ಡೇವಿಡ್ ವಾರ್ನರ್‌ಗೆ ಮನ ಕಲುಕುವ ಸಂದೇಶ ಬರೆದ ಪುತ್ರಿಯರು

ಸಿಡ್ನಿ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 14ನೇ ಆವೃತ್ತಿ ಅಮಾನತಾಗಿದೆ. ಮತ್ತೆ ಟೂರ್ನಿ ಮುಂದುವರೆಯುವುದಿದ್ದರೆ ಯಾವಾಗ ಎಂಬುದನ್ನು ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ಇನ್ನಷ್ಟೇ ಚರ್ಚಿಸಿ ನಿರ್ಧಾರ ಕೈಗೊಳ್ಳಬೇಕಿದೆ. ಸೆಪ್ಟೆಂಬರ್ ತಿಂಗಳಲ್ಲಿ ಐಪಿಎಲ್ ಇನ್ನುಳಿದ ಪಂದ್ಯಗಳನ್ನು ಮುಂದುವರೆಸುವ ಆಲೋಚನೆ ಬಿಸಿಸಿಐ ತಲೆಯಲ್ಲಿದೆಯಾದರೂ ಅದಕ್ಕೆ ಸಂದರ್ಭಗಳು ಅವಕಾಶ ನೀಡಬೇಕಷ್ಟೇ.
ಭಾರತದಲ್ಲಿ ಆತಂಕ ರೀತಿಯಲ್ಲಿ ಹೆಚ್ಚುತ್ತಿದ್ದ ಕೋವಿಡ್-19 ಪ್ರಕರಣಗಳಿಂದಾಗಿ 2021ರ ಐಪಿಎಲ್ ಆವೃತ್ತಿ ಅಮಾನತೆಂದು ಘೋಷಿಸಲ್ಪಟ್ಟಿತ್ತು. ಹೀಗಾಗಿ ಟೂರ್ನಿಗಾಗಿ ಬಂದಿದ್ದ ವಿದೇಶಿ ಕ್ರಿಕೆಟಿಗರು ಸ್ವದೇಶಕ್ಕೆ ಹೊರಡುತ್ತಿದ್ದಾರೆ. ಈ ಮಧ್ಯೆ ಆಸ್ಟ್ರೇಲಿಯಾ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್‌ಗೆ ಅವರ ಪುತ್ರಿಯರು ಬರೆದಿರುವ ಮನಮುಟ್ಟುವ ಸಂದೇಶ ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆಯುತ್ತಿದೆ.

ಸಂಕಷ್ಟದಲ್ಲಿ ಆಸ್ಟ್ರೇಲಿಯಾ ಆಟಗಾರರು
14ನೇ ಆವೃತ್ತಿಯ ಐಪಿಎಲ್‌ನಲ್ಲಿ ಪಾಲ್ಗೊಳ್ಳುತ್ತಿರುವ ಆಸ್ಟ್ರೇಲಿಯಾದ ಆಟಗಾರರಿಗೆ ಸಂಕಷ್ಟ ಎದುರಾಗಿದೆ. ಕೋವಿಡ್-19 ವಿಚಾರದಲ್ಲಿ ಅಪಾಯಕಾರಿ ದೇಶಗಳ ಸಾಲಿನಲ್ಲಿ ಮುಂಚೂಣಿಯಲ್ಲಿರುವ ಭಾರತದಿಂದ ಯಾವುದೇ ವ್ಯಕ್ತಿಗಳು ಬಾರದಂತೆ ಆಸ್ಟ್ರೇಲಿಯಾ, ನ್ಯೂಜಿಲೆಂಡ್ ದೇಶಗಳು ನಿರ್ಬಂಧ ಹೇರಿವೆ. ಇದರಿಂದಾಗಿ ಸ್ವತಃ ಆಸೀಸ್, ಕಿವೀಸ್ ಆಟಗಾರರಿಗೆ ತಮ್ಮ ದೇಶಕ್ಕೆ ಹೋಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ವಾರ್ನರ್‌ಗೆ ಮನಕಲುಕುವ ಪತ್ರ
ಐಪಿಎಲ್‌ನಲ್ಲಿ ಸನ್ ರೈಸರ್ಸ್ ಹೈದರಾಬಾದ್‌ನ ನಾಯಕರಾಗಿದ್ದ ಡೇವಿಡ್ ವಾರ್ನರ್ ಅವರನ್ನು ನಾಯಕತ್ವದಿಂದ ಕೆಳಗಿಳಿಸಿ ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಅವರನ್ನು ನಾಯರಾಗಿ ಆರಿಸಲಾಗಿತ್ತು. ಅಲ್ಲದೆ ಒಂದು ಪಂದ್ಯದಲ್ಲಿ ವಾರ್ನರ್‌ಗೆ ಪ್ಲೇಯಿಂಗ್ XIನಲ್ಲಿ ಅವಕಾಶ ನೀಡಿರಲಿಲ್ಲ. ಈ ಬೇಸರ, ಆಘಾತದಲ್ಲಿದ್ದ ವಾರ್ನರ್‌ಗೆ ಅವರ ಪುತ್ರಿಯರು ಮನಕಲಕುವ ಸಂದೇಶ ಬರೆದಿದ್ದಾರೆ. ಈ ಸಂದೇಶ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

'ಅಪ್ಪಾ, ನೇರವಾಗಿ ಮನೆಗೆ ಬನ್ನಿ'
ವಾರ್ನರ್‌ಗೆ ಅವರ ಪುತ್ರಿಯರಾದ ಇವಿ, ಇಂಡಿ, ಇಸ್ಲಾ ಸೇರಿ ಮನಮುಟ್ಟುವ ಸಂದೇಶ ಬರೆದಿದ್ದಾರೆ. ವಾರ್ನರ್, ವಾರ್ನರ್ ಪತ್ನಿ ಕ್ಯಾಂಡಿಸ್ ಮತ್ತು ಮೂವರು ಪುತ್ರಿಯರಿರುವ ಚಿತ್ರ ಬಿಡಿಸಿರುವ ಪುಟಾಣಿಗಳು, 'ಪ್ಲೀಸ್ ಅಪ್ಪಾ, ನೇರವಾಗಿ ಮನೆಗೆ ಬನ್ನಿ. ನಾವು ನಿಮ್ಮನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇವೆ. ಲವ್ ಯೂ.. ಇವಿ, ಇಂಡಿ ಮತ್ತು ಇಸ್ಲಾರಿಂದ ಈ ಪ್ರೀತಿಯ ಸಂದೇಶ' ಎಂದು ಬರೆದುಕೊಂಡಿದ್ದಾರೆ. ವಾರ್ನರ್ ಈ ಚಿತ್ರವನ್ನು ತನ್ನ ಇನ್‌ಸ್ಟಾಗ್ರಾಮ್‌ನಲ್ಲಿ ಹಾಕಿಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications