Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಅಭಿಮಾನಿಯ ಪ್ರಶ್ನೆಗೆ ಭಾವನಾತ್ಮಕವಾಗಿ ಪ್ರತಿಕ್ರಿಯಿಸಿದ ಡೇವಿಡ್ ವಾರ್ನರ್

David Warner leaves an emotional reply after fan says ‘No post by SRH about you’
ಅಭಿಮಾನಿಗೆ ಭಾವನಾತ್ಮಕ ಉತ್ತರ ಕೊಟ್ಟ ಡೇವಿಡ್ ವಾರ್ನರ್ | Oneindia Kannada

ನವದೆಹಲಿ: ಆಸ್ಟ್ರೇಲಿಯಾದ ಆರಂಭಿಕ ಬ್ಯಾಟ್ಸ್‌ಮನ್‌ ಡೇವಿಡ್ ವಾರ್ನರ್ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಾಗಿ ಸಕ್ರಿಯರಾಗಿರುತ್ತಾರೆ. ಭಾರತೀಯ ಹಾಡುಗಳಿಗೆ ನೃತ್ಯ, ಅಭಿನಯ ಮಾಡುತ್ತ ಭಾರತೀಯ ಅಭಿಮಾನಿಗಳನ್ನು ವಾರ್ನರ್ ಹೆಚ್ಚು ರಂಜಿಸುತ್ತಿರುತ್ತಾರೆ. ಆಗಾಗ ತಮ್ಮ ಕುಟುಂಬಸ್ಥರ ಫೋಟೋ, ವಿಡಿಯೋ ಕೂಡ ಶೇರ್ ಮಾಡುತ್ತಿರುತ್ತಾರೆ. ಹೀಗಾಗಿ ವಾರ್ನರ್‌ಗೆ ಆಸ್ಟ್ರೇಲಿಯಾದಲ್ಲಲ್ಲದೆ ಭಾರತದಲ್ಲೂ ಅಪಾರ ಸಂಖ್ಯೆಯ ಅಭಿಮಾನಿಗಳಿದ್ದಾರೆ.

ಇತ್ತೀಚೆಗೆ ಡೇವಿಡ್ ವಾರ್ನರ್ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸುದ್ದಿಯಲ್ಲಿದ್ದಾರೆ. ಕಾರಣ, ಇನ್‌ಸ್ಟಾಗ್ರಾಮ್‌ನಲ್ಲಿ ಭಾರತೀಯ ಅಭಿಮಾನಿಯೊಬ್ಬನ ಪ್ರಶ್ನೆಗೆ ಡೇವಿಡ್ ವಾರ್ನರ್ ಪ್ರತಿಕ್ರಿಯಿಸಿದ್ದಾರೆ. ವಾರ್ನರ್ ಅಭಿಮಾನಿಗಳನ್ನು ಎಷ್ಟು ಪ್ರೀತಿಸುತ್ತಾರೆ ಅನ್ನೋದಕ್ಕೆ ಈ ಪ್ರಕ್ರಿಯಿಯೆ ಸಾಕ್ಷಿ ಹೇಳುತ್ತಾದೆ.

ಏನದು ಪೋಸ್ಟ್?

ಡೇವಿಡ್ ವಾರ್ನರ್ ನಾಯಕರಾಗಿದ್ದ ಸನ್ ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ಜೂನ್ 25ರ ಶುಕ್ರವಾರ ಸಾಮಾಜಿಕ ಜಾಲತಾಣಗಳಲ್ಲಿ (ಟ್ವಿಟರ್, ಇನ್‌ಸ್ಟಾ) ಒಂದು ಪೋಸ್ಟ್‌ ಹಾಕಿಕೊಂಡಿತ್ತು. 'ನೀವು ಊಟ ಕದಿಯಲು ಹೋಗುತ್ತಿರುವಾಗ, ತಮ್ಮನ ಕೈಗೆ ಸಿಕ್ಕಿ ಬೀಳುತ್ತೀರಿ. ಯಾರು ಹೀಗೆ ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿ ಬಿದ್ದಿದ್ದಾರೆ ಅವರಿಗೆ ಟ್ಯಾಗ್ ಮಾಡಿ' ಎಂದು ಪೋಸ್ಟ್‌ನಲ್ಲಿ ಬರೆದುಕೊಳ್ಳಲಾಗಿತ್ತು. ಪೋಸ್ಟ್‌ನಲ್ಲಿದ್ದ ಚಿತ್ರದಲ್ಲಿ, ಊಟ ಕದಿಯಲು ಹೋಗುತ್ತಿದ್ದ ಖಲೀಲ್ ಅಹ್ಮದ್, ಪ್ರಿಯಂ ಗರ್ಗ್‌ಗೆ ಸಿಕ್ಕಿಬೀಳುತ್ತಿರುವ ಹಾಗೆ ಚಿತ್ರಣವಿತ್ತು.

