For Quick Alerts
ALLOW NOTIFICATIONS  
For Daily Alerts
 

David Warner: 132 ವರ್ಷಗಳ ಇತಿಹಾಸದಲ್ಲಿ ಪ್ರಥಮ ದರ್ಜೆ ಆಡದೆ ರಾಷ್ಟ್ರೀಯ ತಂಡದಲ್ಲಿ ಆಡಿದ್ದ ಸೂಪರ್ ಸ್ಟಾರ್ ಡೇವಿಡ್ ವಾರ್ನರ್

ಡೇವಿಡ್ ವಾರ್ನರ್ 11 ಜನವರಿ 2009 ರಂದು ತಮ್ಮ ಅಂತಾರಾಷ್ಟ್ರೀಯ ಚೊಚ್ಚಲ ಪಂದ್ಯವನ್ನು ಆಡಿದ್ದರು. ಅವರು ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಆಡುವ ಅವಕಾಶವನ್ನು ಪಡೆದಿದ್ದರು. ಡೇವಿಡ್ ವಾರ್ನರ್ ಬಗ್ಗೆ ಕುತೂಹಲ ಕಾರಿ ಸಂಗತಿ ಒಂದು ಬಹಿರಂಗವಾಗಿದೆ.

ಆಸ್ಟ್ರೇಲಿಯಾ ರಾಷ್ಟ್ರೀಯ ತಂಡದಲ್ಲಿ ಈಗ ಡೇವಿಡ್ ವಾರ್ನರ್ ಸೂಪರ್ ಸ್ಟಾರ್‌. ಆದರೆ 11 ಜನವರಿ 2009 ಅಂದು ಇವರ ಆಟದ ಬಗ್ಗೆ ಅಷ್ಟಾಗಿ ಯಾರಿಗೂ ಅರಿವಿರಲಿಲ್ಲ. ಅದಕ್ಕೆ ಕಾರಣವೂ ಒಂದಿತ್ತು. ಡೇವಿಡ್ ವಾರ್ನರ್‌ ಬ್ಯಾಟ್‌ ಹಿಡಿದು ದೇಶೀಯ ಟೂರ್ನಿಗಳಲ್ಲಿ ಆಡದೇ, ಯೆಲ್ಲೋ ಜೆರ್ಸಿ ತೊಟ್ಟಿದ್ದರು.

David Warner Made a place in the Australian team without playing first class cricket

ವಾರ್ನರ್ ಪ್ರಥಮ ದರ್ಜೆ ಕ್ರಿಕೆಟ್ ಆಡದೆ ಆಸ್ಟ್ರೇಲಿಯಾದ ರಾಷ್ಟ್ರೀಯ ತಂಡವನ್ನು ಪ್ರವೇಶಿಸಿದ್ದರು. ಆಸ್ಟ್ರೇಲಿಯನ್ ಕ್ರಿಕೆಟ್‌ನ 132 ವರ್ಷಗಳ ಇತಿಹಾಸದಲ್ಲಿ ಪ್ರಥಮ ದರ್ಜೆ ಕ್ರಿಕೆಟ್ ಅನುಭವವಿಲ್ಲದೆ ಆಟಗಾರನೊಬ್ಬ ರಾಷ್ಟ್ರೀಯ ತಂಡವನ್ನು ಸೇರುತ್ತಿರುವುದು ಇದೇ ಮೊದಲು.

ಡೇವಿಡ್ ವಾರ್ನರ್ ತಮ್ಮ 23ನೇ ವಯಸ್ಸಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. ತಮ್ಮ ಮೊದಲ ಪಂದ್ಯದಲ್ಲೇ ಅವರು ಆಡಿದಂತಹ ಇನ್ನಿಂಗ್ಸ್ ಕ್ರಿಕೆಟ್ ಲೋಕದಲ್ಲಿ ಸಂಚಲನ ಮೂಡಿಸಿತ್ತು. ಚೊಚ್ಚಲ ಪಂದ್ಯದಲ್ಲಿ ವಾರ್ನರ್ 43 ಎಸೆತಗಳಲ್ಲಿ 89 ರನ್ ಗಳಿಸಿದರು. ಇವರ ಬಿರುಸಿನ ಬ್ಯಾಟಿಂಗ್‌ ನೋಡಿದ ಅಭಿಮನಿಗಳು ಕ್ಲೀನ್ ಬೋಲ್ಡ್ ಆದರು.

ವಾರ್ನರ್ ಆ ಅಮೋಘ ಇನ್ನಿಂಗ್ಸ್‌ನ್ಲಿ 6 ಸಿಕ್ಸರ್ ಮತ್ತು 7 ಬೌಂಡರಿಗಳು ಸೇರಿವೆ. ಅವರು ತಮ್ಮ ಚೊಚ್ಚಲ ಪಂದ್ಯದಲ್ಲೇ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಪಡೆದು ಬೀಗಿದ್ದರು. ಟಿ20ಯಲ್ಲಿನ ಈ ಸ್ಫೋಟಕ ಇನ್ನಿಂಗ್ಸ್ ಶೀಘ್ರದಲ್ಲೇ ಏಕದಿನ ತಂಡದಲ್ಲಿಯೂ ಸ್ಥಾನ ಪಡೆಯುವಂತೆ ಮಾಡಿತು. ಏಳು ದಿನಗಳ ನಂತರ ಅವರಿಗೆ ಏಕದಿನಕ್ಕೆ ತಂಡಕ್ಕೆ ಪದಾರ್ಪಣೆ ಮಾಡುವ ಅವಕಾಶ ಸಿಕ್ಕಿತು.

