Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

David Warner: ನಿವೃತ್ತಿ ಬಳಿಕ ಡೇವಿಡ್ ವಾರ್ನರ್ ದೊಡ್ಡ ಸಂದೇಶ; ಐಸಿಸಿ ಟೂರ್ನಮೆಂಟ್ ಆಡ್ತಾರಾ?

ಜುಲೈ 9 ಮಂಗಳವಾರ, 2023ರ ಐಸಿಸಿ ಏಕದಿನ ವಿಶ್ವಕಪ್‌ ಮತ್ತು ಟೆಸ್ಟ್‌ ವಿಶ್ವ ಚಾಂಪಿಯನ್‌ಶಿಪ್‌ಗಳನ್ನು ಆಸ್ಟ್ರೇಲಿಯಾ ಗೆದ್ದಿತ್ತು. ಈ ಗೆಲುವಿನ ನಂತರ ಕಾಂಗೂರು ಪಡೆಯ ಎಡಗೈ ಆರಂಭಿಕ ಸ್ಪೋಟಕ ಬ್ಯಾಟರ್‌ ಡೇವಿಡ್‌ ವಾರ್ನರ್‌ ಏಕದಿನ ಮತ್ತು ಟೆಸ್ಟ್‌ ಮಾದರಿ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು.

ಅಮೆರಿಕ ಮತ್ತು ವೆಸ್ಟ್‌ ಇಂಡೀಸ್‌ ಆತಿಥ್ಯದಲ್ಲಿ ನಡೆದ 2024ರ ಟಿ20 ವಿಶ್ವಕಪ್‌ ಬಳಿಕ ಚುಟುಕು ಕ್ರಿಕೆಟ್‌ಗೂ ನಿವೃತ್ತಿ ಘೋಷಿಸುವುದಾಗಿ ವಾರ್ನರ್‌ ತಿಳಿಸಿದ್ದರು. ಇನ್ನೊಂದೆಡೆ ಮಿಚೆಲ್‌ ಮಾರ್ಷ್‌ ನಾಯಕತ್ವದ ಆಸ್ಟ್ರೇಲಿಯಾ ತಂಡ ಟಿ20 ವಿಶ್ವಕಪ್‌ ಸೂಪರ್‌-8 ರಲ್ಲೇ ಟೂರ್ನಿಯಿಂದ ಹೊರಗುಳಿದಿತ್ತು. ಹೀಗಾಗಿ ವಾರ್ನರ್‌ ಅವರ ಟ್ರೋಫಿ ಗೆದ್ದು ವಿದಾಯ ಹೇಳುವ ಕನಸು ನುಚ್ಚು ನೂರಾಗಿತ್ತು.

David Warner message after retiring from international cricket

ಇದೀಗ ವಾರ್ನರ್ ನಿವೃತ್ತಿಯ ನಂತರ ಅಭಿಮಾನಿಗಳಿಗೆ ದೊಡ್ಡ ಸಂದೇಶವನ್ನು ನೀಡಿದ್ದಾರೆ. ಡೇವಿಡ್ ವಾರ್ನರ್ ಎಲ್ಲಾ ಮಾದರಿ ಕ್ರಿಕೆಟ್‌ಗೆ ವಿದಾಯ ಹೇಳಿದ ನಂತರ, ಅವರು ಕ್ರಿಕೆಟ್‌ ಆಡುವುದಿಲ್ಲ ಎಂಬ ಊಹಾಪೋಹಗಳು ಇದ್ದವು. ಆದರೆ ಅಭಿಮಾನಿಗಳ ಗೊಂದಲಕ್ಕೆ ವಾರ್ನರ್‌ ತೆರೆ ಎಳೆದಿದ್ದಾರೆ.

ವಾರ್ನರ್ ಚಾಂಪಿಯನ್ಸ್ ಟ್ರೋಫಿ ಆಡ್ತಾರಾ?

ಡೇವಿಡ್ ವಾರ್ನರ್ ತಮ್ಮ ವೃತ್ತಿಜೀವನದ ಬಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. 'ಅಧ್ಯಾಯ ಕೊನೆಗೊಳ್ಳುತ್ತದೆ!! ಇಷ್ಟು ದಿನ ಈ ಮಟ್ಟದಲ್ಲಿ ಆಡಿದ್ದು ಅದ್ಭುತ ಅನುಭವ. ಆಸ್ಟ್ರೇಲಿಯಾ ನನ್ನ ತಂಡವಾಗಿತ್ತು. ನನ್ನ ವೃತ್ತಿಜೀವನದ ಬಹುಪಾಲು ಅಂತರರಾಷ್ಟ್ರೀಯ ಮಟ್ಟದಲ್ಲಿದೆ.

ಇದನ್ನು ಮಾಡಲು ಸಾಧ್ಯವಾಗಿರುವುದು ಗೌರವದ ಸಂಗತಿ. ಎಲ್ಲಾ ಸ್ವರೂಪಗಳಲ್ಲಿ 100ಕ್ಕೂ ಹೆಚ್ಚು ಪಂದ್ಯಗಳನ್ನು ಆಡಿರುವುದು ನನ್ನ ಹೈಲೈಟ್ ಆಗಿದೆ. ಇದನ್ನು ಸಾಧ್ಯವಾಗಿಸಿದ ಎಲ್ಲರಿಗೂ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ತುಂಬಾ ತ್ಯಾಗ ಮಾಡಿದ ನನ್ನ ಹೆಂಡತಿ ಮತ್ತು ನನ್ನ ಹೆಣ್ಣುಮಕ್ಕಳಿಗೆ, ನಿಮ್ಮೆಲ್ಲರ ಬೆಂಬಲಕ್ಕೆ ಧನ್ಯವಾದಗಳು ಎಮದು ಬರೆದುಕೊಂಡಿದ್ದಾರೆ.

ಮುಂದುವರೆದಂತೆ ವಾರ್ನರ್‌ ಅವರು ತಾವು ಮತ್ತೆ ಐಸಿಸಿ ಟೂರ್ನಮೆಂಟ್‌ ಆಡುವ ಬಯಕೆ ವ್ಯಕ್ತಪಡಿಸಿದ್ದಾರೆ. 'ನಾವು ಏನನ್ನು ಅನುಭವಿಸಿದ್ದೇವೆಂದು ಯಾರಿಗೂ ತಿಳಿದಿರುವುದಿಲ್ಲ. ಎಲ್ಲಾ ಕ್ರಿಕೆಟ್ ಅಭಿಮಾನಿಗಳನ್ನು ನಾನು ರಂಜಿಸಿದೆ ಮತ್ತು ಕ್ರಿಕೆಟ್ ಅನ್ನು ಬದಲಾಯಿಸಿದ್ದೇನೆ ಎಂದು ನಾನು ಭಾವಿಸುತ್ತೇನೆ.

ಅದರಲ್ಲೂ ಟೆಸ್ಟ್ ಕ್ರಿಕೆಟ್‌ನಲ್ಲಿ ನಾವು ಇತರರಿಗಿಂತ ಸ್ವಲ್ಪ ವೇಗವಾಗಿ ರನ್ ಗಳಿಸಬಹುದು. ಅಭಿಮಾನಿಗಳಿಲ್ಲದೆ ನಾವು ಇಷ್ಟಪಡುವದನ್ನು ಮಾಡಲು ಸಾಧ್ಯವಿಲ್ಲ, ಆದ್ದರಿಂದ ಧನ್ಯವಾದಗಳು. ನಾನು ಫ್ರಾಂಚೈಸಿ ಕ್ರಿಕೆಟ್‌ನಲ್ಲಿ ಸ್ವಲ್ಪ ಸಮಯ ಆಡುವುದನ್ನು ಮುಂದುವರಿಸುತ್ತೇನೆ ಮತ್ತು ನಾನು ತಂಡಕ್ಕೆ ಆಯ್ಕೆಯಾದರೆ ಚಾಂಪಿಯನ್ಸ್ ಟ್ರೋಫಿಯಲ್ಲಿ ಆಸ್ಟ್ರೇಲಿಯಾ ಪರ ಆಡಲು ಸಹ ಸಿದ್ಧನಿದ್ದೇನೆ.

ಆಟಗಾರರು ಮತ್ತು ಸಿಬ್ಬಂದಿಗೆ, ನನ್ನನ್ನು ಬೆಂಬಲಿಸಿದ್ದಕ್ಕಾಗಿ ಧನ್ಯವಾದಗಳು.ಕಳೆದ ಕೆಲವು ವರ್ಷಗಳಿಂದ ಈ ತಂಡವು ನಂಬಲಾಗದ ಯಶಸ್ಸನ್ನು ಸಾಧಿಸಿದ್ದು, ಇದು ದೀರ್ಘಕಾಲ ಮುಂದುವರಿಯಲಿ. ಪ್ಯಾಟ್ ಕಮಿನ್ಸ್, ಆಂಡ್ರ್ಯೂ ಓಲ್ಡ್ ಮ್ಯಾಕ್ ಮತ್ತು ಸಿಬ್ಬಂದಿ ಇದನ್ನು ಸಾಧಿಸಿದ್ದಾರೆ ಎಂದು ಮುಂಬರುವ ಚಾಂಪಿಯನ್ಸ್‌ ಟ್ರೋಫಿ ಆಡುತ್ತೇನೆ ಎಂದು ವಾರ್ನರ್‌ ಪರೋಕ್ಷವಾಗಿ ಹೇಳಿದ್ದಾರೆ.

Story first published: Tuesday, July 9, 2024, 8:14 [IST]
Other articles published on Jul 9, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+