ವಾರ್ನರ್ ಹೆಸರಿಸಿದ ಅಭಿಮಾನಿ

ವಾರ್ನರ್ ಹೆಸರಿಸಿದ ಅಭಿಮಾನಿ

2021ರ ಐಪಿಎಲ್ ಸೀಸನ್ ಆರಂಭದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ ಡೇವಿಡ್ ವಾರ್ನರ್ ನಾಯಕರಾಗಿದ್ದರು. ತಂಡ ಕಳಪೆ ಪ್ರದರ್ಶನ ನೀಡುತ್ತಿದ್ದರಿಂದ ವಾರ್ನರ್ ಕೆಳಗಿಳಿಸಿ ಕೇನ್ ವಿಲಿಯಮ್ಸನ್‌ಗೆ ತಂಡದ ನಾಯಕತ್ವದ ನೀಡಲಾಗಿದೆ. ಆದರೆ ಎಸ್‌ಆರ್‌ಎಚ್ ಸಾಮಾಜಿಕ ಜಾಲತಾಣದಲ್ಲಿ ಏನೇ ಪೋಸ್ಟ್‌ ಮಾಡಿದರೂ ಅಲ್ಲಿ ವಾರ್ನರ್ ನೆನಪಿಸಿ ಅಭಿಮಾನಿಗಳು ರಿಪ್ಲೇ ಮಾಡುತ್ತಿರುತ್ತಾರೆ. ಈ ಬಾರಿಯೂ ಎಸ್‌ಆರ್‌ಎಚ್ ಪೋಸ್ಟ್‌ನಲ್ಲಿ ವಾರ್ನರ್‌ ಹೆಸರು ಉಲ್ಲೇಖಿಸಿ ಅಭಿಮಾನಿಯೊಬ್ಬರು ಕಾಮೆಂಟ್ ಹಾಕಿದ್ದರು. ಅಚ್ಚರಿಯೆಂದರೆ ವಾರ್ನರ್ ಈ ಕಾಮೆಂಟ್‌ಗೆ ಪ್ರತಿಕ್ರಿಯಿಸಿದ್ದಾರೆ.

ವಾರ್ನರ್ ಭಾವನಾತ್ಮಕ ಕಾಮೆಂಟ್

ವಾರ್ನರ್ ಭಾವನಾತ್ಮಕ ಕಾಮೆಂಟ್

ವಾರ್ನರ್ ಹೆಸರು ಉಲ್ಲೇಖಿಸಿ ಏನಾದರೂ ಪ್ರಶ್ನೆ ಕೇಳಿದರೆ ಅದಕ್ಕೆ ವಾರ್ನರ್ ಉತ್ತರಿಸುತ್ತಾರೆ. ಹೀಗಾಗಿ ಭಾವುಕರಾದ ಅಭಿಮಾನಿಯೊಬ್ಬರು, 'ಇಲ್ಲಿ ನಿಮ್ಮ ಬಗ್ಗೆ ಪೋಸ್ಟ್‌ ಇಲ್ಲ. ಆದರೂ ನೀವು ನಮಗೆ ಪ್ರತಿಕ್ರಿಯಿಸುತ್ತೀರಿ' ಎಂದು ಬರೆದುಕೊಂಡಿದ್ದರು. ಇದಕ್ಕೂ ಉತ್ತರಿಸಿರುವ ವಾರ್ನರ್, 'ಹ ಹ್ಹ, ಖಂಡಿತಾ ಇಲ್ಲಿ ನನ್ನ ಬಗ್ಗೆ ಪೋಸ್ಟ್‌ ಇಲ್ಲ. ಆದರೆ ನಾನು ಯಾವಾಗಲೂ ಅಭಿಮಾನಿಗಳಿಗೆ ಪ್ರತಿಕ್ರಿಯಿಸುತ್ತೇನೆ. ಈ ಸೀಸನ್‌ ಆರಂಭದಲ್ಲಿ ರಾಶಿ ರಾಶಿ ಪ್ರತಿಕ್ರಿಯೆ ನೀಡುತ್ತಿದ್ದೆ' ಎಂದು ಬರೆದುಕೊಂಡಿದ್ದಾರೆ.

Story first published: Monday, June 28, 2021, 18:35 [IST]
Other articles published on Jun 28, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+