For Quick Alerts
ALLOW NOTIFICATIONS  
For Daily Alerts
 

David Warner: ಮತ್ತೆ ಅಂಗಳಕ್ಕೆ ಮರಳು ಆಸ್ಟ್ರೇಲಿಯಾ ಸ್ಪೋಟಕ ಬ್ಯಾಟರ್‌ ತಯಾರಿ!

ಆಗಸ್ಟ್ 20 ಮಂಗಳವಾರ, ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ಆಸ್ಟ್ರೇಲಿಯಾದ ಆರಂಭಿಕ ಎಡಗೈ ಬ್ಯಾಟರ್ ಡೇವಿಡ್ ವಾರ್ನರ್ ನಿವೃತ್ತಿಯಾಗಿರಾಗಿದ್ದಾರೆ. ಅವರು ವಿದಾಯ ಹೇಳಿದ ಬಳಿಕ ಮತ್ತೆ ಕ್ರಿಕೆಟ್ ಅಂಗಳಕ್ಕೆ ಮರಳಲು ರೆಡಿಯಾಗಿದ್ದಾರೆ.

ಮುಂದಿನ ಎರಡು ವರ್ಷಗಳ ಕಾಲ ಬಿಗ್ ಬ್ಯಾಷ್ ಲೀಗ್ (ಬಿಬಿಸಿ) ಆವೃತ್ತಿಗಳನ್ನು ವಾರ್ನರ್ ಆಡಲಿದ್ದಾರೆ. ಅವರು ಸಿಡ್ನಿ ಥಂಡರ್ ತಂಡದೊಂದಿಗೆ ಎರಡು ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಮೊದಲ ಬಾರಿಗೆ ಬಿಬಿಸಿ ಟೂರ್ನಿಯ ಸಂಪೂರ್ಣ ಋತುವನ್ನು ಆಡಲು ತಯಾರಾಗಿದ್ದಾರೆ. ಈ ವರ್ಷದ ಆರಂಭದಲ್ಲಿ ಅವರು ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದರು.

David Warner prepares to come back to the cricket field

ಆಸ್ಟ್ರೇಲಿಯ ರಾಷ್ಟ್ರೀಯ ತಂಡದೊಂದಿಗಿನ ಬದ್ಧತೆಗಳಿಂದಾಗಿ ಬಿಬಿಸಿ ಟೂರ್ನಿಯೊಂದಿಗೆ ವಾರ್ನರ್ ಅವರ ಹಿಂದಿನ ಅವಧಿಯು ಸೀಮಿತವಾಗಿತ್ತು. ಆದರೆ ಈ ಬಾರಿ ಅಭಿಮಾನಿಗಳು ಟೂರ್ನಿಯುದಕ್ಕೂ ವಾರ್ನರ್ ಆಟವನ್ನು ನೋಡಿ ಕಣ್ತುಂಬಿಕೊಳ್ಳಲು ಕುತೂಹಲದಿಂದ ಕಾಯುತ್ತಿದ್ದಾರೆ.

ಬಿಬಿಸಿ ಶುರು ಮಾಡಿದ್ದು ಯಾವಾಗ?

2011ರಲ್ಲಿ ಆರಂಭವಾದ ಚೊಚ್ಚಲ ಬಿಗ್ ಬ್ಯಾಷ್ ಲೀಗ್ ಟೂರ್ನಿಯಲ್ಲಿ ಡೇವಿಡ್ ವಾರ್ನರ್ ಅವರು ಸಿಡ್ನಿ ಥಂಡರ್ ತಂಡ ಸೇರಿಕೊಂಡರು. ಅಂದಿನಿಂದ ಸಿಡ್ನಿ ಥಂಡರ್ ತಂಡದ ಪ್ರಮುಖ ಆಟಗಾರರಾಗಿದ್ದಾರೆ. ಸಿಡ್ನಿ ಸಿಕ್ಸರ್ಸ್ ವಿರುದ್ಧ ವಾರ್ನರ್ 51 ಎಸೆತಗಳಲ್ಲಿ ಅಜೇಯ 102 ರನ್ ಗಳಿಸುವ ಮೂಲಕ ಥಂಡರ್‌ ಪರ ಮೊದಲ ಶತಕ ಗಳಿಸಿ ಇತಿಹಾಸ ನಿರ್ಮಿಸಿದರು.

