'ಡೇವಿಡ್ ವಾರ್ನರ್ ಶೇ.70ರಷ್ಟು ಭಾರತೀಯ, ಶೇ.30ರಷ್ಟು ಆಸ್ಟ್ರೇಲಿಯನ್'; ಕುತೂಹಲಕಾರಿ ಸಂಗತಿ ಬಿಚ್ಚಿಟ್ಟ್ ಯುವ ಬ್ಯಾಟರ್
ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಆಸ್ಟ್ರೇಲಿಯಾದ ಯುವ ಬ್ಯಾಟರ್ ಜೇಕ್ ಫ್ರೇಸರ್-ಮೆಕ್‌ಗುರ್ಕ್ ಅವರು ತಮ್ಮ ಸಹ ಆಟಗಾರ ಮತ್ತು ಆಸ್ಟ್ರೇಲಿಯಾ ತಂಡದ ಅನುಭವಿ ಆಟಗಾರ ಡೇವಿಡ್ ವಾರ್ನರ್ ಅವರೊಂದಿಗಿನ ಆತ್ಮೀಯ ಬಂಧವನ್ನು ಬಹಿರಂಗಪಡಿಸಿದರು.
ಅನುಭವಿ ಬ್ಯಾಟರ್ ಡೇವಿಡ್ ವಾರ್ನರ್ ಇದೀಗ ಆಸ್ಟ್ರೇಲಿಯನ್‌ಗಿಂತ ಭಾರತೀಯರಂತೆ ಹೇಗೆ ಕಾಣುತ್ತಾರೆ ಎಂಬುದನ್ನು ಜೇಕ್ ಫ್ರೇಸರ್-ಮೆಕ್‌ಗುರ್ಕ್ ಬಹಿರಂಗಪಡಿಸಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್ ತಂಡದ ಇತ್ತೀಚಿನ ಪಾಡ್‌ಕ್ಯಾಸ್ಟ್‌ನಲ್ಲಿ ಜೇಕ್ ಫ್ರೇಸರ್-ಮೆಕ್‌ಗುರ್ಕ್ ಮತ್ತು ಸಹ ಆಟಗಾರ ಟ್ರಿಸ್ಟಾನ್ ಸ್ಟಬ್ಸ್ ಅವರು 2024ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಆಡಿದ ಅನುಭವದ ಬಗ್ಗೆ ಮಾತನಾಡಿದರು. ಇದೇ ವೇಳೆ, ವಿಶೇಷವಾಗಿ ಡೇವಿಡ್ ವಾರ್ನರ್ ಅವರು ಹೇಗೆ ಆಕ್ರಮಣಕಾರಿ ಸ್ವಭಾವದಲ್ಲಿ ಆಡಲು ಸಹಾಯ ಮಾಡಿದ್ದಾರೆ ಎಂಬುದನ್ನು ತಿಳಿಸಿದರು.
22 ವರ್ಷದ ಜೇಕ್ ಫ್ರೇಸರ್-ಮೆಕ್‌ಗುರ್ಕ್ ಅವರು ಏಪ್ರಿಲ್ 12ರಂದು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಪದಾರ್ಪಣೆ ಮಾಡಿದರು. ತಮ್ಮ ಸ್ಫೋಟಕ ಬ್ಯಾಟಿಂಗ್ ಕೌಶಲ್ಯದಿಂದ ಐಪಿಎಲ್ 2024ರ ಆವೃತ್ತಿಯನ್ನು ಉತ್ತಮವಾಗಿ ಆರಂಭಿಸಿದರು. ಏಕೆಂದರೆ ಚೊಚ್ಚಲ ಪಂದ್ಯದಲ್ಲೇ 35 ಎಸೆತಗಳಲ್ಲಿ 55 ರನ್ ಗಳಿಸಿ ಪಂದ್ಯ-ವಿಜೇತ ಆಟವಾಡಿದರು.
ಆಸ್ಟ್ರೇಲಿಯಾದ ಯುವ ಆಟಗಾರ ಜೇಕ್ ಫ್ರೇಸರ್-ಮೆಕ್‌ಗುರ್ಕ್ ಅವರು ಡೆಲ್ಲಿ ಕ್ಯಾಪಿಟಲ್ಸ್‌ನ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಅವರೊಂದಿಗಿನ ಬಾಂಧವ್ಯದ ಬಗ್ಗೆ ಮಾತನಾಡಿದರು. "ಡೇವಿಡ್ ವಾರ್ನರ್ ನಾನು ಭೇಟಿಯಾದ ಅತ್ಯಂತ ನಿಸ್ವಾರ್ಥ ವ್ಯಕ್ತಿಗಳಲ್ಲಿ ಒಬ್ಬರು. ಆತ ಯಾವಾಗಲೂ ಎಲ್ಲರಿಗೂ ಸಮಯವನ್ನು ಕೊಡುತ್ತಾರೆ. ಅವರು ನಿಮಗೆ 24/7 ಸಹಾಯ ಮಾಡಲು ಬಯಸುತ್ತಾರೆ," ಎಂದರು.

