ಆಸ್ಟ್ರೇಲಿಯಾದ ಸ್ಟಾರ್ ಬ್ಯಾಟರ್ ಡೇವಿಡ್ ವಾರ್ನರ್ ಪಾಕಿಸ್ತಾನ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ದಾಖಲೆಯನ್ನು ನಿರ್ಮಿಸಿದ್ದಾರೆ. ಇವರು ಆಸೀಸ್ ದಿಗ್ಗಜ ಕ್ಯಾಪ್ಟನ್ ಸ್ಟೀವ್ ವಾ ಅವರ ದಾಖಲೆಯನ್ನು ಅಳಿಸಿ ಹಾಕಿದ್ದಾರೆ.
ಮೆಲ್ಬೋರ್ನ್‌ನಲ್ಲಿ ನಡೆದ ಬಾಕ್ಸಿಂಗ್ ಡೇ ಟೆಸ್ಟ್ ವೇಳೆ ಪಾಕಿಸ್ತಾನ ವಿರುದ್ಧ ನಡೆದ ಪಂದ್ಯದಲ್ಲಿ ವಾರ್ನರ್ ಈ ದಾಖಲೆಯನ್ನು ಮಾಡಿದ್ದಾರೆ. ವಾರ್ನರ್ ಮೊದಲ ಇನ್ನಿಂಗ್ಸ್‌ನಲ್ಲಿ 83 ಎಸೆತಗಳಲ್ಲಿ 38 ರನ್ ಗಳನ್ನು ಬಾರಿಸಿದರು. ಇದರಲ್ಲಿ ಮೂರು ಬೌಂಡರಿಗಳು ಸೇರಿವೆ.

ವಾರ್ನರ್ 371 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 18515 ರನ್‌ಗಳನ್ನು 42.56ರ ಸರಾಸರಿಯಲ್ಲಿ ಬಾರಿಸಿದ್ದಾರೆ. ಇದರಲ್ಲಿ 49 ಶತಕ ಹಾಗೂ 93 ಅರ್ಧಶತಕಗಳು ಸೇರಿವೆ.
ವಾರ್ನರ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಬಾರಿಸಿದ ಆಸೀಸ್‌ನ ಆಟಗಾರರ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಬಡ್ತಿ ಪಡೆದಿದ್ದಾರೆ. ಇವರು ಸ್ಟೀವ್ ವಾ ಅವರನ್ನು ಹಿಂದಿಕ್ಕಿದ್ದಾರೆ. ಸ್ಟೀವ್ ವಾ 493 ಇನ್ನಿಂಗ್ಸ್‌ಗಳಲ್ಲಿ 18496 ರನ್ ಸಿಡಿಸಿದ್ದರು. 41.65ರ ಸರಾಸರಿಯಲ್ಲಿ ರನ್ ಕಲೆ ಹಾಕಿರುವ ಇವರು 35 ಶತಕ ಹಾಗೂ 95 ಅರ್ಧಶತಕ ಬಾರಿಸಿದ್ದಾರೆ. ಈ ಪಟ್ಟಿಯಲ್ಲಿ ದಿಗ್ಗಜ ಆಟಗಾರ ರಿಕ್ಕಿ ಪಾಂಟಿಂಗ್ ನಂಬರ್ 1 ಸ್ಥಾನದಲ್ಲಿದ್ದಾರೆ. ರಿಕ್ಕಿ 559 ಪಂದ್ಯಗಳಲ್ಲಿ 45.84ರ ಸರಾಸರಿಯಲ್ಲಿ 27368 ರನ್ ಸಿಡಿಸಿದ್ದು, ಇದರಲ್ಲಿ 70 ಶತಕ ಹಾಗೂ 146 ಅರ್ಧಶತಕ ಸೇರಿವೆ.
ಡೇವಿಡ್ ವಾರ್ನರ್ 111 ಟೆಸ್ಟ್‌ನಲ್ಲಿ 8689 ರನ್ ಸಿಡಿಸಿದ್ದು, 26 ಶತಕ ಹಾಗೂ 36 ಅರ್ಧಶತಕಗಳು ಒಳಗೊಂಡಿವೆ. ಈ ವೇಳೆ ಅವರ ಬೆಸ್ಟ್ ಸ್ಕೋರ್ ಅಜೇಯ 335 ರನ್ ಆಗಿದೆ. 161 ಏಕದಿನ ಪಂದ್ಯಗಳಲ್ಲಿ 45.30ರ ಸರಾಸರಿಯಲ್ಲಿ 22 ಶತಕ, 33 ಅರ್ಧಶತಕ ಬಾರಿಸಿದ್ದಾರೆ. ಇನ್ನು 99 ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ಒಂದು ಶತಕ ಹಾಗೂ 24 ಅರ್ಧಶತಕ ಸೇರಿದಂತೆ 2894 ರನ್ ಸಿಡಿಸಿದ್ದಾರೆ.

ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಡೇವಿಡ್ ವಾರ್ನರ್ ಹಾಗೂ ಉಸ್ಮಾನ್ ಖವಾಜಾ ಭರ್ಜರಿ ಜೊತೆಯಾಟವನ್ನು ನೀಡಿ 90 ರನ್ ಕಾಣಿಕೆ ನೀಡಿದರು. ಇವರನ್ನು ಬಿಟ್ಟರೆ ಟ್ರಾವಿಸ್ ಹೆಡ್ ಹಾಗೂ ಮಾರ್ನಸ್ ಲಂಬುಶೇನ್ ಜೊತೆಗೂಡಿ 63 ರನ್ ಸೇರಿಸಿದರು. ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್‌ನಲ್ಲಿ 318 ರನ್ ಗಳಿಗೆ ಆಲೌಟ್ ಆಗುದೆ.