For Quick Alerts
ALLOW NOTIFICATIONS  
For Daily Alerts
 

ತೆಲುಗು ಸಾಂಗ್ 'ಬುಟ್ಟ ಬೊಮ್ಮ'ಗೆ ಹೆಜ್ಜೆ ಹಾಕಿದ ಡೇವಿಡ್ ವಾರ್ನರ್: ವೀಡಿಯೋ

David Warner and Candice shake a leg to Telugu song “Butta Bomma”

ಬೆಂಗಳೂರು, ಏಪ್ರಿಲ್ 30: ಕೊರೊನಾವೈರಸ್‌ನಿಂದಾಗಿ ಕ್ರಿಕೆಟ್‌ ಟೂರ್ನಿಗಳೇ ಇಲ್ಲದೆ ಕ್ರಿಕೆಟ್ ಪ್ರೇಮಿಗಳು ಬೋರ್ ಅನುಭವಿಸುತ್ತಿದ್ದರೆ, ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್)ನ ಸನ್ ರೈಸರ್ಸ್ ಹೈದರಾಬಾದ್ ತಂಡದ ನಾಯಕ, ಆಸ್ಟ್ರೇಲಿಯಾದ ಆರಂಭಿಕ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ ಕ್ರಿಕೆಟ್‌ ಅಭಿಮಾನಿಗಳನ್ನು ವಿಭಿನ್ನ ರೀತಿಯಲ್ಲಿ ಮನರಂಜಿಸುತ್ತಿದ್ದಾರೆ.

ಇತ್ತೀಚೆಗೆ ಟಿಕ್‌ಟಾಕ್‌ಗೆ ಎಂಟ್ರಿ ಕೊಟ್ಟಿರುವ ಡೇವಿಡ್ ವಾರ್ನರ್, ತನ್ನ ಕುಟುಂಬಸ್ಥರೊಂದಿಗೆ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಇನ್ನೂ ಹೆಚ್ಚು ಗಮನ ಸೆಳೆಯತೊಡಗಿದ್ದಾರೆ. ಅದೂ ಭಾರತದ ಸಿನಿಮಾದ ಚಿತ್ರವೊಂದರ ಹಾಡಿಗೆ ವಾರ್ನರ್ ಡ್ಯಾನ್ಸ್ ಮಾಡಿರುವುದರಿಂದ ಇದು ಭಾರತದ ಅಭಿಮಾನಿಗಳಿಗೆ ಹೆಚ್ಚು ಇಷ್ಟವೆನಿಸಿದೆ.

ಗುರುವಾರ (ಏಪ್ರಿಲ್ 30) ವಾರ್ನರ್ ತನ್ನ ಇನ್‌ಸ್ಟಾಗ್ರಾಮ್‌ನಲ್ಲಿ ಟಿಕ್ ಟಾಕ್ ವೀಡಿಯೋ ಹಾಕಿಕೊಂಡಿದ್ದಾರೆ. ಇದರಲ್ಲಿ ತೆಲುಗು ನಟ ಅಲ್ಲು ಅರ್ಜುನ್ ನಟಿಸಿರುವ 'ಅಲ ವೈಕುಂಟಪುರಮುಲು' ಚಿತ್ರದ ಜನಪ್ರಿಯ 'ಬುಟ್ಟ ಬೊಮ್ಮ' ಹಾಡಿಗೆ ವಾರ್ನರ್ ಮತ್ತವರ ಪತ್ನಿ ಕ್ಯಾಂಡಿಸ್ ವಾರ್ನರ್ ಸ್ಟೆಪ್ ಹಾಕಿದ್ದಾರೆ.

ವೀಡಿಯೋ ಜೊತೆಗೆ ಡೇವಿಡ್, 'ಇದು ಟಿಕ್‌ಟಾಕ್ ಟೈಮ್. #ಬುಟ್ಟಬೊಮ್ಮ ಬಂದಿದೆ. ನಿಮ್ಮ ಆರಾಮದ ವಲಯದಿಂದ ಹೊರಗೆ ಬನ್ನಿ' ಅನ್ನೋ ಅರ್ಥದಲ್ಲಿ ಬರೆದುಕೊಂಡಿದ್ದಾರೆ. ಅಷ್ಟೇ ಅಲ್ಲ, ತಾನು ಡ್ಯಾನ್ಸ್ ಮಾಡಿರುವುದನ್ನು ಡೇವಿಡ್ ಅಲ್ಲುಗೂ ತಿಳಿಸಿದ್ದಾರೆ. ಅಲ್ಲು ಇದಕ್ಕೆ ಪ್ರತಿಕ್ರಿಯೆಯೂ ನೀಡಿದ್ದಾರೆ.

'ಥ್ಯಾಂಕ್ಯೂ ಸರ್, ಅದ್ಭುತ ಸಾಂಗ್' ಅಂತ ವಾರ್ನರ್, ಅಲ್ಲು ಅರ್ಜುನ್‌ ಉದ್ದೇಶಿಸಿ ಟ್ವೀಟ್ ಮಾಡಿದ್ದರೆ, ಇದಕ್ಕೆ ಅಲ್ಲು 'ಥ್ಯಾಂಕ್ಯೂ ವೆರಿಮಚ್. ನಿಮ್ಮ (ಡ್ಯಾನ್ಸ್) ಪ್ರಯತ್ನಕ್ಕೆ ನಿಜಕ್ಕೂ ಅಭಿನಂದಿಸಬೇಕು' ಎಂದು ಪ್ರತಿಕ್ರಿಯಿಸಿದ್ದಾರೆ. ಡೇವಿಡ್ ವಾರ್ನರ್ ಮಾಡಿರುವ ಈ ವೀಡಿಯೋದಲ್ಲಿ ವಾರ್ನರ್ ದಂಪತಿ ಮತ್ತವರ ಪುತ್ರಿ ಇದ್ದಾರೆ.

Story first published: Thursday, April 30, 2020, 21:44 [IST]
Other articles published on Apr 30, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+