ನಿಂಗ್ ಹೆರಾಲ್ಡ್‌ಗೆ ನೀಡಿರುವ ಪ್ರತಿಕ್ರಿಯೆಯಲ್ಲಿ ಎರ್ಸ್ಕೈನ್ "ಇಲ್ಲ, ಇದು ವಾರ್ನರ್ ಅವರ ಕೊನೆಯ ಟೆಸ್ಟ್ ಪಂದ್ಯವಾಗಿರಲಿದೆ ಎಂದು ನನಗೆ ಹಾಗೆ ಅನಿಸುತ್ತಿಲ್ಲ. ಹಾಗೇನಾದರೂ ಆಗಿದ್ದಲ್ಲಿ ಅದು ನನಗೆ ಮೊದಲು ತಿಳಿಯುತ್ತಿತ್ತು" ಎಂದಿದ್ದಾರೆ. ಮುಂದುವರಿದ ಅವರು "ಡೇಚಿಡ್ ವಾರ್ನರ್ ಅವರ ಚಿತ್ತ ಮುಂದಿನ ಭಾರತ ಹಾಗೂ ಪ್ರವಾಸ ಹಾಗೂ ಇಂಗ್ಲೆಂಡ್‌ನಲ್ಲಿ ನಡೆಯಲಿರವ ಆಶಸ್ ಸರಣಿಯ ಮೇಲೆ ನೆಟ್ಟಿದೆ" ಎಂದಿದ್ದಾರೆ.

ಡೇಚಿಡ್ ವಾರ್ನರ್ ಬಾಕ್ಸಿಂಗ್ ಡೇ ಟೆಸ್ಟ್‌ ಪಂದ್ಯದಲ್ಲಿ ಕಣಕ್ಕಿಲಿಯುವ ಮೂಲಕ ಆಸ್ಟ್ರೇಲಿಯಾ ತಂಡದ ಪರವಾಗಿ 100ನೇ ಟೆಸ್ಟ್ ಪಂದ್ಯವನ್ನು ಆಡುತ್ತಿರುವ 14ನೇ ಕ್ರಿಕೆಟಿಗ ಎನಿಸಿಕೊಳ್ಳಲಿದ್ದಾರೆ. ಆದರೆ ಈ ಕ್ಯಾಲೆಂಡರ್ ವರ್ಷದಲ್ಲಿ ವಾರ್ನರ್ ಅವರ ಟೆಸ್ಟ್ ಪಂದ್ಯದ ಸರಾಸರಿ 21ಕ್ಕಿಂತಲೂ ಕಡಿಮೆಯಿದೆ.

"ವೈಯಕ್ತಿಕವಾಗಿ ನನಗೆ ಅವರು ಮುಂದಿನ ದಿನಗಳಲ್ಲಿ ರನ್‌ಗಳನ್ನು ಬಾರಿಸಲಿದ್ದಾರೆ ಎಂಬ ವಿಶ್ವಾಸವಿದೆ. ಏನಾಗಲಿದೆ ಎಂದು ಕಾದುನೋಡೋಣ. ಆದರೆಡೇಚಿಡ್ ವಾರ್ನರ್ ಅವರ ದೃಷ್ಟಿಕೋನದಿಂದ ಅವರ ಪಾಳಿಗೆ ಮಹತ್ವದ ವಿಚಾರಗಳೆಂದರೆ ಅವರ ಮೂವರು ಮಕ್ಕಳು" ಎಂದಿದ್ದಾರೆ ಡೇವಿಡ್ ವಾರ್ನರ್ ಅವರ ಏಜೆಂಟ್ ಜೇಮ್ಸ್ ಎರ್ಸ್ಕೈನ್.

Story first published: Wednesday, December 21, 2022, 8:49 [IST]
Other articles published on Dec 21, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+