For Quick Alerts
ALLOW NOTIFICATIONS  
For Daily Alerts
 

ಕೇನ್ ವಿಲಿಯಮ್ಸನ್ ಜೊತೆಗಿನ ಚಿತ್ರ ಹಾಕಿ 'ಮಿಸ್ಡ್ ಯು ಬ್ರೋ' ಎಂದ ವಾರ್ನರ್; ರಶೀದ್ ಖಾನ್ ರಿಪ್ಲೇ ಏನು?

ಆಸ್ಟ್ರೇಲಿಯದ ಓಪನರ್ ಬ್ಯಾಟ್ಸ್‌ಮನ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್‌ನ ಸ್ಫೋಟಕ ಆಟಗಾರ ಡೇವಿಡ್ ವಾರ್ನರ್ ಗುರುವಾರದ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದರು.

ವಾರ್ನರ್ ಭರ್ಜರಿ ಫಾರ್ಮ್‌ನಿಂದ ಅಜೇಯ 92 ರನ್ ಗಳಿಸಿ ಡೆಲ್ಲಿ ಕ್ಯಾಪಿಟಲ್ಸ್ ಅನ್ನು ತಮ್ಮ ಹಳೆಯ ಫ್ರಾಂಚೈಸ್ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ 207 ರನ್‌ಗಳ ರನ್ ಪರ್ವತ ನಿರ್ಮಿಸಲು ಸಹಕಾರಿಯಾದರು. ಸನ್‌ರೈಸರ್ಸ್ ಹೈದರಾಬಾದ್ ಅನ್ನು ಸೋಲಿಸಲು ಡೆಲ್ಲಿ ಕ್ಯಾಪಿಟಲ್ಸ್‌ಗೆ ಈ ದೊಡ್ಡ ಸ್ಕೋರ್ ಸಾಕಾಗಿತ್ತು ಮತ್ತು ಇದರ ಪರಿಣಾಮವಾಗಿ ಐಪಿಎಲ್ 2022ರ ಪ್ಲೇಆಫ್‌ಗೇರುವ ಕನಸನ್ನು ಜೀವಂತವಾಗಿರಿಸಿಕೊಂಡಿತು.

David Warner Post Photo With Kane Williamson In Instagram And Says I Missed You Bro

ಡೇವಿಡ್ ವಾರ್ನರ್ ಕಳೆದ ಋತುವಿನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಪರವಾಗಿ ಆಡಿದ್ದರು. ಆದರೆ ಅಲ್ಲಿ ಅವರ ಫಾರ್ಮ್ ಮತ್ತು ಫ್ರಾಂಚೈಸಿಯೊಂದಿಗೆ ಮುನಿಸು ಹೊಂದಿದ್ದರು. ಹೀಗಾಗಿ ಹಳೆಯ ಫ್ರಾಂಚೈಸಿ ವಿರುದ್ಧ ಆಡುತ್ತಿದ್ದರಿಂದ ಪಂದ್ಯವನ್ನು "ಸೇಡು ತೀರಿಸಿಕೊಳ್ಳುವ ಹೋರಾಟ' ಎಂದೇ ಬಿತ್ತರಿಸಲಾಗಿತ್ತು.

ಡೇವಿಡ್ ವಾರ್ನರ್ ಅವರ ಬ್ಯಾಟ್‌ನಿಂದ ನಿರೀಕ್ಷೆಯಂತೆ 12 ಬೌಂಡರಿಗಳು ಮತ್ತು 3 ಸಿಕ್ಸರ್‌ಗಳನ್ನು ಸಿಡಿಸಿದವು ಮತ್ತು ಇನ್ನೊಬ್ಬ ಬಿಗ್-ಹಿಟ್ಟಿರ್ ರೋವ್‌ಮನ್ ಪೊವೆಲ್ ಅವರ ಜೊತೆಗೂಡಿ ಮನಮಿಡಿಯುವ ಅರ್ಧಶತಕವನ್ನು ಸಿಡಿಸುವ ಮೂಲಕ ತಮ್ಮ ಅತ್ಯುತ್ತಮ ಫಾರ್ಮ್ ಅನ್ನು ಕಾಯ್ದುಕೊಂಡರು.

ವಾರ್ನರ್ ಅವರು ಸನ್‌ರೈಸರ್ಸ್ ಹೈದರಾಬಾದ್ ತಂಡದಲ್ಲಿದ್ದಾಗ ಅಹಿತಕರ ಅಂತ್ಯವನ್ನು ಹೊಂದಿರಬಹುದು, ಆದರೆ ಅವರು ಹಳೆಯ ತಂಡದ ಸಹ ಆಟಗಾರರೊಂದಿಗೆ ಕಳೆದ ನೆಚ್ಚಿನ ನೆನಪುಗಳನ್ನು ಹೊಂದಿದ್ದಾರೆ. ನಾಯಕ ಕೇನ್ ವಿಲಿಯಮ್ಸನ್ ಎಸ್‌ಆರ್‌ಎಚ್ ಶಿಬಿರದ ಅವರ ಅತ್ಯುತ್ತಮ ಸ್ನೇಹಿತರಲ್ಲೊಬ್ಬರಾಗಿದ್ದರು.