"ಪ್ರತಿ ಹೋಟೆಲ್‌ನಲ್ಲಿ ವಾರ್ನರ್ ಯಾವಾಗಲೂ ನನ್ನಿಂದ ಎರಡು ಕೋಣೆಗಳ ಅಂತರದಲ್ಲಿ ಇರುತ್ತಾರೆ. ನಾನು ಅವರ ಕೋಣೆಗೆ ಹೋಗುತ್ತೇನೆ ಮತ್ತು ಪ್ರತಿದಿನ ಬೆಳಿಗ್ಗೆ ಕಾಫಿ ಕುಡಿಯುತ್ತೇನೆ," ಎಂದು ಜೇಕ್ ಫ್ರೆಸರ್-ಮೆಕ್‌ಗುರ್ಕ್ ಹೇಳಿದರು.
"ಡೇವಿಡ್ ವಾರ್ನರ್ ಆಸ್ಟ್ರೇಲಿಯನ್‌ಗಿಂತ ಹೆಚ್ಚು ಭಾರತೀಯನಾಗಿದ್ದಾನೆ. ಅದನ್ನೇ ನಾನು ಅವರಿಗೆ ಹೇಳುತ್ತೇನೆ. ನೀವು ಶೇ.70ರಷ್ಟು ಭಾರತೀಯ ಮತ್ತು ಶೇ.30ರಷ್ಟು ಆಸ್ಟ್ರೇಲಿಯನ್ ಆಗಿದ್ದಾರೆ ಎಂದು ನಾನು ಹೇಳುತ್ತೇನೆ," ಎಂದು ಜೇಕ್ ಫ್ರೆಸರ್-ಮೆಕ್‌ಗುರ್ಕ್ ತಿಳಿಸಿದರು.
14 ವರ್ಷಗಳ ಕಾಲ ಐಪಿಎಲ್‌ನಲ್ಲಿ ಆಡಿದ ನಂತರ, ಡೇವಿಡ್ ವಾರ್ನರ್ ಪಂದ್ಯಾವಳಿಯಲ್ಲಿ ಆಡಿದ ಅತ್ಯಂತ ಯಶಸ್ವಿ ಸಾಗರೋತ್ತರ ಬ್ಯಾಟರ್ ಆಗಿದ್ದಾರೆ. ಈ ಮೂಲಕ ಐಪಿಎಲ್ ಇತಿಹಾಸದಲ್ಲಿ ಮೂರನೇ ಅತಿ ಹೆಚ್ಚು ರನ್ ಗಳಿಸಿದವರ ಸ್ಥಾನವನ್ನು ಪಡೆದುಕೊಂಡಿದ್ದಾರೆ.

37 ವರ್ಷದ ಡೇವಿಡ್ ವಾರ್ನರ್ ತಮ್ಮ 183 ಐಪಿಎಲ್ ಪಂದ್ಯಗಳಲ್ಲಿ 6564 ರನ್ ಗಳಿಸಿದ್ದಾರೆ ಮತ್ತು 2016ರಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದ ನಾಯಕರಾಗಿ ಐಪಿಎಲ್ ಟ್ರೋಫಿಯನ್ನು ಗೆದ್ದಿದ್ದಾರೆ.
ಇನ್ನು ಜೇಕ್ ಫ್ರೇಸರ್-ಮೆಕ್‌ಗುರ್ಕ್ ತಮ್ಮ ಸ್ಫೋಟಕ ಬ್ಯಾಟಿಂಗ್‌ಗೆ ಹೆಸರುವಾಸಿಯಾಗಿದ್ದಾರೆ. ಏಪ್ರಿಲ್ 20ರಂದು ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ 18 ಎಸೆತಗಳಲ್ಲಿ 65 ರನ್ ಗಳಿಸುವ ಮೂಲಕ ಐಪಿಎಲ್ 2024ರಲ್ಲಿ ಕೇವಲ 15 ಎಸೆತಗಳಲ್ಲಿ ವೇಗದ ಅರ್ಧಶತಕ ಬಾರಿಸಿ ತಮ್ಮದೇ ಸ್ವಂತ ದಾಖಲೆಯನ್ನು ಸರಿಗಟ್ಟಿದರು. ನಂತರ ಏಪ್ರಿಲ್ 27ರಂದು ಮುಂಬೈ ಇಂಡಿಯನ್ಸ್ ವಿರುದ್ಧ 27 ಎಸೆತಗಳಲ್ಲಿ 84 ರನ್ ಗಳಿಸಿದರು.
ಮೇ 7ರಂದು ರಾಜಸ್ಥಾನ್ ರಾಯಲ್ಸ್ ವಿರುದ್ಧ ಮುಂಬರುವ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಿರ್ಣಾಯಕ ಪಂದ್ಯಕ್ಕಾಗಿ ಯುವ ಬ್ಯಾಟರ್ ಮತ್ತೊಮ್ಮೆ ಗಮನಹರಿಸಲಿದ್ದಾರೆ. ಆದರೆ ಡೇವಿಡ್ ವಾರ್ನರ್ ಅವರು ಆಡುವ 11ರ ಬಳಗದಲ್ಲಿ ಕಾಣಿಸಿಕೊಳ್ಳುವುದು ಅನುಮಾನವೆನಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications