For Quick Alerts
ALLOW NOTIFICATIONS  
For Daily Alerts
 

'ನಾವು ಸುಲಭವಾಗಿ ರನ್ ಗುರಿ ತಲುಪುತ್ತೇವೆ ಎಂದು ಭಾವಿಸಿದ್ದೆ'

David Warner feels SRH players thought they ‘would get the runs easily’ against Kings XI Punjab

ದುಬೈ: ಕಿಂಗ್ಸ್ 11 ಪಂಜಾಬ್ ವಿರುದ್ಧ ಸುಲಭವಾಗಿ ಗೆಲ್ಲಬೇಕಿದ್ದ ಪಂದ್ಯವನ್ನು ಸನ್ ರೈಸರ್ಸ್ ಹೈದರಾಬಾದ್ ತಂಡ ಸೋತಿದೆ. ಶನಿವಾರ (ಅಕ್ಟೋಬರ್ 24) ನಡೆದಿದ್ದ ಪಂದ್ಯದಲ್ಲಿ ಹೈದರಾಬಾದ್, ಪಂಜಾಬ್ ವಿರುದ್ಧ 12 ರನ್‌ಗಳ ಸೋಲನುಭವಿಸಿದೆ. ಈ ಸೋಲು ತುಂಬಾ ನೋವುಂಟು ಮಾಡುತ್ತಿದೆ ಎಂದು ತಂಡದ ನಾಯಕ ಡೇವಿಡ್ ವಾರ್ನರ್ ಹೇಳಿದ್ದಾರೆ.

ದುಬೈ ಇಂಟರ್ ನ್ಯಾಷನಲ್ ಸ್ಟೆಡಿಯಂನಲ್ಲಿ ನಡೆದಿದ್ದ ಪಂದ್ಯದಲ್ಲಿ ಮೊದಲು ಇನ್ನಿಂಗ್ಸ್‌ ಆಡಿದ್ದ ಪಂಜಾಬ್, ಕೆಎಲ್ ರಾಹುಲ್ 27, ಮನ್‌ದೀಪ್‌ ಸಿಂಗ್ 17, ಕ್ರಿಸ್ ಗೇಲ್ 20, ನಿಕೋಲಸ್ ಪೂರನ್ 32, ಗ್ಲೆನ್ ಮ್ಯಾಕ್ಸ್‌ವೆಲ್ 12 ರನ್‌ನೊಂದಿಗೆ ಪಂಜಾಬ್ 20 ಓವರ್‌ಗೆ 7 ವಿಕೆಟ್ ಕಳೆದು 126 ರನ್ ಗಳಿಸಿತ್ತು.

ಗುರಿ ಬೆನ್ನಟ್ಟಿದ ಸನ್ ರೈಸರ್ಸ್ ಹೈದರಾಬಾದ್, ಡೇವಿಡ್ ವಾರ್ನರ್ 35, ಜಾನಿ ಬೇರ್ಸ್ಟೋವ್ 19, ಮಿನೀಶ್ ಪಾಂಡೆ 15, ವಿಜಯ್ ಶಂಕರ್ 26 ರನ್‌ನೊಂದಿಗೆ 19.5 ಓವರ್‌ಗೆ ಎಲ್ಲ ವಿಕೆಟ್ ಕಳೆದು 114 ರನ್ ಬಾರಿಸಿ ಶರಣಾಗಿತ್ತು. ಮೊಹಮ್ಮದ್ ಶಮಿ 1, ಅರ್ಷ್‌ದೀಪ್ ಸಿಂಗ್ 23ಕ್ಕೆ 3, ಮುರುಗನ್ ಅಶ್ವಿನ್ 1, ರವಿ ಬಿಷ್ಣೋಯ್ 1, ಕ್ರಿಸ್ ಜೋರ್ಡನ್ 13ಕ್ಕೆ 3 ವಿಕೆಟ್ ಮುರಿದು ಹೈದರಾಬಾದ್ ಸೋಲಿಗೆ ಕಾರಣರಾದರು.

ಪಂದ್ಯದ ಬಳಿಕ ಮಾತನಾಡಿದ ಡೇವಿಡ್ ವಾರ್ನರ್, 'ಹೌದು ಈ ಸೋಲು ತುಂಬಾ ನೋವು ತರುತ್ತದೆ. ನಮ್ಮ ಬೌಲರ್‌ಗಳು ಅವರನ್ನು ಕಟ್ಟಿ ಹಾಕುವಲ್ಲಿ ಅದ್ಭುತ ಪ್ರದರ್ಶನ ನೀಡಿದ್ದರು. ನಾವು ಆ ಟೋಟಲ್ ಅನ್ನು ಸುಲಭವಾಗಿ ತಲುಪಬಹುದು ಅಂದುಕೊಂಡಿದ್ದೆ. ಆದರೆ ಸಾಧ್ಯವಾಗಿಲ್ಲ,' ಎಂದು ವಾರ್ನರ್ ಹೇಳಿದ್ದಾರೆ.

Story first published: Sunday, October 25, 2020, 11:35 [IST]
Other articles published on Oct 25, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+