ಡೇವಿಡ್ ವಾರ್ನರ್ Instagramನಲ್ಲಿ ಕೇನ್ ವಿಲಿಯಮ್ಸನ್ ಅವರೊಂದಿಗಿನ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ ಮತ್ತು "ನಾನು ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಬ್ರೋ.. ಎಂಬ ಶೀರ್ಷಿಕೆ ಬರೆದು ಕೇನ್ ವಿಲಿಯಮ್ಸನ್ ಅವರನ್ನು ಟ್ಯಾಗ್ ಮಾಡಿದ್ದಾರೆ.

David Warner Post Photo With Kane Williamson In Instagram And Says I Missed You Bro

ಈ ಪೋಸ್ಟ್ ಅನ್ನು ಲಕ್ಷಗಟ್ಟಲೆ ಅಭಿಮಾನಿಗಳು ಇಷ್ಟಪಟ್ಟಿದ್ದಾರೆ ಮತ್ತು ಈ ಜೋಡಿಯ ಹಿಂದಿನ ಸಹ ಆಟಗಾರರಾದ ಸಿದ್ದಾರ್ಥ್ ಕೌಲ್ ಮತ್ತು ಶ್ರೀವತ್ಸ್ ಗೋಸ್ವಾಮಿ ಅವರೂ ಸಹ ಫೋಟೋಗೆ ಕಾಮೆಂಟ್ ಮಾಡಿದ್ದಾರೆ.

ಪ್ರಸ್ತುತ ಗುಜರಾತ್ ಟೈಟನ್ಸ್ ಪರ ಆಡುತ್ತಿರುವ ಮಾಜಿ ಎಸ್‌ಆರ್‌ಎಚ್ ಜೊತೆಗಾರ ರಶೀದ್ ಖಾನ್ ಸಹ ಫೋಟೋಗೆ "ಮೀ ಟೂ" ಎಂದು ಕಾಮೆಂಟ್ ಮಾಡಿದ್ದಾರೆ.

ಡೇವಿಡ್ ವಾರ್ನರ್ ಎಸ್‌ಆರ್‌ಎಚ್‌ನಿಂದ ಹೊರಬರಲು ನಿರ್ಧರಿಸಿದಾಗ, ಫ್ರಾಂಚೈಸಿ ರಶೀದ್ ಖಾನ್ ಅವರನ್ನೂ ಸಹ ಉಳಿಸಿಕೊಳ್ಳದಿರಲು ನಿರ್ಧರಿಸಿತು. ಬದಲಿಗೆ ವಿಲಿಯಮ್ಸನ್, ಉಮ್ರಾನ್ ಮಲಿಕ್ ಮತ್ತು ಅಬ್ದುಲ್ ಸಮದ್ ಅವರಂತಹ ಆಟಗಾರರನ್ನು ಉಳಿಸಿಕೊಳ್ಳಲು ಆಯ್ಕೆ ಮಾಡಿಕೊಂಡಿತು.

ಸತತ ಮೂರು ಪಂದ್ಯಗಳಲ್ಲಿ ಸೋತಿರುವ ಸನ್‌ರೈಸರ್ಸ್ ಕಳಪೆ ರನ್‌ರೇಟ್ ಹೊಂದಿದ್ದು, ಪಾಯಿಂಟ್‌ಗಳ ಪಟ್ಟಿಯಲ್ಲಿ ಕೆಳರ್ಧದಲ್ಲಿದೆ. ಆದರೆ 10 ಪಂದ್ಯಗಳಿಂದ 10 ಅಂಕಗಳನ್ನು ಹೊಂದಿರುವ ಎಸ್‌ಆರ್‌ಎಚ್‌ ಪ್ಲೇ-ಆಫ್‌ಗೆ ಪ್ರವೇಶಿಸುವ ಹೋರಾಟದ ಅವಕಾಶವನ್ನು ಜೀವಂತವಾಗಿರಿಸಿಕೊಂಡಿದೆ.

Rohit Sharma ಆಟ ನೋಡಿ ಅಭಿಮಾನಿಗಳು ಖುಷ್ | Oneindia Kannada

Story first published: Friday, May 6, 2022, 21:35 [IST]
Other articles published on May 6, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+