ಕಳೆದ ಕೆಲವು ವರ್ಷಗಳಲ್ಲಿ ಅವರು ಥಂಡರ್‌ಗಾಗಿ 10 ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ ಅವರು 37.62 ಸರಾಸರಿ ಮತ್ತು 135.58 ಸ್ಟ್ರೈಕ್ ರೇಟ್‌ನಲ್ಲಿ 301 ರನ್ ಗಳಿಸಿದ್ದಾರೆ. ಈಗ ಮತ್ತೊಮ್ಮೆ ಸಂಪೂರ್ಣ ಆವೃತ್ತಿಯಲ್ಲಿ ವಾರ್ನರ್ ಮಿಂಚಲು ಸಿದ್ಧರಾಗಿದ್ದಾರೆ.

ವಾರ್ನರ್ ಹೇಳಿದ್ದೇನು?

ಸಿಡ್ನಿ ಥಂಡರ್ ಫ್ರಾಂಚೈಸಿಯೊಂದಿಗೆ ಮರು ಸಹಿ ಮಾಡುವ ನಿರ್ಧಾರದ ಬಗ್ಗೆ ವಾರ್ನರ್ ಸಂತಸ ವ್ಯಕ್ತಪಡಿಸಿದ್ದಾರೆ. ಬಳಿಕ ಮಾತನಾಡಿರುವ ಅವರು, 'ನಾನು ಯಾವಾಗಲೂ ಥಂಡರ್‌ನ ಭಾಗವಾಗಿದ್ದೇನೆ. ಕಳೆದ ವರ್ಷ ಥಂಡರ್‌ನಲ್ಲಿರುವ ವೈಬ್ ಇಷ್ಟವಾಗಿದೆ. ಮತ್ತೆ ಹುಡುಗರೊಂದಿಗೆ ಬೆರೆಯಲು ಮತ್ತು ಕ್ರಿಕೆಟ್ ಆಡಲು ಉತ್ಸಾಹದಲ್ಲಿದ್ದೇನೆ.

ಕಳೆದ ಋತುವಿನಲ್ಲಿ ನಮ್ಮೊಂದಿಗಿದ್ದ ಜನರು ನಿಜವಾಗಿಯೂ ಹೆಚ್ಚಿನ ಶಕ್ತಿಯನ್ನು ತಂದರು. ನಾವು ಮೈದಾನದಲ್ಲಿ ಬಹಳಷ್ಟು ತಮಾಷೆಯಾಗಿ ಇರುತ್ತೇವೆ. ಆದರೆ ಮೈದಾನದ ಹೊರಗೆ ನಾವು ಒಬ್ಬರಿಗೊಬ್ಬರು ಚೆನ್ನಾಗಿಯೇ ಇದ್ದೆವು. ಈ ವರ್ಷ ನಾವು ಉತ್ತಮ ಕ್ರಿಕೆಟ್ ಅನ್ನು ಆಡಬಹುದು' ಎಂಬ ಭರವಸೆ ಇದೆ ಎಂದು ಹೇಳಿದ್ದಾರೆ.

ಡೇವಿಡ್ ವಾರ್ನರ್ ಹೊರತಾಗಿ, ಸಿಡ್ನಿ ಥಂಡರ್ ತಂಡದಲ್ಲಿ ಇಂಗ್ಲೆಂಡ್ ವಿಕೆಟ್ ಕೀಪರ್-ಬ್ಯಾಟರ್ ಸ್ಯಾಮ್ ಬಿಲ್ಲಿಂಗ್ಸ್, ಉದಯೋನ್ಮುಖ ಆಟಗಾರ ಆಲಿ ಡೇವಿಸ್ ಮತ್ತು ಕ್ಯಾಮರೂನ್ ಬ್ಯಾಂಕ್ರಾಫ್ಟ್ ಸೇರಿದಂತೆ ಇತರ ಪ್ರಮುಖ ಆಟಗಾರರಿದ್ದಾರೆ.

Story first published: Tuesday, August 20, 2024, 15:53 [IST]
Other articles published on Aug 20, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+