Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

100 ಶೇ. ಫಿಟ್ ಇಲ್ಲದಿದ್ರೂ ಸಿಡ್ನಿಯಲ್ಲಿ ವಾರ್ನರ್ ಆಡ್ತಾರೆ: ಮೆಕ್‌ಡೊನಾಲ್ಡ್

David Warner may play in Sydney even if he’s not 100% fit, says McDonald

ಸಿಡ್ನಿ: ದ್ವಿತೀಯ ಟೆಸ್ಟ್‌ನಲ್ಲಿ ಭಾರತದೆದುರು ಗೆಲುವಿಗಾಗಿ ಪರದಾಡಿ ಸೋತಿದ್ದ ಆಸ್ಟ್ರೇಲಿಯಾ, ತೃತೀಯ ಟೆಸ್ಟ್‌ನಲ್ಲಿ ಶತಾಯ ಗತಾಯ ಗೆದ್ದು ಸರಣಿ ಗೆಲುವನ್ನು ಸುಲಭವಾಗಿಸುವಲ್ಲಿ ಕಣ್ಣಿಟ್ಟಿದೆ. ಹೀಗಾಗಿ ಆಸೀಸ್ ಪ್ರಮುಖ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ ಸಂಪೂರ್ಣ ಫಿಟ್ ಇಲ್ಲದಿದ್ದರೂ ಮೂರನೇ ಟೆಸ್ಟ್‌ನಲ್ಲಿ ಆಡಲಿದ್ದಾರೆ ಎನ್ನಲಾಗುತ್ತಿದೆ.

ತೊಡೆ ಭಾಗದ ಸ್ನಾಯುಗಳ ನೋವಿಗೆ ತುತ್ತಾಗಿರುವ ಡೇವಿಡ್ ವಾರ್ನರ್, ಆರಂಭಿಕ ಎರಡೂ ಟೆಸ್ಟ್‌ ಪಂದ್ಯಗಳಿಂದ ಹೊರಗಿದ್ದರು. ಇತ್ತ ಮತ್ತೊಬ್ಬ ಬ್ಯಾಟ್ಸ್‌ಮನ್‌ ಸ್ಟೀವ್ ಸ್ಮಿತ್ ಕೂಡ ಫಾರ್ಮ್‌ನಲ್ಲಿಲ್ಲ. ಹೀಗಾಗಿ ಡೇವಿಡ್ ವಾರ್ನರ್ ಸಂಪೂರ್ಣವಾಗಿ ಫಿಟ್ ಇಲ್ಲದಿದ್ದರೂ ಆಡಿಸುವ ಯೋಚನೆಯಲ್ಲಿ ಆಸ್ಟ್ರೇಲಿಯಾ ಇದೆ.

'ಅದು ನಿಜ. ಸ್ಪಷ್ಟ ಆಯ್ಕೆಯದು. ಗಾಯದಿಂದ ಚೇತರಿಸಿಕೊಂಡಿರುವ ಡೇವಿಡ್ ವಾರ್ನರ್ 100 ಶೇ. ಫಿಟ್ ಇಲ್ಲದಿರಬಹುದು. ಆದರೆ ಅವರು ಆಡುತ್ತಾರೋ ಇಲ್ಲವೋ ಅನ್ನೋದನ್ನು ಈಗಲೇ ಹೇಳುವಂತಿಲ್ಲ,' ಎಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮೆಕ್‌ಡೊನಾಲ್ಡ್ ಹೇಳಿದ್ದಾರೆ.

'ನೋಡಿ, ವಾರ್ನರ್ 90-95% ಫಿಟ್ ಆಗಿದ್ದರೂ ಅವರು ರಾಷ್ಟ್ರೀಯ ತಂಡ ಪರ ಆಡಲು ಸಾಕಷ್ಟು ಫಿಟ್‌ ಆಗಿದ್ದಂತೆ. ಈ ಕುರಿತು ವಾರ್ನರ್ ತನ್ನ ಕೋಚ್ ಮತ್ತು ತಂಡದ ಜೊತೆ ಮಾತನಾಡಿರುತ್ತಾರೆ ಎಂದು ನನಗೆ ನಂಬಿಕೆಯಿದೆ,' ಎಂದು ಮೆಕ್‌ಡೊನಾಲ್ಡ್ ತಿಳಿಸಿದ್ದಾರೆ. ತೃತೀಯ ಟೆಸ್ಟ್ ಜನವರಿ 7ರಂದು ಸಿಡ್ನಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಆರಂಭವಾಗಲಿದೆ.

Story first published: Thursday, December 31, 2020, 18:40 [IST]
Other articles published on Dec 31, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+