Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಪಂಜಾಬಿ ಹಾಡಿಗೆ ಹೆಜ್ಜೆ ಹಾಕಿದ ಡೇವಿಡ್ ವಾರ್ನರ್ ಕುಟುಂಬ: ವೀಡಿಯೋ

David Warner & family now dance to Punjabi song

ಸಿಡ್ನಿ, ಮೇ 19: ಕೊರೊನಾವೈರಸ್ ಕಾರಣ ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಲಾಕ್‌ಡೌನ್ ವಿಧಿಸಲಾಗಿರುವುದರಿಂದ ಬಿಡುವಿನಲ್ಲಿರುವ ಆಸ್ಟ್ರೇಲಿಯಾದ ಆರಂಭಿಕ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ ಇತ್ತೀಚೆಗೆ ಟಿಕ್‌ಟಾಕ್‌ನಲ್ಲಿ ಹೆಚ್ಚು ಸದ್ದು ಮಾಡುತ್ತಿದ್ದಾರೆ. ಅದರಲ್ಲೂ ಭಾರತೀಯ ಹಾಡುಗಳಿಗೆ ಹೆಜ್ಜೆ ಹಾಕುತ್ತಿರುವ ವಾರ್ನರ್ ಕುಟುಂಬ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಗಮನ ಸೆಳೆಯುತ್ತಿದೆ.

ಇತ್ತೀಚೆಗಷ್ಟೇ ಡೇವಿಡ್ ವಾರ್ನರ್ ಮತ್ತವರ ಕುಟುಂಬ ತೆಲುಗು ಚಿತ್ರ 'ಅಲ ವೈಕುಂಟಪುರಮುಲು'ನ ಬಟ್ಟ ಬೊಮ್ಮ ಹಾಡಿಗೆ ಸ್ಟೆಪ್ ಹಾಕಿತ್ತು. ವಾರ್ನರ್, ಅವರ ಪತ್ನಿ ಕ್ಯಾಂಡಿಸ್ ವಾರ್ನರ್, ಇಬ್ಬರು ಪುತ್ರಿಯರು ಈ ಬಾರಿ ಪಂಜಾಬಿ ಹಾಡಿಗೆ ಕುಣಿದಿದ್ದಾರೆ.

ಮಂಗಳವಾರ ಡೇವಿಡ್ ವಾರ್ನರ್ ತನ್ನ ಇನ್‌ಸ್ಟಾಗ್ರಾಮ್‌ನಲ್ಲಿ ಟಿಕ್ ಟಾಕ್ ವೀಡಿಯೋ ಶೇರ್ ಮಾಡಿಕೊಂಡಿದ್ದಾರೆ. ಇದರಲ್ಲಿ ಗುರು ರಾಂಧವ ಅವರ ಜನಪ್ರಿಯ ಪಂಜಾಬಿ ಹಾಡು 'ಸ್ಲೋಲಿ ಸ್ಲೋಲಿ'ಗೆ ವಾರ್ನರ್, ಕ್ಯಾಂಡಿಸ್ ಮತ್ತು ಇಬ್ಬರು ಪುತ್ರಿಯರು ಕುಣಿದಿರುವ ದೃಶ್ಯವಿದೆ.

ವೀಡಿಯೋ ಜೊತೆಗೆ ವಾರ್ನರ್, 'ಹೌದು ನಾವು ಈಗ ಅದನ್ನು ಕಳೆದುಕೊಂಡಿದ್ದೇವೆ. ಕತ್ತಲೆಯ ರಾತ್ರಿಯಲ್ಲಿ ಹೊಳಪು' ಎಂದು ಸಾಲನ್ನೂ ಬರೆದುಕೊಂಡಿದ್ದಾರೆ. ಕಳೆದ ವಾರ ವಾರ್ನರ್ ಮತ್ತವರ ಪತ್ನಿ ಭಾರತ ಖ್ಯಾತ ನಟ ಪ್ರಭು ದೇವ್ ನಟಿಸಿದ್ದ 'ಮುಕ್ಕಾಲ ಮುಕ್ಕಾಬುಲಾ' ಹಾಡಿಗೆ ಹೆಜ್ಜೆ ಹಾಕಿದ್ದರು.

Story first published: Tuesday, May 19, 2020, 17:51 [IST]
Other articles published on May 19, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+