ಟಿ20ಗೆ ನಿವೃತ್ತಿ ನೀಡುವ ಸುಳಿವಿತ್ತ ಆಸೀಸ್ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್

ಸಿಡ್ನಿ, ಫೆಬ್ರವರಿ 11: ಕೆಲವು ವರ್ಷಗಳಲ್ಲಿ ತಾನು ಟಿ20 ಕ್ರಿಕೆಟ್‌ಗೆ ನಿವೃತ್ತಿ ನೀಡಲು ಯೋಚಿಸಿರುವುದಾಗಿ ಆಸ್ಟ್ರೇಲಿಯಾ ಸ್ಫೋಟಕ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ ಹೇಳಿದ್ದಾರೆ. ಟೆಸ್ಟ್ ಮತ್ತು ಏಕದಿನ ವೃತ್ತಿ ಬದುಕಿನ ಜೊತೆಗೆ ತನ್ನ ಕುಟುಂಬದೊಂದಿಗೆ ಹೆಚ್ಚು ಕಾಲ ಕಳೆಯಲು ಹೀಗೆ ಯೋಚಿಸಿರುವುದಾಗಿ ವಾರ್ನರ್ ತಿಳಿಸಿದ್ದಾರೆ.
33ರ ಹರೆಯದ ಡೇವಿಡ್ ವಾರ್ನರ್, ಸೋಮವಾರ (ಫೆಬ್ರವರಿ 10) ಆಸ್ಟ್ರೇಲಿಯಾದ ವರ್ಷದ ಕ್ರಿಕೆಟಿಗನಾಗಿ 'ಆ್ಯಲನ್ ಬಾರ್ಡರ್ ಪದಕ' ಪಡೆದುಕೊಂಡಿದ್ದಾರೆ. 2018ರಲ್ಲಿ ಚೆಂಡು ವಿರೂಪ ಪ್ರಕರಣದಲ್ಲಿ ವರ್ಷದ ನಿಷೇಧಕ್ಕೀಡಾದ ಬಳಿಕ ಮತ್ತೆ ತಂಡ ಸೇರಿಕೊಂಡು ಉತ್ತಮ ಪ್ರದರ್ಶನ ನೀಡಿದ್ದಕ್ಕಾಗಿ ವಾರ್ನರ್ ಈ ಪ್ರಶಸ್ತಿಗೆ ಭಾಜನರಾಗಿದ್ದರು.
ಅಷ್ಟೇ ಅಲ್ಲ, ಟಿ20 ವರ್ಷದ ಆಟಗಾರನಾಗಿಯೂ ಹೆಸರಿಸಲ್ಪಟ್ಟಿರುವ ವಾರ್ನರ್, ಆಸ್ಟ್ರೇಲಿಯನ್ ಅಸೋಸಿಯೇಟೆಡ್ ಪ್ರೆಸ್ ಜೊತೆ ಮಾತನಾಡುತ್ತ, 'ನೀವು ಅಂತಾರಾಷ್ಟ್ರೀಯ ಟಿ20ಯತ್ತ ನೋಡಿದರೆ, ನಾವು ಬೆನ್ನು ಬೆನ್ನಿಗೆ ಟಿ20 ವಿಶ್ವಕಪ್ ಗೆದ್ದಿರುವುದು ನಿಮಗೆ ಗೊತ್ತಾಗುತ್ತದೆ,' ಎಂದರು.
ಮಾತು ಮುಂದುವರೆಸಿದ ವಾರ್ನರ್, 'ಹೀಗಾಗಿಯೇ ಬಹುಶಃ ನಾನು ಕೆಲವರ್ಷಗಳ ಬಳಿಕ ಟಿ20 ಕ್ರಿಕೆಟ್ ಮಾದರಿಯನ್ನು ಬಿಡಬಹುದು. ಯಾಕೆಂದರೆ ಎಲ್ಲಾ ಮಾದರಿಯ ಕ್ರಿಕೆಟ್ ಆಡುತ್ತಿರೋದು ತುಂಬಾ ಸವಾಲಿನದ್ದು. ಇನ್ನೂ ಎಲ್ಲಾ ಮಾದರಿಯನ್ನೂ ಆಡುತ್ತಲೇ ಮುಂದುವರೆಯುತ್ತೇನೆ ಅನ್ನೋರಿಗೆ ಒಳ್ಳೇದಾಗ್ಲಿ, ಆದರೆ ನನ್ನ ಪಾಲಿಗಂತೂ ಅದು ತುಂಬಾ ಕಷ್ಟಕರವಾದ್ದು,' ಎಂದು ವಿವರಿಸಿದರು.
ಟೆಸ್ಟ್ ಮತ್ತು ಏಕದಿನ ಕ್ರಿಕೆಟ್‌ನಲ್ಲಿ 40ರ ಸರಾಸರಿ ಹೊಂದಿರುವ ಡೇವಿಡ್ ವಾರ್ನರ್, ಟಿ20ಐನಲ್ಲಿ 140 ಸ್ಟ್ರೈಕ್ ರೇಟ್ ಹೊಂದಿದ್ದಾರೆ. ಈ ಬಾರಿ ಎರಡು ಟಿ20 ವಿಶ್ವಕಪ್ ಟೂರ್ನಿಗಳು ಆಸ್ಟ್ರೇಲಿಯಾದಲ್ಲಿ ನಡೆಯಲಿವೆ. ಮುಂಬರುವ ವರ್ಷ ಭಾರತದಲ್ಲಿ ಈ ಟೂರ್ನಿ ನಡೆಸಲು ಉದ್ದೇಶಿಸಲಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications