ಬ್ರಿಸ್ಬೇನ್, ನ.08: ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಅವರು ಕ್ರಿಕೆಟ್ ದಿಗ್ಗಜರಾದ ಸುನಿಲ್ ಗವಾಸ್ಕರ್, ರಿಕಿ ಪಾಂಟಿಂಗ್ ಸಾಲಿಗೆ ಸೇರಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡಿ ತಂಡಕ್ಕೆ ಆಸರೆಯಾಗಿದ್ದಾರೆ.
ಎಡಗೈ ಆರಂಭಿಕ ಬ್ಯಾಟ್ಸ್ ಮನ್ ವಾರ್ನರ್ ಅವರು ಶನಿವಾರದಂದು ಟೆಸ್ಟ್ ಕ್ರಿಕೆಟ್ ನಲ್ಲಿ 14ನೇ ಶತಕ ಬಾರಿಸಿಮ್ ರಿಕಿ ಪಾಂಟಿಂಗ್ (ಆಸ್ಟ್ರೇಲಿಯಾ) ಹಾಗೂ ಸುನಿಲ್ ಗವಾಸ್ಕರ್ (ಭಾರತ) ಸಾಲಿಗೆ ಸೇರಿದರು.
ಕ್ರಿಕೆಟ್ ಇತಿಹಾಸದಲ್ಲೇ ಈ ಮೂವರು ಆಟಗಾರರು ಮಾತ್ರ ಸತತ ಎರಡು ಶತಕಗಳನ್ನು ಮೂರು ಬಾರಿ ಗಳಿಸಿದ ಸಾಧನೆ ಮಾಡಿದ್ದಾರೆ. ನವೆಂಬರ್ 5(ಗುರುವಾರ) ಗಬ್ಬಾದಲ್ಲಿ 163ರನ್ ಗಳಿಸಿದ್ದ ವಾರ್ನರ್ ಎರಡನೇ ಇನ್ನಿಂಗ್ಸ್ ನಲ್ಲಿ 113 ಎಸೆತಗಳಲ್ಲಿ 116ರನ್ ಗಳಿಸಿದರು.

ಇದಕ್ಕೂ ಮುನ್ನ ಅಕ್ಟೋಬರ್ 2014ರಲ್ಲಿ ದಕ್ಷಿಣ ಅಫ್ರಿಕಾ ಹಾಗೂ ಭಾರತ ವಿರುದ್ಧ ವಾರ್ನರ್ ಅವರು ಸತತವಾಗಿ ಶತಕ ಬಾರಿಸಿದ್ದರು. ದಕ್ಷಿಣ ಆಫ್ರಿಕಾ ವಿರುದ್ಧ 135 ಹಾಗೂ 145ರನ್ ಗಳಿಸಿದರು. ಭಾರತ ವಿರುದ್ಧ ಅಡಿಲೇಡ್ ನಲ್ಲಿ 145 ಹಾಗೂ 102ರನ್ ಗಳಿಸಿದರು.
ಗವಾಸ್ಕರ್ ಅವರು 1971 ಹಾಗೂ 1978ರಲ್ಲಿ, ರಿಕಿ ಪಾಂಟಿಂಗ್ ಅವರು 2005 ಹಾಗೂ 2006 ರಲ್ಲಿ ಈ ಸಾಧನೆ ಮಾಡಿದ್ದರು.
ಸುನಿಲ್ ಗವಾಸ್ಕರ್ (ಭಾರತ)
1. 124 ಹಾಗೂ 220 vs ವೆಸ್ಟ್ ಇಂಡೀಸ್, ಕ್ವೀನ್ ಪಾರ್ಕ್ ಒವಲ್, ಪೋರ್ಟ್ ಆಫ್ ಸ್ಪೇನ್ (ಏಪ್ರಿಲ್ 1971)- ಪಂದ್ಯ ಡ್ರಾ
2. 111 ಹಾಗೂ 137 vs ಪಾಕಿಸ್ತಾನ, ಕರಾಚಿ(ನವೆಂಬರ್ 1978)-ಪಂದ್ಯ ಡ್ರಾ.
3. 107 ಹಾಗೂ 182 ಅಜೇಯ vs ವೆಸ್ಟ್ ಇಂಡೀಸ್, ಈಡೆನ್ ಗಾರ್ಡನ್ಸ್, ಕೋಲ್ಕತ್ತಾ (ಡಿಸೆಂಬರ್ 1978)- ಭಾರತಕ್ಕೆ ಗೆಲುವು.ರಿಕಿ ಪಾಂಟಿಂಗ್ (ಆಸ್ಟ್ರೇಲಿಯಾ)
1.149 ಹಾಗೂ 104 ಅಜೇಯ vs ವೆಸ್ಟ್ ಇಂಡೀಸ್, ಗಬ್ಬಾ, ಬ್ರಿಸ್ಬೇನ್ (ನವೆಂಬರ್ 2005)-ಆಸ್ಟ್ರೇಲಿಯಾ ಗೆಲುವು.
2.120 ಹಾಗೂ 143 ಅಜೇಯ vs ದಕ್ಷಿಣ ಆಫ್ರಿಕಾ, ಸಿಡ್ನಿ ಕ್ರಿಕೆಟ್ ಮೈದಾನ, ಸಿಡ್ನಿ (ಜನವರಿ 2006)- ಆಸ್ಟ್ರೇಲಿಯಾ ಗೆಲುವು.
3. 103 ಹಾಗೂ 116 vs ದಕ್ಷಿಣ ಆಫ್ರಿಕಾ, ಕಿಂಗ್ಸ್ ಮೀಡ್, ಡರ್ಬನ್ (ಮಾರ್ಚ್ 2006), ಆಸ್ಟ್ರೇಲಿಯಾ ಗೆಲುವು.
ಡೇವಿಡ್ ವಾರ್ನರ್ (ಆಸ್ಟ್ರೇಲಿಯಾ)
1. 135 ಹಾಗೂ 145 vs ದಕ್ಷಿಣ ಆಫ್ರಿಕಾ, ನ್ಯೂಲ್ಯಾಂಡ್ಸ್, ಕೇಪ್ ಟೌನ್ (ಮಾರ್ಚ್ 2014)-ಆಸ್ಟ್ರೇಲಿಯಾಕ್ಕೆ ಗೆಲುವು
2. 145 ಮತ್ತು 102 vs ಭಾರತ, ಅಡಿಲೇಡ್ ಓವಲ್, ಅಡಿಲೇಡ್ (ಡಿಸೆಂಬರ್ 2014)- ಆಸ್ಟ್ರೇಲಿಯಾಕ್ಕೆ ಗೆಲುವು
3.163 ಮತ್ತು 116 vs ನ್ಯೂಜಿಲೆಂಡ್, ಗಬ್ಬಾ, ಬ್ರಿಸ್ಬೇನ್ (ನವೆಂಬರ್ 2015)
(ಒನ್ ಇಂಡಿಯಾ ಸುದ್ದಿ)