Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

100ನೇ ಪಂದ್ಯದಲ್ಲಿ ಶತಕ ಸಿಡಿಸಿ ದಾಖಲೆ ಬರೆದ ವಾರ್ನರ್

ಬೆಂಗಳೂರು, ಸೆ. 28: ಭಾರತ ವಿರುದ್ಧದ ನಾಲ್ಕನೇ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಆಕರ್ಷಕ ಶತಕ ಸಿಡಿಸಿದ್ದಾರೆ.

ತಮ್ಮ ವೃತ್ತಿ ಬದುಕಿನ 100ನೇ ಪಂದ್ಯವಾಡುತ್ತಿರುವ ವಾರ್ನರ್ ಅವರು ಶತಕ ಗಳಿಸುವ ಮೂಲಕ ಈ ಸಾಧನೆ ಮಾಡಿದ ಮೊದಲ ಆಸ್ಟ್ರೇಲಿಯನ್ ಆಟಗಾರ ಎನಿಸಿಕೊಂಡರು.

ಇದು ಅವರ ಅಂತಾರಾಷ್ಟ್ರೀಯ ವೃತ್ತಿ ಬದುಕಿನಲ್ಲಿ 14ನೇ ಒಡಿಐ ಶತಕವಾಗಿದೆ. ವಾರ್ನರ್ ಅವರು 124ರನ್ (119 ಎಸೆತ, 12 ಬೌಂಡರಿ, 4ಸಿಕ್ಸರ್) ಹಾಗೂ ಅರೋನ್ ಫಿಂಚ್ 94 ರನ್ (96 ಎಸೆತ, 10 ಬೌಂಡರಿ, 3ಸಿಕ್ಸರ್) ಗಳಿಸಿ ಆಸ್ಟ್ರೇಲಿಯಾ ಮೊತ್ತವನ್ನು ಮೊದಲಿಗೆ ವಿಕೆಟ್ 231ರನ್(35 ಓವರ್) ಕಲೆ ಹಾಕಿದರು. ಆದರೆ, ಅಂತಿಮವಾಗಿ ಆಸ್ಟ್ರೇಲಿಯಾ 334 ಸ್ಕೋರಿಗೆ ಆಲೌಟಾಯಿತು.

100ನೇ ಪಂದ್ಯದಲ್ಲಿ ಶತಕ ಸಿಡಿಸಿದವರ ಪಟ್ಟಿಯಲ್ಲಿ ಗ್ರೀನಿಡ್ಜ್, ಕ್ರಿಸ್ ಕ್ರೈನ್ಸ್, ಮೊಹಮ್ಮದ್ ಯೂಸುಫ್, ಕುಮಾರ್ ಸಂಗಕ್ಕಾರ, ಕ್ರಿಸ್ ಗೇಲ್, ಮಾರ್ಕಸ್ ಟ್ರೆಸ್ಕೊಥಿಕ್ ಹಾಗೂ ರಾಮ್ ನರೇಶ್ ಸರವಣ ಅವರಿದ್ದಾರೆ. ಭಾರತದ ವಿರುದ್ಧದ ಐದು ಪಂದ್ಯಗಳ ಏಕದಿನ ಸರಣಿಯನ್ನು ಆಸ್ಟ್ರೇಲಿಯಾ 3-0 ಅಂತರದಿಂದ ಕಳೆದುಕೊಂಡಿದೆ.

Story first published: Wednesday, January 3, 2018, 10:05 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+