David Warner Made a place in the Australian team without playing first class cricket

ಡೇವಿಡ್ ವಾರ್ನರ್ ಅವರು ಅಂತಾರಾಷ್ಟ್ರೀಯ ಚೊಚ್ಚಲ ಪ್ರವೇಶದ ಎರಡು ತಿಂಗಳ ಬಳಿಕ ಮೊದಲ ಬಾರಿಗೆ ಪ್ರಥಮ ದರ್ಜೆ ಕ್ರಿಕೆಟ್ ಆಡಿದರು. ಅಮೋಘ ಆಟವಾಡಿದ ಡೇವಿಡ್ ವಾರ್ನರ್, ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಲು ಸ್ವಲ್ಪ ಸಮಯ ತೆಗೆದುಕೊಂಡರು. ಆದರೆ ಒಮ್ಮೆ ಅವರು ಆಸ್ಟ್ರೇಲಿಯನ್ ತಂಡಕ್ಕೆ ಬಂದ ನಂತರ ಅವರು ಹಿಂತಿರುಗಿ ನೋಡಲಿಲ್ಲ.

ಬೆಸ್ಟ್‌ ಟೆಸ್ಟ್ ಓಪನರ್

ಡೇವಿಡ್ ವಾರ್ನರ್ ಟೆಸ್ಟ್ ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯಾದ ಅತ್ಯುತ್ತಮ ಆರಂಭಿಕ ಆಟಗಾರ ಎಂದು ಸಾಬೀತುಪಡಿಸಿದರು. ಅವರ ಅಂಕಿಅಂಶಗಳನ್ನು ಗಮನಿಸಿದರೆ, ಅವರು ಆಸ್ಟ್ರೇಲಿಯಾ ಪರ ಟೆಸ್ಟ್‌ಗೆ ಪದಾರ್ಪಣೆ ಮಾಡಿದ ನಂತರ, ಕ್ರಿಕೆಟ್ ಜಗತ್ತಿನಲ್ಲಿ ಅವರ ಸರಿಸಮಾನವಾದ ಟೆಸ್ಟ್ ಓಪನರ್ ಇರಲಿಲ್ಲ ಎಂಬುದು ನಮಗೆ ತಿಳಿಯುತ್ತದೆ. ಅವರು ಕಳೆದ 13 ವರ್ಷಗಳಲ್ಲಿ ಇತರ ಬೇರೆ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಬಾರಿಸಲು ಸಾಧ್ಯವಾಗದಷ್ಟು ಶತಕಗಳನ್ನು ಓಪನರ್‌ ಆಗಿ ಬಾರಿಸಿದ್ದಾರೆ.

ಡೇವಿಡ್ ವಾರ್ನರ್ ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ ಒಟ್ಟು 111 ಪಂದ್ಯಗಳನ್ನು ಆಡಿದ್ದಾರೆ. ಇಲ್ಲಿ ಅವರು 44.58 ಬ್ಯಾಟಿಂಗ್ ಸರಾಸರಿಯೊಂದಿಗೆ ಒಟ್ಟು 8695 ರನ್ ಗಳಿಸಿದ್ದಾರೆ. ಈ ಅವಧಿಯಲ್ಲಿ ಅವರು 26 ಶತಕಗಳು ಮತ್ತು 36 ಅರ್ಧ ಶತಕಗಳನ್ನು ಸಿಡಿಸಿದ್ದಾರೆ. ಅಲ್ಲದೆ ಟೆಸ್ಟ್ ಕ್ರಿಕೆಟ್‌ನಲ್ಲಿ ತ್ರಿಶತಕವನ್ನೂ ಗಳಿಸಿದ್ದಾರೆ. ಅವರ ಗರಿಷ್ಠ ಸ್ಕೋರ್ 335 ರನ್.

David Warner Made a place in the Australian team without playing first class cricket

ವಾರ್ನರ್ ಏಕದಿನ ಮತ್ತು ಟಿ20ಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ವಾರ್ನರ್ 161 ODIಗಳಲ್ಲಿ 45.30 ಸರಾಸರಿಯಲ್ಲಿ 6932 ರನ್ ಮತ್ತು 99 T20 ಪಂದ್ಯಗಳಲ್ಲಿ 32.88 ಸರಾಸರಿಯಲ್ಲಿ 2894 ರನ್ ಗಳಿಸಿದ್ದಾರೆ.

Story first published: Tuesday, January 2, 2024, 21:05 [IST]
Other articles published on Jan 2, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+