ಜಡೇಜಾ ಶೈಲಿಯನ್ನು ಅನುಕರಿಸಿದ ವಿಡಿಯೋ ಹಂಚಿಕೊಂಡ ಡೇವಿಡ್ ವಾರ್ನರ್

ಕೊರೊನಾ ವೈರಸ್ ವ್ಯಾಪಕವಾಗಿ ವಿಶ್ವಾದ್ಯಂತ ಹರಡುತ್ತಿದೆ. ಹೀಗಾಗಿ ಎಲ್ಲಾ ಕ್ರಿಕೆಟಿಗರೂ ಕೂಡ ತಮ್ಮ ಮನೆಗಳಲ್ಲೇ ಕಾಲ ಕಳೆಯುತ್ತಿದ್ದಾರೆ. ಹೀಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಆಟಗಾರರು ಬ್ಯುಸಿಯಾಗಿದ್ದಾರೆ. ಆಸ್ಟ್ರೇಲಿಯಾದ ಸ್ಪೋಟಕ ಆಟಗಾರ ಡೇವಿಡ್ ವಾರ್ನರ್ ಈ ಸಂದರ್ಭದಲ್ಲಿ ಕುತೂಹಲಕಾರಿ ಹಳೆಯ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ.
ಐಪಿಎಲ್‌ನಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದ ನಾಯಕರಾಗಿರುವ ಡೇವಿಡ್ ವಾರ್ನರ್ ಟೀಮ್ ಇಂಡಿಯಾದ ಆಟಗಾರನೋರ್ವನ ಶೈಲಿಯನ್ನು ಅನುಕರಿಸುವ ಪ್ರಯತ್ನವನ್ನು ಮಾಡಿದ್ದಾರೆ. ಇದರ ವಿಡಿಯೋವನ್ನು ಡೇವಿಡ್ ವಾರ್ನರ್ ಹಂಚಿಕೊಂಡಿದ್ದಾರೆ.
ಯಸ್, ಡೇವಿಡ್ ವಾರ್ನರ್ ಅನುಕರಿಸಿದ್ದು ಟೀಮ್ ಇಂಡಿಯಾದ ರವೀಂದ್ರ ಜಡೇಜಾ ಅವರ ಶೈಲಿಯನ್ನು. ಐಪಿಎಲ್ ಸಂದರ್ಭದಲ್ಲಿ ಟಿವಿ ಜಾಹೀರಾತಿಗಾಗಿ ಡೇವಿಡ್ ವಾರ್ನರ್ ಈ ಪ್ರಯತ್ನವನ್ನು ಮಾಡಿದ್ದರು. ಹಳೇಯ ವಿಡಿಯೋವನ್ನು ಈಗ ಇನ್ಸ್ಟಾಗ್ರಾಮ್ ಮೂಲಕ ಹಂಚಿಕೊಂಡಿದ್ದಾರೆ ಡೇವಿಡ್ ವಾರ್ನರ್.
ಟೀಮ್ ಇಂಡಿಯಾದ ಆಲ್‌ರೌಂಡರ್ ಆಟಗಾರ ರವೀಂದ್ರ ಜಡೇಜಾ ಅರ್ಧಶತಕದ ಗಡಿ ಮುಟ್ಟಿದಾಗ ಬ್ಯಾಟನ್ನು ತಿರುಗಿಸಿ ಸಂಭ್ರಮಿಸುತ್ತಾರೆ. ಜಡೇಜಾ ಅವರ ಟ್ರೇಡ್‌ಮಾರ್ಕ್ ಆಗಿದೆ ಈ ಶೈಲಿ. ಈ ಶೈಲಿಯನ್ನು ಅನುಕರಿಸಿದ್ದಾರೆ ಆಸ್ಟ್ರೇಲಿಯಾದ ಸ್ಪೋಟಕ ಆಟಗಾರ ಡೇವಿಡ್ ವಾರ್ನರ್.
ಅಂದುಕೊಂಡಂತೆ ಆಗಿದ್ದರೆ ಈಗ ಈ ಬಾರಿಯ ಐಪಿಎಲ್ ನಡೆಯುತ್ತಿರಬೇಕಾಗಿತ್ತು. ಈ ಎಲ್ಲಾ ಆಟಗಾರರು ಈಗ ಐಪಿಎಲ್ ಕಣದಲ್ಲಿ ಕಾದಾಡುತ್ತಿದ್ದರು. ಆದರೆ ಕೊರೊನಾ ವೈರಸ್ ಕಾರಣಕ್ಕೆ ಈ ಬಾರಿಯ ಐಪಿಎಲ್ ಮೇಲೆ ತೂಗುಗತ್ತಿ ನೇತಾಡುತ್ತಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications